ಸೆನ್ಸಾರ್ ಮುಗಿಸಿದ ಮುಗಿಲು ಸದ್ಯದಲ್ಲೇ ನಿಮ್ಮ ಮುಂದೆ
ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಮಹಾದಾಸೆಯನ್ನು ಇಟ್ಟು ಕೊಂಡು ಬಣ್ಣ ಬಣ್ಣದ ಕನಸು ಕಂಡಿರುವ ಉದಯೋನ್ಮುಖ ನಿರ್ದೇಶಕ ಅರುಣ್ ಕುಮಾರ್ ಅವರು ತಮ್ಮ ಮೊದಲ ಕನಸಾದ “ಮುಗಿಲು” ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರಲು ಸಿದ್ದತೆ ನಡೆಸಿದ್ದಾರೆ. ಚಿತ್ರವು ಸೆನ್ಸಾರ್ ಮುಗಿಸಿದ್ದು “ಯು” ಸರ್ಟಿಫಿಕೇಟ್ ಪಡೆದುಕೊಂಡಿದೆ. ಬಹುತೇಕ ಹೊಸಬರೇ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವು ಸದ್ಯದಲ್ಲೇ ತೆರೆಗೆ ಬರಲಿದೆ.

Advertisement
Advertisement