ನಂದಿನಿಯಲ್ಲಿ ವಾರವಿಡಿ “ನಾಗಪಂಚಮಿ” ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ

Published on

683 Views
Advertisement

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರಾವಾಹಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ನಂಬರ್ 1 ಸ್ಥಾನದಲ್ಲಿದೆ. ನಿತ್ಯಾರಾಮ್ ಮುಖ್ಯಭೂಮಿಕೆಯಲ್ಲಿರುವ ನಂದಿನಿ, ಬಹುತಾರಾಗಣವಿರುವ ಧಾರಾವಾಹಿ ಎನ್ನುವುದರ ಜೊತೆಗೆ ಸ್ಯಾಂಡಲ್ವುಡ್ ಜೆಂಟಲ್ ಮ್ಯಾನ್ ರಮೇಶ್ ಅರವಿಂದ್ ನಿರ್ಮಾಣವೂ ಹೌದು.
ಪ್ರತಿ ವಾರವೂ ಏನಾದರೊಂದು ವಿಶೇಷ ಕತೆ,ತಿರುವು,ಕುತೂಹಲದೊಂದಿಗೆ ಸಂಚಿಕೆ ಮೂಡುತ್ತಿದ್ದ ನಂದಿನಿ ಧಾರಾವಾಹಿಯಲ್ಲಿ ಈಗ ಮತ್ತೊಂದು ಸ್ಪೆಷಲ್ ಕಥೆ ಬರಲಿದೆ.

ನಮ್ಮ ಸಂಸ್ಕೃತಿಯಲ್ಲಿ, ಮನುಷ್ಯ ಹಾಗೂ ಸರ್ಪಕ್ಕೆ ಪೌರಾಣಿಕವಾಗಿ, ಹಾಗೂ ಮಾನಸಿಕವಾಗಿ ಸಾವಿರಾರು ವರ್ಷಗಳಿಂದ ವಿಶೇಷ ಸಂಬಂಧವಿದೆ. ಮನೆ-ಮನೆಗಳಲ್ಲಿ ಆಚರಿಸುವ “ನಾಗಪಂಚಮಿ” ಹಬ್ಬವನ್ನು ‘ನಂದಿನಿʼ ಧಾರಾವಾಹಿಯಲ್ಲೂ ವಿಶೇಷವಾಗಿ ಆಚರಿಸಲಿದ್ದಾರೆ. ಇದೇ ಆಗಸ್ಟ್ 5 ರಿಂದ ವಿಶೇಷ ಸಂಚಿಕೆಗಳು ಶುರುವಾಗಲಿದ್ದು ವೀಕ್ಷಕರಿಗೆ ವಾರವಿಡಿ ರಸದೌತಣವನ್ನೇ ಬಡಿಸುವುದರಲ್ಲಿ ಸಂಶಯವಿಲ್ಲ. ಇದಕ್ಕಾಗಿ ಮಾಗಡಿಯಲ್ಲಿ ನಾಗದೇವರ ದೊಡ್ಡ ಸೆಟ್ ಹಾಕಿದ್ದು, ಅದ್ದೂರಿ ಅಲಂಕಾರದೊಂದಿಗೆ ವಿಜ್ರಂಭಣೆಯಲ್ಲಿ ಆಚರಿಸಲಿದ್ದಾರೆ. ಈ ಕಥೆಯನ್ನು ಚಿತ್ರೀಕರಿಸುವಾಗ ಸ್ವತಃ ನಿತ್ಯಾ ರಾಮ್ ಕೂಡ ನಾಗರಪಂಚಮಿ ವ್ರತದಲ್ಲಿದ್ದದ್ದು ವಿಶೇಷವೇ ಸರಿ.

