ನೀನಾಸಂ ಸತೀಶ್ ನಾಯಕರಾಗಿ ನಟಿಸುತ್ತಿರುವ ” ಅಶೋಕ ಬ್ಲೇಡ್” ಚಿತ್ರದ ಮುಹೂರ್ತ

Published on

572 Views
Advertisement

ನೀನಾಸಂ ಸತೀಶ್ ನಾಯಕರಾಗಿ ನಟಿಸುತ್ತಿರುವ ” ಅಶೋಕ ಬ್ಲೇಡ್” ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಪಿ.ಶೇಷಾದ್ರಿ ಆರಂಭಫಲಕ ತೋರಿದರು. ಟ.ಎನ್.ಸೀತಾರಾಂ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರರಂಗದ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ನಾನು ಹಲವಾರು ವರ್ಷಗಳಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪಿ. ಶೇಷಾದ್ರಿ, ಟಿ.ಎನ್​. ಸೀತಾರಾಂ ಅವರ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಂಚಿಕೆ ನಿರ್ದೇಶಕ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದ್ದೇನೆ. ಈ ಸಂದರ್ಭದಲ್ಲಿ ವರ್ಧನ್​ ಮತ್ತು ದೀಪಕ್​ ನಾಯ್ಡು ಅವರ ಪರಿಚಯವಾಯಿತು. ಮೂರು ಜನ ಸೇರಿ 10 ವರ್ಷಗಳ ಹಿಂದೆ ಒಂದು ಪ್ರೊಡಕ್ಷನ್​ ಹೌಸ್​ ಪ್ರಾರಂಭಿಸಿ, ಹಲವು ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದೇವೆ. ಒಂದು ಚಿತ್ರ ನಿರ್ಮಾಣ ಮಾಡುವ ಯೋಚನೆ ಇತ್ತು. ಟಿ.ಕೆ. ದಯಾನಂದ್​ ಅವರ ಹತ್ತಿರ ಒಂದೊಳ್ಳೆಯ ಕಥೆ ಇದೆ ಎಂದು ಗೊತ್ತಾಯಿತು. ಕಥೆ ಕೇಳಿದಾಗ ಬಹಳ ಇಷ್ಟವಾಯಿತು. ಇದೇ ನಮ್ಮ ಸಂಸ್ಥೆಯ ಮೊದಲ ಚಿತ್ರವಾಗಬೇಕು ಎಂದು ತೀರ್ಮಾನಿಸಿ ಚಿತ್ರ ಮಾಡುತ್ತಿದ್ದೇವೆ. ಸತೀಶ್​ ನೀನಾಸಂ ಸಹ ಕೈ ಜೋಡಿಸಿದ್ದಾರೆ. ವರ್ತಕರು ಮತ್ತು ಕಾರ್ಮಿಕರ ನಡುವೆ ನಡೆಯುವ ಯುದ್ಧದ ಕುರಿತು ಈ ಚಿತ್ರಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ನಿರ್ದೇಶಕ ವಿನೋದ್ ದೋಂಡಾಳೆ ಮಾಹಿತಿ ನೀಡಿದರು.

Advertisement

ದಿನ ಬೆಳಗಾದರೆ ಹಲವು ನಿರ್ದೇಶಕರು ಬಂದು ಕಥೆ ಹೇಳುತ್ತಾರೆ. ಆದರೆ, ಈ ಕಥೆ ಹುಡುಕಿದ್ದು ನಾನೇ. ಸ್ನೇಹಿತರ ಮೂಲಕ ದಯಾನಂದ್​ ಅವರ ಬಳಿ ಒಳ್ಳೆಯ ಕಥೆ ಇದೆ ಎಂದು ಕೇಳಿದೆ. ತರಿಸಿ ಓದಿದೆ. ತಕ್ಷಣ ಈ ಚಿತ್ರವನ್ನು ಮಾಡಬೇಕು ಎಂದನಿಸಿತು. ಇದೊಂದು ದೊಡ್ಡ ಕ್ಯಾನ್ವಾಸ್​ನ ಚಿತ್ರ. ಒಂದು ಐತಿಹಾಸಿಕ ಯುದ್ಧವಿದೆ. 10 ನಿಮಿಷಗಳ ಕಾಲ ಸಾವಿರ ಜನ ಭಾಗವಹಿಸುವ ಯುದ್ಧ. ಅದನ್ನು ವಿನೋದ್​ ಸಮರ್ಥವಾಗಿ ತೆರೆಯ ಮೇಲೆ ತರುತ್ತಾರೆ ಎಂಬ ನಂಬಿಕೆ ಇದೆ. ಈ ಯುದ್ಧದಲ್ಲಿ ಒಬ್ಬ ಸೂಪರ್​ ಸ್ಟಾರ್​ ಕಾಣಿಸಿಕೊಳ್ಳಲಿದ್ದಾರೆ. ಉತ್ತರಖಾಂಡ, ಮುಂಬೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ನಾಳೆಯಿಂದ ಚಿತ್ರೀಕರಣ ಶುರುವಾಗಲಿದ್ದು, ನಾನು ಜುಲೈನಲ್ಲಿ ಚಿತ್ರತಂಡ ಸೇರಿಕೊಳ್ಳಲಿದ್ದೇನೆ ಎನ್ನುತ್ತಾರೆ ನೀನಾಸಂ ಸತೀಶ್.

