ಈ ವಾರ ಬಿಡುಗಡೆಯಾಗುತ್ತಿರುವ ಚಲನ ಚಿತ್ರಗಳು.

Published on

482 Views
Advertisement

ಈ ವಾರ ಬಿಡುಗಡೆ ಡಬಲ್ ಇಂಜಿನ್

ಎಸ್ ಆರ್ ಎಸ್ ಲಾಂಛನದಲ್ಲಿ ತಯಾರಾಗಿರುವ ಮನರಂಜನಾತ್ಮಕ ಚಿತ್ರ `ಡಬಲ್ ಇಂಜಿನ್’ ಈ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಹಿಂದೆ ಬಾಂಬೆ ಮಿಠಾಯಿ ನಿರ್ದೇಶನ ಮಾಡಿ ಯಶಸ್ವಿ ನಿರ್ದೇಶಕ ಎನಿಸಿಕೊಂಡ ಚಂದ್ರ ಮೋಹನ್ ಈ ಚಿತ್ರವನ್ನೂ ಸಂಪೂರ್ಣ ಮನರಂಜನೆಯ ಅಂಶಗಳೊಂದಿಗೆ ತಯಾರು ಮಾಡಿದ್ದಾರೆ.
ಅರುಣ್ ಕುಮಾರ್ ಎನ್, ಶ್ರೀಕಾಂತ್ ಮಠಪತಿ, ಮಂದಾರ ಎ, ಮಧು ಎಸ್ ಆರ್ ಎಸ್ ಶುಂಠಿ ಕಾಫಿ, ಮಂಜುನಾಥ್ ನಂಜಪ್ಪ, ಪದ್ಮ ಕೃಷ್ಣಮೂರ್ತಿ, ರಾಜು ಪಟೇಲ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಉದಯ್ ಕೆ ಮೆಹ್ತಾ ಅವರು ಈ ಚಿತ್ರದ ವಿತರಣೆಯನ್ನು ಮಾಡುತ್ತಿದ್ದಾರೆ.
ಸುಮನ್ ರಂಗನಾಥ್, ಚಿಕ್ಕಣ್ಣ, ಅಶೋಕ್, ಪ್ರಭು, ಪ್ರಿಯಾಂಕ ಮಲ್ನಾಡ್, ಸಾಧು ಕೋಕಿಲ, ದತ್ತಣ್ಣ, ಅಚ್ಯುತ್ ಕುಮಾರ್, ಸುಚೀಂದ್ರ ಪ್ರಸಾದ್ ತಾರಾಗಣದ ಈ ಚಿತ್ರ ಮೂವರು ಯುವಕರು ಹಳ್ಳಿಯಲ್ಲಿ ವ್ಯವಸಾಯವನ್ನು ಬಿಟ್ಟು ಬಹುಬೇಗ ಶ್ರೀಮಂತರಾಗಲು ಹೊರಟು ಅನುಭವಿಸುವ ಸಂದರ್ಭಗಳು ಪ್ರಮುಖವಾದವು.
ಸೂರ್ಯ ಕಿರಣ್ ಛಾಯಾಗ್ರಹಣ, ವೀರ್ ಸಮರ್ಥ ಸಂಗೀತ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

Advertisement

ಇದೇ ವಾರ ಅಥರ್ವ ಬರುತ್ತಿದ್ದಾನೆ

ಅಥರ್ವ ಚಿತ್ರದ ಮೂಲಕ ಅರ್ಜುನ್ ಸರ್ಜಾ ಕುಟುಂಬದಿಂದ ಬರುತ್ತಿರುವ ಮತ್ತೊಬ್ಬ ನಾಯಕ. ಅವರೇ ಪವನ್ ತೇಜ. ಮಹಾ ಸಿಂಹ ಮೂವೀಸ್ ಅಡಿಯಲ್ಲಿ ವಿನಯ್ ಕುಮಾರ್ ಎಚ್ ನಿರ್ಮಾಣ ಮಾಡಿರುವ ಈ ಚಿತ್ರದ ನಿರ್ದೇಶಕರು ಅರುಣ್. ರಕ್ಷಯ್ ಎಸ್ ವಿ ಸಹ ನಿರ್ಮಾಪಕರು.

Advertisement

ಹಲವು ತಾಕತ್ತುಗಳ ಸಂಗಮವನ್ನು ಪ್ರಥಮ ಪ್ರಯತ್ನದಲ್ಲೇ ಪವನ್ ತೇಜ ನಿಭಾಯಿಸುತ್ತಿದ್ದಾರೆ. ಸನಮ್ ಶೆಟ್ಟಿ ಈ ಚಿತ್ರದ ಕಥಾ ನಾಯಕಿ. ರಂಗಾಯಣ ರಘು, ತಾರಾ, ಧರ್ಮೇಂದ್ರ ಅರಸ್, ಯಶ್ವಂತ್ ಶೆಟ್ಟಿ, ಸುಚಿಂದ್ರ ಪ್ರಸಾದ್, ಸಿಲ್ಲಿ ಲಲ್ಲಿ ಶ್ರೀನಿವಾಸ ಗೌಡ ಟಾಮಿ ರವಿ, ನಿಶಾಂತ್, ಚೇತನ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ರಾಘವೇಂದ್ರ ಸಂಗೀತ ನಿರ್ದೇಶನ, ಶಿವ ಸೇನಾ ಛಾಯಾಗ್ರಹಣ, ಮೋಹನ್ ನೃತ್ಯ, ರಾಜು ಕಲಾ ನಿರ್ದೇಶನ, ಸಂತೋಷ್ ಎಂ ಸಂಭಾಷಣೆ, ವಿಜೇತ ಕೃಷ್ಣ ಹಿನ್ನಲೆ ಸಂಗೀತ ಈ `ಅಥರ್ವ’ ಚಿತ್ರಕ್ಕೆ ಒದಗಿಸಿದ್ದಾರೆ.

