ಮಲಯಾಳಂ ಹಾಡುಗಾರ ಮಧು ಬಾಲಕೃಷ್ಣನ್ ಮತ್ತೊಮ್ಮೆ ಚಂದನವನಕ್ಕೆ…!!

Published on

483 Views
Advertisement

‘ಮೇಲೊಬ್ಬ ಮಾಯಾವಿ’ ಚಿತ್ರದ ಮೂಲಕ ಮತ್ತೊಮ್ಮೆ ತನ್ನ ಕಂಠ ಸಿರಿಯಿಂದ ಮೋಡಿ ಮಾಡಲು‌ ಹೊರಟಿದ್ದಾರೆ ಮಲಯಾಳಂನ ಜನಪ್ರಿಯ ಹಾಡುಗಾರ ಮಧು ಬಾಲಕೃಷ್ಣನ್. ಇವರ ಕಂಠಸಿರಿಯಲ್ಲಿ ‘ಜಗದ ಜೀವಿಗಳಿಗೆ ಚಾವಿ ಹಾಕಿ ಕುಂತವ್ನೆ’ ಹಾಡು ಮೂಡಿ ಬಂದಿದೆ.
ಹಾಡುಗಾರ ಮಧು ಬಾಲಕೃಷ್ಣನ್,ಕನ್ನಡ ಚಿತ್ರಗಳಿಗೆ ಹಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ‘ಆಪ್ತ ಮಿತ್ರ’,ಅಂಬರೀಶ್​, ಸಿಂಹಾದ್ರಿ, ಬಂಧು ಬಳಗ, ಅರಮನೆ,ಅನಾಥರು,ಚಂದಾ, ಮನ್ಮಥ, ದತ್ತ, ತಂಗಿಗಾಗಿ, ತವರಿನ ಸಿರಿ, ಗಂಡುಗಲಿ ಕುಮಾರ ರಾಮ, ಕೇರ್ ಆಫ್ ಫುಟ್​ಪಾತ್, ಅಣ್ಣ ತಂಗಿ ಸೇರಿದಂತೆ ಕೆಲ ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. ಮತ್ತೊಂದು ವಿಶೇಷ ಏನಂದ್ರೆ, ರಾಜಮೌಳಿ ಅವರ ‘ಬಾಹುಬಲಿ’ ಚಿತ್ರದಲ್ಲಿ ಇವರದೆ ಪ್ರಮುಖ ಕಂಠ.

ಮಧು ಬಾಲಕೃಷ್ಣನ್ ಮಲಯಾಳಂ ಭಾಷಿಕರಾಗಿದ್ದರೂ ಕನ್ನಡವನ್ನು ಚಂದವಾಗಿ ಉಚ್ಛಾರಣೆ ಮಾಡುತ್ತಾರೆ. ಇವರ ಕಂಠ ಸಿರಿಯ ಹಾಡು ‘ಮೇಲೊಬ್ಬ ಮಾಯಾವಿ’ ಚಿತ್ರದಲ್ಲಿ ಮೂಡಿ‌ಬರಲಿದ್ದು, ಚಿತ್ರತಂಡ ಸದ್ಯದಲ್ಲೇ ಆ ಹಾಡನ್ನು ಬಿಡುಗಡೆ ಮಾಡಲಿದೆ. ಈ ಹಾಡಿಗೆ ಪತ್ರಕರ್ತ ಚಂದ್ರ ಚೂಡ್ ಗೀತ ರಚನೆ ಮಾಡಿದ್ದು,

ಕಥೆ, ಚಿತ್ರಕಥೆ ಬರೆದು ನಟನೆ ಸಹ ಮಾಡಿದ್ದಾರೆ ಚಂದ್ರಚೂಡ್ ಚಕ್ರವರ್ತಿ. ಈ ಚಿತ್ರದಲ್ಲಿ ಸಂಚಾರಿ ವಿಜಯ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ‘ಮೇಲೊಬ್ಬ ಮಾಯಾವಿ’ ಸಿನಿಮಾ ಪತ್ರಕರ್ತ ನವೀನ್ ಕೃಷ್ಣ ಅವರ ಚೊಚ್ಚಲ ನಿರ್ದೇಶನದ ಚಿತ್ರ. ದಿವಗಂತ ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರೀ ಅವರ ಕೊನೆಯ ಸಿನಿಮಾ ಇದಾಗಿದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com