Advertisement

ಮೊದಲ ಬಾರಿಗೆ ಇನ್​ಸ್ಪೆಕ್ಟರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹಳ ಒಳ್ಳೆಯ ಪಾತ್ರ ಇದು. ಚಿತ್ರವು ಎರಡು ಕಾಲಘಟ್ಟದಲ್ಲಿ ನಡೆಯಲಿದೆ. ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದರು ಕಾವ್ಯ ಶೆಟ್ಟಿ.

ದಯಾನಂದ್ ಅವರು ಈ ಕಥೆ ಹೇಳಿದ ತಕ್ಷಣ ನಮಗೆ ಹಾಗೂ ನಿರ್ದೇಶಕ ವಿನೋದ್ ಅವರಿಗೆ ಹಿಡಿಸಿತು. ಇದೇ ಕಥೆಯನ್ನು ಸಿನಿಮಾ ಮಾಡಲು ತೀರ್ಮಾನಿಸಿದ್ದೆವು. ಇದೊಂದು ಬಿಗ್ ಬಜೆಟ್ ಸಿನಿಮಾ ಆಗಲಿದೆ ಅಂದರು ನಿರ್ಮಾಪಕ ನರಹರಿ.

Advertisement

ನನಗೆ ಈ ಕಥೆ ಬಹಳ ವಿಶೇಷ. ಮೈಸೂರು ಸೀಮೆಯಲ್ಲಿ 70ರ ದಶಕದಲ್ಲಿ ನಡೆದ ಒಂದು ಘಟನೆ ಬಗ್ಗೆ ಕೇಳಿದ್ದೆ. ಅದು ಎಲ್ಲೂ ದಾಖಲಾಗಿಲ್ಲ. ಎಲ್ಲೂ ಅದರ ಬಗ್ಗೆ ಉಲ್ಲೇಖವಿಲ್ಲ. ಕೊನೆಗೆ ಆ ಕಥೆಯ ವಿವರಗಳನ್ನು ಹುಡುಕಿಕೊಂಡು ಹೋದಾಗ ಹಲವು ಮಹತ್ವದ ವಿಷಯಗಳು ಗೊತ್ತಾಯಿತು. ಇದು ಕನ್ನಡ ನೆಲದ ವೀರರ ಕಥೆ. ಯುದ್ಧ ಎಂದರೆ ಯುದ್ಧಭೂಮಿ ಅಥವಾ ಸಾಮ್ರಾಜ್ಯ ವಿಸ್ತರಣೆಯ ಕಥೆಯಲ್ಲ. ಎರಡು ಸಮುದಾಯಗಳ ಕುರಿತ ಕಥೆ ಇದೆ. ವ್ಯಾಪಾರಿಗಳು ಮತ್ತು ಕಾರ್ಮಿಕರ ನಡುವಿನ ಕಥೆ ಇದೆ. ಇದರಲ್ಲಿ ಭಾಗವಹಿಸಿದ ಕೆಲವರನ್ನು ಹುಡುಕಿ ಮಾತಾಡಿಸಿದೆ. ಒಂದಿಷ್ಟು ಮಾಹಿತಿ ಸಿಕ್ಕಿತು. ಅದನ್ನು ಬೆಳೆಸಿ ಚಿತ್ರಕಥೆ ಮಾಡಿದ್ದೇನೆ. ಈ ಕಥೆ ಎಲ್ಲರಿಗೂ ಇಷ್ಟವಾಗಿದೆ ಎಂದು‌ ಚಿತ್ರದ ಕಥೆಯ ಬಗ್ಗೆ ಟಿ.ಕೆ.ದಯಾನಂದ್ ಮಾತನಾಡಿದರು.

Advertisement

ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಛಾಯಾಗ್ರಾಹಕ ಲವಿತ್ ಹಾಗೂ ನಟ ಬಿ.ಸುರೇಶ್ ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವೃದ್ಧಿ ಕ್ರಿಯೇಷನ್ಸ್ ಹಾಗೂ ಸತೀಶ್ ಪಿಕ್ಚರ್ ಹೌಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com