ಶೂಟಿಂಗ್ ಮುಗಿಸಿ ತೆರೆಗೆ ಬರಲು ಸಿದ್ಧವಾದ ಮನಸಾಗಿದೆ

Published on

653 Views
Advertisement

ನಾಯಕನ ಪರಿಚಯದ ಹಾಡು ಸಿದ್ಧಪಡಿಸಿ ರಿಲೀಸ್ ಮಾಡಿ ಸದ್ದು ಮಾಡಿದ್ದ ‘ಮನಸಾಗಿದೆ’ ಸಿನಿಮಾ ತಂಡ ಇದೀಗ ಶೂಟಿಂಗ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗುತ್ತಿದೆ. ಮನಸಾಗಿದೆ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿರುವ ಅಭಯ್ ಈ ಮೊದಲು ‘ಬರ್ತ’ ಎಂಬ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದ್ದರು. ಇದೀಗ ಮೊದಲ ಬಾರಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ತಯಾರಿ ಕೂಡ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಂತಿದ್ದಾರೆ. ಇವರಿಗೆ ನಾಯಕಿಯಾಗಿ ಅಧಿರಾ ಅಭಿನಯಿಸಿದ್ದು, ಮತ್ತೋರ್ವ ನಾಯಕಿಯಾಗಿ ಮೇಘಶ್ರೀ ನಟಿಸಿದ್ದಾರೆ. ಈ ಚಿತ್ರವನ್ನು ಶ್ರೀನಿವಾಸ ಶಿಡ್ಲಘಟ್ಟ ನಿರ್ದೇಶನ ಮಾಡಿದ್ದಾರೆ.

Advertisement

ನಿರ್ಮಾಪಕ ಎಸ್.ಚಂದ್ರಶೇಖರ್ ಈ ಚಿತ್ರವನ್ನು ಮಗನನ್ನು ಹೀರೋ ಮಾಡುವುದಕ್ಕಾಗಿ ನಿರ್ಮಿಸಿದ್ದು, ಚಿತ್ರದಲ್ಲೊಂದು ಪಾತ್ರಕೂಡ ಮಾಡಿದ್ದಾರೆ. ಇವರ ಚಿಕ್ಕ ಮಗ ತೇಜಸ್ ಕೂಡ ನಾಯಕಿಯ ತಮ್ಮನಾಗಿ ಕಾಮಿಡಿ ಪಾತ್ರ ಮಾಡಿದ್ದಾರೆ. ಇದೇ ವರ್ಷ ಮಾರ್ಚ್ ನಲ್ಲಿ ಶುರುವಾದ ಈ ಚಿತ್ರದ ಜರ್ನಿ ಇದೀಗ ಶೂಟಿಂಗ್ ಮುಗಿಸಿಕೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ನಿರ್ಮಾಪಕರು ಮೂರು ಹಂತದಲ್ಲಿ ಬೆಂಗಳೂರು ಚಿಕ್ಕಮಗಳೂರನಲ್ಲಿ 40 ದಿನಗಳ ಕಾಲ ಶೂಟಿಂಗ್ ಮಾಡಿದ್ದು, ಮೊದಲು ಬೆಂಗಳೂರು ಮಡಿಕೇರಿ ಎಂದು ಪ್ಲ್ಯಾನ್ ಹಾಕಿಕೊಂಡಿದ್ದೇವು. ಆದರೆ, ಮಡಿಕೇರಿಯಲ್ಲಿ ಮಳೆ ಹೆಚ್ಚಾಗಿ ಭೂ ಕುಸಿತ ಆಗುತ್ತಿತ್ತು. ಹಾಗಾಗಿ ಚಿಕ್ಕಮಂಗೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕರು ಚಿತ್ರವನ್ನು ಚೆನ್ನಾಗಿ ಮಾಡಿದ್ದಾರೆ. ಇದರಲ್ಲಿ ಎರಡು ಫೈಟ್ ಎರಡು ಚೇಸ್ ಇದ್ದು, ತ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಮಾಡಿದ್ದಾರೆ. ಒಂದು ಫೈಟನ್ನು ರಿಯಲ್ ಮಳೆಯಲ್ಲಿಯೇ ಮಾಡಲಾಗಿದೆ. ಇದು ಮಗನಿಗಾಗಿ ಮಾಡಿದ ಚಿತ್ರ ಡಿಫರೆಂಟ್ ಆಗಿ ಬಂದಿದೆ.

