‘ಗೀತಾ’ ಚಿತ್ರಕ್ಕೆ ಮಲಯಾಳಂ ನಟಿ ಎಂಟ್ರಿ

ಪಾರ್ವತಿ ಮೆನನ್, ಭಾಮಾ, ಭಾವನ ಹೀಗೆ ಸಾಕಷ್ಟು ಮಲಯಾಳಂ ನಟಿಯರು ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ಅವರ ಸಾಲಿನಲ್ಲಿ ಈಗ ಮಲಯಾಳಂ ನಟಿ ಪಾರ್ವತಿ ಅರುಣ್ ಕೂಡ ಒಬ್ಬರು. ಪಾರ್ವತಿ ಅರುಣ್ ಗಣೇಶ್ ಅಭಿನಯದ ‘ಗೀತಾ’ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಸಿನಿಮಾದಲ್ಲಿ ಮೂರು ನಾಯಕಿಯರ ಪೈಕಿ ಪಾರ್ವತಿ ಅರುಣ್ ಒಬ್ಬರು. ಉಳಿದ ಎರಡು ನಾಯಕಿಯರ ಆಯ್ಕೆ ಇನ್ನು ನಡೆಯಬೇಕಿದೆ. ‘ರಾಜ್ಕುಮಾರ್’ ಸೇರಿದಂತೆ ಅನೇಕ ಸಿನಿಮಾಗಳಿಗೆ ಕೆಲಸ ಮಾಡಿ ಅನುಭವವಿರುವ ವಿಜಯ್ ನಾಗೇಂದ್ರರವರು ‘ಗೀತಾ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಇದು ಇವರ ನಿರ್ದೇಶನದ ಮೊದಲ ಸಿನಿಮಾವಾಗಿದೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತಾ ನೀಡಲಿದ್ದಾರೆ.
Advertisement
Advertisement