ಟ್ರೆಂಡಿಯಾಗಿದೆ ಪಾಪ್ ಕಾರ್ನ್ ಮಂಕಿಟೈಗರ್ ಮಾದೇವ ಸಾಂಗ್..!!!

Published on

547 Views
Advertisement

ಮಾದೇವನ ಜಪಿಸಿದ ಪಾಪ್ ಕಾರ್ನ್ ಮಂಕಿ ಟೈಗರ್ ಮಾದೇವ ಸಾಂಗ್
ಸೂಪರ್ ಹಿಟ್ ಆಗಿದೆ.
ಹೊಸತನಕ್ಕೆ ಮತ್ತೊಂದು ಹೆಸರೇ ಸೂರಿ ಅಲಿಯಾಸ್ ದುನಿಯಾ ಸೂರಿ. ಸೂರಿ ಇದೀಗ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದೊಂದಿಗೆ ಮತ್ತೊಮ್ಮೆ ಮ್ಯಾಜಿಕ್ ಮಾಡ್ತಿದ್ದಾರೆ. ಟೀಸರ್ ರಿಲೀಸ್ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ನಿರ್ದೇಶಕ ಸೂರಿ, ಅದೇ ಗುಂಗಲ್ಲೇ ಇದೀಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ರಿಲೀಸ್ ಮಾಡಿ, ಸೌಂಡ್ ಮಾಡ್ತಿದ್ದಾರೆ. ಮಾದೇವ ಅನ್ನೋ ಕಂಗ್ಲೀಷ್ ಲಿರಿಕ್ಸ್ ಇರೋ ಟ್ರೆಂಡಿ ಹಾಡನ್ನ ರಿಲೀಸ್ ಮಾಡಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಈ ಹಾಡು ಕೇಳಿದವರೆಲ್ಲಾ.. ವಾಟೇ ಸಾಂಗ್ ಅಂತ ಹುಬ್ಬೋರಿಸ್ತಿದ್ದಾರೆ. ಅಪ್ಪಟ ಈ ಜಮಾನದ ಈ ಟ್ರೆಂಡಿಗೆ ಬೇಕಾದ ಸಂಗೀತ ಸಂಯೋಜಿಸಿರೋ ಚರಣ್ ರಾಜ್ ಮತ್ತು ಸೂರಿ ಟಗರು ನಂತ್ರ ಮತ್ತೆ ದೊಡ್ಡ ಹಿಟ್ ಸಾಂಗ್ ನ ಮಾಡಿದ್ದಾರೆ, ಸೈಲೆಂಟಾಗಿ ಸಾಂಗ್ ರಿಲೀಸ್ ಮಾಡಿ ಸಪ್ರೈಸ್ ಕೊಟ್ಟಿರೋ ನಿರ್ದೇಶಕ ಸೂರಿ, ಈ ಹಾಡಿನೊಂದಿಗೆ ಸ್ಯಾಂಡಲ್ವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ.

Advertisement

ಮಾದೇವ ಹಾಡನ್ನು ಚರಣ್ ರಾಜ್ ಕಂಪೋಸ್ ಮಾಡಿದ್ದು, ರಿತ್ವಿಕ್ ಕಾಯ್ಕಿಣಿ ಮತ್ತು ಹನುಮಾನ್ ಕೈಂಡ್ ಸಾಹಿತ್ಯ ಬರೆದಿದ್ದಾರೆ. ಸಂಚಿಂತ್ ಹೆಗ್ಗಡೆ, ಹನುಮಾನ್ಕೈಂಡ್ ಮತ್ತು ಚರಣ್ ರಾಜ್ ಹಾಡಿದ್ದಾರೆ,
ನಿಮಗೆಲ್ಲಾ ಗೊತ್ತಿರೋ ಹಾಗೇ ಪಾಪ್ ಕಾರ್ನ್ ಮಂಕಿ ಟೈಗರ್ ಸ್ಟುಡಿಯೋ 18 ಬ್ಯಾನರ್ ನಲ್ಲಿ ಸುಧೀರ್ ಕೆ.ಎಮ್ ನಿರ್ಮಾಣದಲ್ಲಿ ತಯಾರಾಗ್ತಿದೆ.

Advertisement

ಸೂರಿ ಮತ್ತು ಸುರೇಂದ್ರ ನಾಥ್ ಕಥೆ. ಸೂರಿ ಮತ್ತು ಅಮ್ರಿತಾ ಭಾರ್ಗವ್ ಸಂಭಾಷಣೆ ಬರೆದಿದ್ದು, ಸೂರಿ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ಡಾಲಿ ಧನಂಜಯ ನಾಯಕನಟನಾಗಿ ಕಾಣಿಸಿಕೊಂಡಿದ್ದು, ಸ್ಮಿತಾ ನಿವೇದಿತಾ, ಅಮೃತಾ ಅಯ್ಯಂಗರ್, ಸಪ್ತಮಿ, ಪೂರ್ಣಚಂದ್ರತೇಜಸ್ವಿ,ನವೀನ್, ಕಾಕ್ರೋಚ್ ಸುಧೀ ಪ್ರಮುಖಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೇಖರ್ ಎಸ್. ಛಾಯಾಗ್ರಹಣ, ಚರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಈಗಾಗ್ಲೇ ಟೀಸರ್ನಿಂದ ಹಲ್ ಚಲ್ ಎಬ್ಬಿಸಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ದ ಮಾದೇವ ಹಾಡಿನಿಂದ ಹವಾ ಸೃಷ್ಟಿಯಾಗಿದ್ದು, ಸಿನಿಮಾದ ಮೇಲೂ ಸಾಕಷ್ಡು ನಿರೀಕ್ಷೆಯನ್ನು ಹೆಚ್ಚಿಸಿದೆ. ಸೂರಿ ಮತ್ತೊಮ್ಮೆ ದೊಡ್ಡ ಟ್ರೆಂಡಿ ಹಿಟ್ ಕೊಡೋ ಸೂಚನೆ ಕೊಟ್ಟಿದ್ದಾರೆ,

Advertisement

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com