“ಅದ್ದೂರಿ ಸೆಟ್‍ನಲ್ಲಿ ಜನನಿ ಮದುವೆ ಸಂಭ್ರಮ” ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30ಕ್ಕೆ

Published on

402 Views
Advertisement

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರಾವಾಹಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ನಂಬರ್ 1 ಸ್ಥಾನದಲ್ಲಿದೆ. ನಿತ್ಯಾರಾಮ್ ಮುಖ್ಯ ಭೂಮಿಕೆಯಲ್ಲಿರುವ ನಂದಿನಿ, ಬಹುತಾರಾಗಣವಿರುವ ಧಾರಾವಾಹಿ ಎನ್ನುವುದರ ಜೊತೆಗೆ ಸ್ಯಾಂಡಲ್ ವುಡ್ ಜೆಂಟಲ್ ಮ್ಯಾನ್ ರಮೇಶ್ ಅರವಿಂದ್ ನಿರ್ಮಾಣವೂ ಹೌದು.

ಪ್ರತಿವಾರವೂ ಏನಾದರೊಂದು ವಿಶೇಷಕತೆ, ತಿರುವು, ಕುತೂಹಲದೊಂದಿಗೆ ಸಂಚಿಕೆಗಳಿಂದ ಕೂಡಿದ ನಂದಿನಿ ಧಾರಾವಾಹಿಯಲ್ಲಿ ಈಗ ಮತ್ತೊಂದು ಸ್ಪೆಷಲ್ ಕಥೆ ಬರಲಿದೆ.

ಶರಭ ಎಂಬ ಮಾಯಾವಿ, ಅಪಾರಶಕ್ತಿಯುಳ್ಳ ನಾಗಮಣಿಯನ್ನು ಪಡೆಯುವ ದುರುದ್ದೇಶದಿಂದ ನಾಯಕಿ ಜನನಿಯ ವೇಶದಲ್ಲಿ ರಾಮ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ನಾಯಕ ವಿರಾಟನನ್ನು ಮನಸಾರೆ ಪ್ರೀತಿಸುತ್ತಿರುವ ಜನನಿಗೆ ತನ್ನ ಅನುಪಸ್ಥಿತಿಯಲ್ಲಿ ತನ್ನದೇ ನಿಶ್ಚಿತಾರ್ಥ ವಿಷಯ ತಿಳಿದು ದೊಡ್ಡ ಆಘಾತದ ಜೊತೆಗೆ ಅಯೋಮಯವಾಗಿದೆ.

Advertisement

ಈ ಕುಚೋದ್ಯದ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆಹಚ್ಚಲು ಪರದಾಡುತ್ತಿರುವ ಜನನಿಗೆ ಈಗ ವಿರಾಟ್‍ನ ಸಹಕಾರ ಕೂಡ ಒದಗಿಬಂದಿದೆ. ಅವಳ ಜೊತೆಗೂಡಿ ರಾಮ್, ಜನನಿ ಮದುವೆಯೊಳಗೆ ನಕಲಿ ಜನನಿಯ ಬಣ್ಣ ಬಯಲು ಮಾಡಿ ರಾಮ್ ಜೊತೆಗೆ ನಡೆಯುವ ಮದುವೆ
ತಪ್ಪಿಸಲು ಶತಪ್ರಯತ್ನ ಮಾಡಿಸುತ್ತಿದ್ದಾರೆ.


ಅಷ್ಟರಲ್ಲೇ ಜನನಿಯ ಮದುವೆ ದಿನ ಬಂದೇ ಬಿಟ್ಟಿದೆ, ಇದಕ್ಕಾಗಿ ಕಲ್ಯಾಣ ಮಂಟಪದ ಅದ್ದೂರಿಯಾದ ಸೆಟ್ಟನ್ನು ಮಾಗಡಿ ರೋಡ್ ಬಳಿ ನಂದಿನಿ ತಂಡ ನಿರ್ಮಿಸಿದೆ. ಅರಮನೆಯಂತೆ ಕಾಣುವ ಈ ಸೆಟ್, ಹೊರಗಡೆಯಿಂದ ಬಂಗಾರದ ಕೆತ್ತನೆಯ ಕಂಬಗಳು. ಮೇಲ್ಛಾವಣಿಗಳು ಕಣ್ಸೆಳೆಯುತ್ತವೆ. ಒಳಗಡೆ ಆನೆ, ನವಿಲುಗಳ ದೊಡ್ಡ ಪ್ರತಿಮೆಗಳು ವೀಕ್ಷಕರನ್ನು ಸ್ವಾಗತಿಸುತ್ತವೆ. ದೊಡ್ಡ ಹೂಗುಚ್ಚಗಳು ಅಲಂಕರಿಸಿವೆ. ಮಧ್ಯದಲ್ಲಿ ನಿಲ್ಲಿಸಿದ ಆನೆ ಸೊಂಡಿಲಿನಾಕಾರದ ನಾಲ್ಕು ಕಂಬಗಳ ಮೇಲೆ ವಿಶೇಷವಾಗಿ ರಚಿಸಿದ ಕಲ್ಯಾಣ ಮಂಟಪ ಎಲ್ಲರನ್ನೂ ಮೋಡಿಮಾಡಿದೆ.

