ಕಾವ್ಯಾಂಜಲಿಯಲ್ಲಿ ಮಂಡ್ಯ ರಮೇಶ್ ಸೋಮವಾರದಿಂದ ಶನಿವಾರ ರಾತ್ರಿ ೮.೩೦ಕ್ಕೆ

Published on

471 Views
Advertisement

ಉದಯ ಟಿವಿಯ ಜನಪ್ರಿಯ ಧಾರಾವಾಹಿಯಾದ ಕಾವ್ಯಾಂಜಲಿ ತನ್ನ ವಿಶಿಷ್ಟ ಕಥಾಹಂದರದಿಂದ ಜನರ ಮನಸನ್ನು ಗೆದ್ದು ೩೦೦ ಸಂಚಿಕೆಗಳನ್ನ ಪೂರೈಸಿದೆ.
ಪ್ರಸ್ತುತ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಮೋಸ್ಟ್‌ರೊಮ್ಯಾಂಟಿಕ್‌ ಲವ್‌ಸ್ಟೋರಿ ಅಂದ್ರೆ ಕಾವ್ಯಾಂಜಲಿ ಅನ್ನೋದು ಮನೆಮಾತಾಗಿದೆ. ಆದ್ರೆ ಕೇವಲ ಪ್ರೀತಿಯ ಪರಿಧಿಗಷ್ಟೇ ತನ್ನ ಕಥೆಯನ್ನ ಸೀಮಿತ ಮಾಡಿಕೊಳ್ಳದೆ, ಭಾವನಾತ್ಮಕವಾಗಿ ಸಹ ಸಂಬಂಧಗಳ ಸೂಕ್ಷ್ಮತೆಯನ್ನೂ ಎಳೆಎಳೆಯಾಗಿ ಬಿಚ್ಚಿಟ್ಟು ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಮೊದಲಿಂದಲೂ ಹೊಸ ಹೊಸ ಪ್ರಯತ್ನಗಳಿಗೆ ಹೆಸರಾಗಿರುವಂತ ತಂಡ ಗೋವಾ ನಂತರ ಮೊನ್ನೆ ಮೊನ್ನೆಯಷ್ಟೆ “ರೆಟ್ರೋ” ಸ್ಟೈಲ್ನಲ್ಲಿ ಸಣ್ಣ ಝಲಕ್‌ಕೂಡಾ ನೀಡಿತ್ತು. ಇದಕ್ಕಾಗಿ ಪಾತ್ರಧಾರಿಗಳಾದ ದರ್ಶಕ್ ಗೌಡ ಮತ್ತು ವಿದ್ಯಶ್ರೀ ಜಯರಾಂ ವೈಯಕ್ತಿಕ ಆಸಕ್ತಿವಹಿಸಿ ಸಂಪೂರ್ಣ ತಯಾರಿಯೊಂದಿಗೆ ದೃಶ್ಯಕ್ಕೆ ಜೀವ ತುಂಬಿದ್ದರು. ಇದೀಗ ಮಡಿಕೇರಿಯ ನಿಸರ್ಗದ ಮಡಿಲಲ್ಲಿ ಚಳಿ ಗಾಳಿ ಮಳೆಯ ನಡುವೆಯೂ ಯಶಸ್ವಿಯಾಗಿ ಶೂಟಿಂಗ್‌ಮುಗಿಸಿದೆ.

ಕಸ್ತೂರಿ ನಿವಾಸದಲ್ಲಿ ಸಪ್ತಪದಿ ಸಂಭ್ರಮ ಸೋಮವಾರದಿಂದ ಶನಿವಾರ ಸಂಜೆ ೭ಕ್ಕೆ

Advertisement

ಈಗ ಕಥೆಯ ಪ್ರಮುಖ ಪಾತ್ರವಾದ ಸುಶಾಂತ್‌ಜನ್ಮರಹಸ್ಯವನ್ನ ಬೇಧಿಸೋಕೆ ನಾಯಕಿ ಅಂಜಲಿ ಪಣ ತೊಟ್ಟು ಗಂಡನ ಜೊತೆ ಮಡಿಕೇರಿಗೆ ಪಯಣ ಬೆಳೆಸಿದ್ದಾಳೆ. ಸ್ನೇಹಕ್ಕೆ ಕಟ್ಟುಬಿದ್ದು ಸುಶಾಂತ್‌ಕೈ ಹಿಡಿದ ಅಂಜಲಿ ಮುಂಗಾರಿನ ಚಳಿಯಲ್ಲಿ ಸುಶಾಂತ್‌ಮೇಲೆ ಪ್ರೀತಿ ಮಳೆ ಸುರಿಸೋಕೆ ತಯಾರಾಗಿದ್ದಾಳೆ. ಕಾವ್ಯಾಂಜಲಿ “ಪ್ರೀತಿ ಮುಂಗಾರು” ಪ್ಯಾಕೇಜಲ್ಲಿ ಮತ್ತೊಂದು ಸರ್ಪ್ರೈಸ್‌ಇದೆ. ಅದು ಮಂಡ್ಯ ರಮೇಶ್.ವಿಭಿನ್ನ ಪಾತ್ರಗಳಿಗೆ ಜೀವ ತುಂಬಿರುವಂತಹ ನಟ ಮಂಡ್ಯ ರಮೇಶ್‌ಇಲ್ಲಿ ಜೋಡಿ ಜೀವಗಳ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದ್ದಾರೆ. ಹಿಂದೆಂದೂ ಮಾಡದಂತ ಪಾತ್ರವಿದು ಅಂತಾರೆ ಈ ಪ್ರಬುದ್ಧ ನಟ. ಮುಪ್ಪಿನ ಅಂಚಲ್ಲಿ ತನ್ನ ಕಡೆಯ ದಿನಗಳನ್ನ ಕಳೆಯುತ್ತಿರೊ ಕಾರ್ಯಪ್ಪ ವೃತ್ತಿಯಿಂದ ಒಬ್ಬ ಫೋಟೋಗ್ರಾಫರ್‌ಆಗಿರುತ್ತಾರೆ. ಕಥೆಯಲ್ಲಿ ಅಂಜಲಿ ಹುಡುಕುತ್ತಿರೊ ಫೋಟೋವೊಂದರ ಹಿನ್ನೆಲೆಯನ್ನ ಪರಿಚಯಿಸೋದು ಇದೇ ಕಾರ್ಯಪ್ಪ. ಏನಿದು ನಂಟು? ಅಸಲಿಗೆ ಕಾರ್ಯಪ್ಪನಿಗೆ ತಿಳಿದಿರೊ ಸತ್ಯ ಅಂಜಲಿಗೆ ತಿಳಿಯುತ್ತಾ? ಸುಶಾಂತ್‌ಜನ್ಮರಹಸ್ಯ ಅವನಿಗೆ ತಿಳಿಯುತ್ತಾ? ಅನ್ನೊ ಸಾಕಷ್ಟು ಕುತೂಹಲಕಾರಿ ಸಂಗತಿಗಳನ್ನ ಹೊತ್ತು ತರ್ತಿದೆ ಕಾವ್ಯಾಂಜಲಿ ಧಾರಾವಾಹಿ.
ಮಂಡ್ಯ ರಮೇಶ್‌ ವಿಶೇಷ ಸಂಚಿಕೆಗಳು ಸೋಮವಾರದಿಂದ ಶನಿವಾರ ರಾತ್ರಿ ೮.೩೦ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ..

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com