Advertisement

ಶರಭ ಎಂಬ ಮಾಯಾವಿ, ಅಪಾರ ಶಕ್ತಿಯುಳ್ಳ ನಾಗಮಣಿಯನ್ನು ಪಡೆಯುವ ದುರುದ್ದೇಶದಿಂದ ನಾಯಕಿ ಜನನಿಯ ವೇಷದಲ್ಲಿ ರಾಮ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ನಾಯಕ ವಿರಾಟನನ್ನು ಮನಸಾರೆ ಪ್ರೀತಿಸುತ್ತಿರುವ ಜನನಿಗೆ ತನ್ನ ಅನುಪಸ್ಥಿತಿಯಲ್ಲಿ ತನ್ನದೇ ನಿಶ್ಚಿತಾರ್ಥ ವಿಷಯ ತಿಳಿದು ದೊಡ್ಡ ಆಘಾತದ ಜೊತೆಗೆ ಅಯೋಮಯವಾಗಿದೆ. ಈ ಕುಚೋದ್ಯದ ಹಿಂದೆ ಯಾರ ಕೈವಾಡವಿದೆ ಎಂಬುದು ನಾಗಪಂಚಮಿಯ ದಿನ ನಾಗದೇವತೆಯ ಪವಾಡದಿಂದ ಜನನಿಗೆ ತಿಳಿಯುವುದೇ ಎಂಬುದು ಕುತೂಹಲ.

Advertisement

ಇನ್ನೊಂದೆಡೆ ನಂಬೂದರಿ ಇಡೀ ಸರ್ಪ ಸಂಕುಲವನ್ನೇ ನಾಶ ಮಾಡಿ ನಾಗಮಣಿಯನ್ನು ತನ್ನ ಕೈವಶ ಮಾಡಿಕೊಳ್ಳುವ ದುರಾಸೆಯಲ್ಲಿ ನಾಗಪಂಚಮಿಯಂದು ಮಹಾಸರ್ಪಯಾಗ ಮಾಡಲು ಅನುವಾಗುತ್ತಾನೆ. ಈ ಸರ್ಪಯಾಗದಲ್ಲಿ ಸಾವಿರಾರು ಸರ್ಪಗಳ ಜೊತೆ ವಿಶೇಷ ಶಕ್ತಿಯುಳ್ಳ ಅರ್ಧ ಶಿವನಾಗಿಣಿ ಜನನಿಯನ್ನೇ ಮಹಾಬಲಿ ಕೊಡುವ ಹುನ್ನಾರದಲ್ಲಿದ್ದಾನೆ.

Advertisement

ಇಷ್ಟು ದಿನ ತನ್ನ ನಿಜರೂಪ ಕಳೆದುಕೊಂಡು ಗಿಣಿ ವೇಷದಲ್ಲಿದ್ದ ಜನನಿಯ ಅಕ್ಕ ದೇವಸೇನಾಳಿಗೆ ನಂಬೂದರಿ ನಿಜರೂಪ ಕೊಡುವುದು ನಾಗಪಂಚಮಿ ಸಂಚಿಕೆಗಳ ಮತ್ತೊಂದು ವಿಶೇಷ. ಆದರೆ ಇದರ ಹಿಂದಿರುವ ನಿಜವಾದ ಉದ್ದೇಶ, ದೇವಸೇನಾಳಿಂದಲೇ ಅವಳ ತಂಗಿ ಜನನಿಯನ್ನು ಮಹಾಯಾಗದಲ್ಲಿ ಬಲಿಕೊಡಿಸುವುದು.

ಹೀಗೇ ನಾನಾ ತಿರುವುಗಳೊಡನೆ ಸಾಗುತ್ತಿರುವ ನಂದಿನಿ ಧಾರಾವಾಹಿ ನಿಮಗೆ ಪರಿಪೂರ್ಣ ಮನರಂಜನೆ ನೀಡುತ್ತದೆ ಎಂಬುದು ನಂದಿನಿ ತಂಡದ ನಂಬಿಕೆ. ನಿತ್ಯಾ ರಾಮ್, ವಿನಯ್ ಗೌಡ, ಶ್ರೀನಿವಾಸ ಪ್ರಭು, ರವಿ ಭಟ್, ಜಯಶ್ರೀ ಎಸ್ ರಾಜ್, ರಶ್ಮಿ, ಅನು ಪೂವಮ್ಮ ಮೊದಲಾದ ಬಹುತಾರಾಗಣವಿರುವ ನಂದಿನಿ, ನಾಗಪಂಚಮಿ ವಿಶೇಷ ಸಂಚಿಕೆಗಳು ಇದೇ ಆಗಸ್ಟ್ 5, ಸೋಮವಾರದಿಂದ ಶುರುವಾಗಲಿದೆ.

ನಂದಿನಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com