Advertisement

ರಾಜು ಕೊರಿಯೋಗ್ರಾಫಿ ಚೆನ್ನಾಗಿದ್ದು, ಹಾಡುಗಳು ಕೂಡ ಅಷ್ಟೇ ಸುಂದರವಾಗಿ ಬಂದಿವೆ. ಚಿತ್ರದ ನಾಲ್ಕು ಗೀತೆಗಳಿಗೆ ಮಾನಸ ಹೊಳ್ಳ ಸಂಗೀತ ನಿರ್ದೇಶನವಿದೆ. ಮಗ ನನ್ನ ಕನಸಿಗಿಂತ ಅದ್ಭುತವಾಗಿ ನಟನೆ ಮಾಡಿದ್ದಾನೆ. ಸದ್ಯ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ನಡಿತಾ ಇದ್ದು, ಜನವರಿ 15ರ ನಂತರ ರಿಲೀಸ್ ಮಾಡುವ ಪ್ಲ್ಯಾನ್ ಇದೆ ಎನ್ನುವರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಶ್ರೀನಿವಾಸ ಶಿಡ್ಲಘಟ್ಟ ‘ ಮೊದಲು ಒಂದೇ ಶೆಡ್ಯೂಲ್ ಪ್ಲ್ಯಾನ್ ಮಾಡಿದ್ವಿ ಆಗಲಿಲ್ಲ. ಅದೃಷ್ಟದಿಂದ ಬೆಂಗಳೂರು, ಚಿಕ್ಕಮಗಳೂರು ಶೂಟ್ ಮಾಡುವಾಗ ಪರಿಸರ ತುಂಬಾ ಸಹಾಯ ಮಾಡಿದೆ.

ಮೂರು ದಿನ ಸತತ ಮಳೆ ಬಂದು ಫೈಟ್‌ಗೆ ಸಹಾಯ ಮಾಡಿತು. ಅಭಯ್ ಅದೃಷ್ಟವಂತ ಲವ್‌ ಸಬ್ಜೆಕ್ಟ್ ಇದ್ದು, ಶ್ರಮ ಹಾಕಿ ಸಿನಿಮಾ ಮಾಡಿದ್ದಾರೆ. ಅಥಿರಾ ಕೊಡ ಚೆನ್ನಾಗಿ ಮಾಡಿದ್ದಾರೆ. ಇದು ಮುಂಗಾರುಮಳೆ ರೆಂಜ್‌ನಲ್ಲಿ ಛಾಯಾಗ್ರಹಣ ಇದೆ ಒಂದು ಒಳ್ಳೆ ಪ್ರಯತ್ನ ಮಾಡಲಾಗಿದೆ. ಡಿಫರೆಂಟ್ ಲವ್ ಸ್ಟೋರಿ ಒಳ್ಳೆ ಎಲಿಮೆಂಟ್ ಇದ್ದು, ಮಾನವಿಯತೆ ಮತ್ತು ಪ್ರೀತಿ ನಡುವೆ ನಡೆವ ಸಂಘರ್ಷ ಈ ಸಿನಿಮಾ’ ಎನ್ನುವರು. ಪ್ರೀತಿ ಅನ್ನೋದು ದೈವದತ್ತವಾದ ಕೊಡುಗೆ, ಚಿತ್ರದ ನಾಯಕ ಆ ಪ್ರೀತಿಯನ್ನು ಹುಡುಕಿಕೊಂಡು ಹೋಗ್ತಾನೆ. ಆಗ ಇನ್ನೊಂದು ಪ್ರೀತಿ ಆತನಿಗೆ ಎದುರಾಗುತ್ತೆ. ಆತನ ಹುಡುಕಾಟದಲ್ಲಿ ತಾನು ಅರಸಿಕೊಂಡು ಹೋದ ಪ್ರೀತಿ ಸಿಗುತ್ತಾ, ಅಥವಾ ಎದುರಾದ ಪ್ರೀತಿ ಒಲಿಯುತ್ತಾ ಎನ್ನುವುದೇ ‘ಮನಸಾಗಿದೆ’ ಚಿತ್ರದ ಕಥಾಹಂದರ.

Advertisement

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com