ಈ ವಾರ ತೆರೆಗೆ `ಆ ಕರಾಳ ರಾತ್ರಿ’

Advertisement

ಡಿ ಪಿಕ್ಚರ್ಸ್ ಹಾಗೂ ಓಂ ಪೆÇ್ರಡಕ್ಷನ್ ಹೌಸ್ ಲಾಂಛನದಲ್ಲಿ ದಯಾಳ್ ಪದ್ಮನಾಭನ್ ಅವರು ನಿರ್ಮಿಸಿರುವ `ಆ ಕರಾಳ ರಾತ್ರಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅವಿನಾಶ್ ಯು ಶೆಟ್ಟಿ ಈ ಚಿತ್ರದ ಸಹ ನಿರ್ಮಾಪಕರು.
ದಯಾಳ್ ಪದ್ಮನಾಭನ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಅವರ ಛಾಯಾಗ್ರಹಣವಿದೆ. ಗಣೇಶ್ ನಾರಾಯಣ್ ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ ಹಾಗೂ ತ್ರಿಭುವನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ನವೀನ್‍ಕೃಷ್ಣ ಸಂಭಾಷಣೆ ಬರೆದಿದ್ದಾರೆ.

ಕಾರ್ತಿಕ್ ಜಯರಾಂ(ಜೆ ಕೆ), ಅನುಪಮ ಗೌಡ, ನವೀನ್ ಕೃಷ್ಣ, ರಂಗಾಯಣ ರಘು, ವೀಣಾಸುಂದರ್, ಸಿಹಿಕಹಿ ಚಂದ್ರು, ಜಯ್ ಶ್ರೀನಿವಾಸ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ವಾರ ತೆರೆಗೆ `ಹಸಿರು ರಿಬ್ಬನ್`

Advertisement

ನಿಸರ್ಗ ಕ್ರಿಯೇಷನ್ಸ್ ಲಾಂಛನದಲ್ಲಿ ಆರ್.ಶಿವಕುಮಾರ್ ಅವರು ನಿರ್ಮಿಸಿರುವ `ಹಸಿರು ರಿಬ್ಬನ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಖ್ಯಾತ ಸಾಹಿತಿ ಡಾ||ಎಚ್.ಎಸ್.ವೆಂಕಟೇಶಮೂರ್ತಿ ಕಥೆ, ಚಿತ್ರಕಥೆ, ಹಾಡು ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಉಪಾಸನ ಮೋಹನ್ ಸಂಗೀತ ನೀಡಿದ್ದಾರೆ. ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣ ಹಾಗೂ ನರಸಿಂಹ ಪ್ರಸಾದ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ನಿಖಿಲ್ ಮಂಜು, ಚೈತ್ರ, ಸುಪ್ರಿಯ ರಾವ್, ಗಿರಿಜಾ ಲೋಕೇಶ್, ಬಿ.ಜಯಶ್ರೀ ಮುಂತಾದವರಿದ್ದಾರೆ.

ಈ ವಾರ ತೆರೆಗೆ `ಲವ್ ಯು 2`

ಪವನ್ ಚಿತ್ರಾಲಯ ಲಾಂಛನದಲ್ಲಿ ಪವನ್ ಕುಮಾರ್ ಅವರು ನಿರ್ಮಿಸಿರುವ `ಲವ್ ಯು 2` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಜಸ್ಟ್ ಬಿ ಕೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಗಂಧರ್ವ ಸಂಗೀತ ನೀಡಿದ್ದಾರೆ. ಜಯಪ್ರಕಾಶ್ ಛಾಯಾಗ್ರಹಣ, ಅರುಣ್ ಥಾಮಸ್ ಸಂಕಲನ, ನಾಗಚೈತನ್ಯ ಸಾಹಸ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಪವನ್ ಕುಮಾರ್, ಕೀರ್ತಿಲಕ್ಷ್ಮೀ, ರಘು ಭಟ್, ಮಿಮಿಕ್ರಿ ಗೋಪಿ, ಕೆಂಪೇಗೌಡ, ರಾಮಸ್ವಾಮಿ ಮುಂತಾದವರಿದ್ದಾರೆ

ಈ ವಾರ ತೆರೆಗೆ `ಟ್ರಂಕ್`

ವಿ ಎಸ್ ಮೀಡಿಯಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಜೇಶ್ ಭಟ್ ಅವರು ನಿರ್ಮಿಸಿರುವ `ಟ್ರಂಕ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರಿಷಿಕಾ ಶರ್ಮ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಕಾರ್ತಿಕ್, ಪ್ರದೀಪ್, ಗಣೇಶನ್ ಸಂಗೀತ ನೀಡಿದ್ದಾರೆ. ಅಲ್ವಿನ್ ಡೊಮಿನಿಕ್ ಹಿನ್ನಲೆ ಸಂಗೀತ, ಭಜರಂಗ್ ಕೊನಧಮ್, ಸಂದೀಪ್ ಅಲುರಿ ಛಾಯಾಗ್ರಹಣ ಹಾಗೂ ಹೇಮಂತ್ ಕುಮಾರ್ ಸಂಕಲನವಿರುವ ಈ ಚಿತ್ರಕ್ಕೆ ಸುಕೇಶ್ ಶೆಟ್ಟಿ ಸಂಭಾಷಣೆ ಬರೆದಿದ್ದಾರೆ. ನಿಹಾಲ್, ವೈಶಾಲಿ ದೀಪಕ್, ಅರುಣ ಬಾಲರಾಜ್, ಸುಂದರಶ್ರೀ ಗುಬ್ಬಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com