flixOye
Buzz

ನಾಗರಹಾವಿನ ಜಲೀಲ್,ಹಿರಿಯ ನಟ ಅಂಬರೀಶ ಇನ್ನಿಲ್ಲ!

ಕನ್ನಡದ ಹಿರಿಯ ನಟ ಅಂಬರೀಶ
ಇಂದು ಶನಿವಾರ ರಾತ್ರಿ ಬೆಂಗಳೂರಿನ
ವಿಕ್ರಮ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ಅವರಿಗೆ 66 ವರ್ಷ ವಯಸ್ಸಾಗಿತ್ತು.

ಕಿಡ್ನಿ ವೈಫಲ್ಯ ಮತ್ತು ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ ಅವರು 1972 ರ ನಾಗರಹಾವು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.ದಿ.ಪುಟ್ಟಣ್ಣ ಕಣಗಾಲ ಅವರ ನಾಗರಹಾವು ಚಿತ್ರದಲ್ಲಿ ಜಲೀಲ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಮಂಡ್ಯದಿಂದ ಲೋಕಸಭೆಗೆ ಆಯ್ಕೆಗೊಂಡಿದ್ದ ಅವರು ಕೇಂದ್ರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
ಕನ್ನಡ ಚಿತ್ರರಂಗದಲ್ಲಿ ಹಿರಿಯಣ್ಣನಾಗಿದ್ದ ಅಂಬರೀಶ ಅವರು ಅನೇಕ ಬಿಕ್ಕಟ್ಟಿನ ಪ್ರಸಂಗಗಳಲ್ಲಿ
” ಪರಿಹಾರ” ವಾಗಿ ಕಾಣಿಸಿಕೊಳ್ಳುತ್ತಿದ್ದರು.
ಅಂಬರೀಶ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಹಾನಿಯಾದಂತಾಗಿದೆ.

ಸಂಬಂಧಿತ · Related