flixOye
Buzz

ರಿಯಲ್ ಸ್ಟಾರ್ ಉಪೇಂದ್ರ ಅವರಿಂದ “ಮೇಲೊಬ್ಬ ಮಾಯಾವಿ” ಚಿತ್ರದ ಮೊದಲನೆಯ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ

ಕಳೆದ ವರ್ಷ ಕೇರಳದಲ್ಲಿ ನಡೆದ ನೈಜಘಟನೆಯನ್ನೆ ಹೋಲುವ
ಪೋಸ್ಟರ್ ಅನ್ನು ಬಿಡುಗಡೆಮಾಡಿ ಕುತೂಹಲ ಹುಟ್ಟಿಸಿದ್ದ ಚಿತ್ರ ಮೇಲೋಬ್ಬ
ಮಾಯಾವಿ. ಸಂಚಾರಿ ವಿಜಯ್ ಚಕ್ರವರ್ತಿ ಚಂದ್ರಚೂಡ್ ಹಾಗೂ ಅನನ್ಯ
ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೊದಲನೆಯ ಹಾಡೊಂದು ಮೇ 01 ರಂದು ಬಿಡುಗಡೆಯಾಗಲಿದೆ. ವಿಶೇಷವೆಂದರೆ ಕನ್ನಡ ಚಿತ್ರರಂಗದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ದಿ||.ಎಲ್.ಎನ್.ಶಾಸ್ತೀ ಅವರು ಸಂಗೀತ ಸಂಯೋಜನೆ ಮಾಡಿರುವ ಕೊನೆಯ ಚಿತ್ರ ಇದಾಗಿರುವುದು.‌


ಶ್ರೀಕಟೀಲು ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಪುತ್ತೂರು ಭರತ್ ಹಾಗೂ
ತನ್ವಿ ಅಮಿನ್ ಕೊಲ್ಯ ಅವರ ನಿರ್ಮಾಣ ಮಾಡಿರುವ ಈ ಚಿತ್ರವನ್ನು
ಬಿ.ನವೀನ್ ಕೃಷ್ಣ ಎಂಬುವವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಕ್ರವರ್ತಿ ಚಂದ್ರಚೂಡ್ ಅವರು ಬರೆದಿರುವ ಈ ಗೀತೆಯನ್ನು ಕನ್ನಡದ
ಹೆಸರಾಂತ ಗಾಯಕರಾದ ರಾಜೇಶ್ ಕೃಷ್ಣನ್ ಹಾಗೂ ಅನುರಾಧ ಭಟ್ ಅವರು ಹಾಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಈ ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಲಿದ್ದಾರೆ.

ಸಂಬಂಧಿತ · Related