flixOye
Buzz

ಬೆಳ್ಳಿ ಪರದೆಯ ಮೇಲೆ “ಮಾಲ್ಗುಡಿ ಡೇಸ್” ನಾಯಕನಾಗಿ ಚಿನ್ನಾರಿಮುತ್ತಾ

ಕಿರುತೆರೆಯ ಇತಿಹಾಸದಲ್ಲಿ ದಾಖಲೆ ಬರೆದಿದ್ದ ಧಾರಾವಾಹಿ ಮಾಲ್ಗುಡಿ ಡೇಸ ಕರಾಟೆ ಕಿಂಗ್ ಶಂಕರ್ ನಾಗ್ ಅವರು ಖ್ಯಾತ ಕಾದಂಬರಿಕಾರ ಆರ್​.ಕೆ ನಾರಾಯಣ್ ಅವರು ಬರೆದಿದ್ದ ಕಥೆಗಳನ್ನು ಮಾಲ್ಗುಡಿ ಡೇಸ್ ಧಾರಾವಾಹಿ ಮಾಡಿ ಕಿರುತೆರೆಯಲ್ಲಿ ಪ್ರದರ್ಶನ ಕಂಡು ಭಾರೀ ಜನಪ್ರಿಯತೆಯನ್ನು ಗಳಿಸಿದ್ದಲ್ಲದೇ ಶಂಕರ್ ನಾಗ್ ಅವರಿಗೆ ದೇಶವ್ಯಾಪ್ತಿ ಜನಪ್ರಿಯತೆಯನ್ನು ತಂದು ಕೊಟ್ಟಿತ್ತು. ಈಗ ಅದೇ ಮಾಲ್ಗುಡಿ ಡೇಸ್ ಕಥೆಯನ್ನು ದೊಡ್ಡ ಪರದೆಯ ಮೇಲೆ ತರುತ್ತಿದ್ದಾರೆ. ‘ಅಪ್ಪೇ ಟೀಚರ್’ ಎಂಬ ಸೂಪರ್ ಹಿಟ್ ತುಳು ಸಿನಿಮಾ ಮಾಡಿದ್ದ ನಿರ್ದೇಶಕ ಕಿಶೋರ್ ಮೂಡ ಬಿದ್ರೆ ಹಾಗೂ ನಿರ್ಮಾಪಕ ’ಕೆ.ರತ್ನಾಕರ್ ಕಾಮತ್ ಅವರುಗಳು ಮಾಲ್ಗುಡಿ ಡೇಸ್ ಸಿನಿಮಾ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ನಾಯಕನಾಗಿ ಚಿನ್ನಾರಿ ಮುತ್ತಾ ವಿಜಯ್ರ ರಾಘವೇಂದ್ರ ಅವರು ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಶೀರ್ಷಿಕೆ ಪೋಸ್ಟರ್ ಅನ್ನು ನೆನ್ನೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಮಾಲ್ಗುಡಿ ಡೇಸ್ ಚಿತ್ರದ ಚಿತ್ರೀಕರಣ ಶುರುವಾಗಲಿದೆಯಂತೆ. ಶಂಕರ್ ನಾಗ್ ಅವರಿಗೆ ಆ ಮಾಲ್ಗುಡಿ ಡೇಸ್ ಜನಪ್ರಿಯತೆಯನ್ನು ತಂದುಕೊಟ್ಟಂತೆ ಈ ಮಾಲ್ಗುಡಿ ಡೇಸ್ ವಿಜಯ್ ರಾಘವೇಂದ್ರ ಅವರಿಗೆ ಮತ್ತೊಂದು ಬ್ರೇಕ್ ನೀಡಲಿ ಎಂದು ಶುಭಹಾರೈಸೋಣ.

ಸಂಬಂಧಿತ · Related