Advertisement

ಇಂಥ ವಿಜ್ರಂಭಿಸುವ ಮದುವೆಯ ವೇದಿಕೆ ಅಲಂಕರಿಸಿರಲು ಇತ್ತ ಒಲ್ಲದ ಮನಸಲ್ಲಿ ಮದುವೆಗೆ ತಯಾರಾಗುತ್ತಿರುವ ಜನನಿ ಆತಂಕ ಮತ್ತು ನೋವಿನಲ್ಲಿ ಮುಳುಗಿದ್ದಾಳೆ. ಇನ್ನೊಂದೆಡೆ ದುಷ್ಟ ನಂಬೂದರಿ ನಾಗಮಣಿಯನ್ನು ತನ್ನ ಕೈವಶ ಮಾಡಿಕೊಳ್ಳುವ ದುರಾಸೆಯಲ್ಲಿ ಜನನಿಗೆ ಸಹಾಯ ಮಾಡುವ ನೆಪದಲ್ಲಿ ನಾಗಮಣಿಯನ್ನು ಕಲ್ಯಾಣ ಮಂಟಪಕ್ಕೆ ತರಿಸಿದ್ದಾನೆ.

ನಂಬೂದರಿ ಜನನಿಯ ಕಡೆಯ ಪುರೋಹಿತನಾಗಿ ಬಂದರೆ, ಅವನ ಮಗ ಅಷ್ಟಾವಕ್ರ ನಾಗಮಣಿಗೆ ಹೊಂಚು ಹಾಕಿ, ಮದುವೆ ಗಂಡು ರಾಮ್ ಕಡೆಯ ಪುರೋಹಿತನಾಗಿ ಕಲ್ಯಾಣ ಮಂಟಪ ಪ್ರವೇಶಿಸುತ್ತಾನೆ. ನಕಲಿ ಜನನಿಯನ್ನು ಎಲ್ಲರೆದುರು ಬಯಲು ಮಾಡಿ ನಡೆಯುತ್ತಿರುವ ಮದುವೆಯನ್ನು ನಿಲ್ಲಿಸಲು ಜನನಿ ವಿರಾಟ್ ಮಾಡಿದ ಪ್ಲಾನ್ನನ್ನು ತಲೆಕೆಳಗೆ ಮಾಡಿ ಅವರನ್ನು ಅಸಹಾಯಕರನ್ನಾಗಿ ಮಾಡುವ ಶರಬ, ಜನನಿ ಮದುವೆ ನಡೆಸುವಲ್ಲಿ ಸಫಲಳಾಗುತ್ತಾಳಾ?

ವಿರಾಟ್‍ನ ಪ್ರೀತಿಸಿದ ಜನನಿ ತನ್ನ ಪ್ರೀತಿಯನ್ನು ತ್ಯಾಗಮಾಡಿ ರಾಮ್‍ನನ್ನು ಮದುವೆಯಾಗೋ ಸಂದರ್ಭ ಒದಗುವುದೇ ಎಂಬ ಕುತೂಹಲದೊಂದಿಗೆ ಸಾಗುವ ನಂದಿನಿ ಕಥೆ ಪ್ರೇಕ್ಷಕರನ್ನು ಹಲವಾರು ತಿರುವುಗಳೊಂದಿಗೆ ತನ್ನೆಡೆ ಹಿಡಿದಿಡಲಿದೆ.

ಹೀಗೆ ನಾನಾ ತಿರುವುಗಳೊಡನೆ ಸಾಗುತ್ತಿರುವ ನಂದಿನಿ ಧಾರಾವಾಹಿ ನಿಮಗೆ ಪರಿಪೂರ್ಣ ಮನರಂಜನೆ ನೀಡುತ್ತದೆ ಎಂಬುದು ನಂದಿನಿ ತಂಡದ ನಂಬಿಕೆ. ನಿತ್ಯಾರಾಮ್, ವಿನಯ್‍ಗೌಡ, ಶ್ರೀನಿವಾಸ ಪ್ರಭು, ರವಿಭಟ್, ಜಯಶ್ರೀ ಎ ಸ್ರಾಜ್, ರಶ್ಮಿ, ಅನುಪೂವಮ್ಮ ಮೊದಲಾದ ಬಹು ತಾರಾಗಣವಿರುವ ನಂದಿನಿಯ ಈ ವಿಶೇಷ ಸಂಚಿಕೆಗಳು ನಂದಿನಿ ಧಾರಾವಹಿಯಲ್ಲಿ ಸೋಮ-ಶುಕ್ರ ರಾತ್ರಿ 8.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Advertisement

ನಂದಿನಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com