Madagaja: ಶ್ರೀಮುರಳಿ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಟ್ಟ ‘ಮದಗಜ’ ಚಿತ್ರತಂಡ

Published on

718 Views
Advertisement

Madagaja: ರೋರಿಂಗ್ ಸ್ಟಾರ್ ಶ್ರೀಮುರಳಿಯವರಿಗೆ ಸಿನಿಮಾ ಕೆರಿಯರ್ ನಲ್ಲಿ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ‘ಉಗ್ರಂ’. ‘ಉಗ್ರಂ’ ಸಿನಿಮಾದ ನಂತರ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟ ಶ್ರೀಮುರಳಿ ಅವರಿಗೆ ಇಂದು‌ ಹುಟ್ಟುಹಬ್ಬದ ಸಂಭ್ರಮ. ಮಹೇಶ್ ಕುಮಾರ್ ನಿರ್ದೇಶನದ ‘ಮದಗಜ’ ಸಿನಿಮಾದಲ್ಲಿ ನಟಿಸಿರುವ ಮುರುಳಿಯವರಿಗೆ ಹುಟ್ಟುಹಬ್ಬದ ಪ್ರಯುಕ್ತ ‘ಮದಗಜ’ ಚಿತ್ರದ ಫಸ್ಟ್ ಲುಕ್ ಟೀಸರ್ ನ್ನು ಉಡುಗೊರೆಯಾಗಿ ನೀಡಿದೆ ಚಿತ್ರತಂಡ.

ಫಸ್ಟ್ ಲುಕ್ ಟೀಸರ್ ನ್ನು ಬಿಡುಗಡೆ ಮಾಡಿದ ಪ್ರಶಾಂತ್‌ ನೀಲ್ ರೋರಿಂಗ್ ಸ್ಟಾರ್ ಬಗ್ಗೆ ಹೊಗಳಿಕೆಯ ಮಾತುಗಳನ್ನು ಹಾಡಿದ್ದಾರೆ. ಚಿತ್ರದ ಟೀಸರ್ ನಲ್ಲೇ ಖಡಕ್ ಆಗಿ, ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಶ್ರೀಮುರಳಿ. ಸಿನಿಮಾದಲ್ಲಿ ಪಂಚ್ ಡೈಲಾಗ್ ಗಳಿದ್ದು, ಪಕ್ಕ ಆ್ಯಕ್ಷನ್ ಇರುವುದು ಫಸ್ಟ್ ಲುಕ್ ಟೀಸರ್ ನೋಡಿದವರಿಗೆ ತಿಳಿಯುತ್ತದೆ. ವಾರಣಾಸಿಯಲ್ಲಿ ಚಿತ್ರೀಕರಣ ಮಾಡಿರುವ ಸುಡುವ ಹೆಣಗಳ ಮಧ್ಯೆ ಮುರಳಿ ಚಿಲ್ಲಂ ಸೇದುವ ಸ್ಲೋ ಮೋಶನ್ ಶಾಟ್ ಅಭಿಮಾನಿಗಳಿಗೆ ಫುಲ್ ಖುಷಿಕೊಟ್ಟಿದೆ.

Advertisement

ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ‌ಹೆಚ್ಚಾಗಿದೆ ಅವರ ಅಭಿಮಾನಿಗಳಲ್ಲಿ. ಮೊದಲ ಹಂತದ ಚಿತ್ರೀಕರಣವನ್ನು ವಾರಣಾಸಿಯಲ್ಲಿ, ಎರಡನೇ ಹಂತದ ಚಿತ್ರೀಕರಣವನ್ನು ಮೈಸೂರಿನಲ್ಲಿ ಮುಗಿಸಿದೆ ಚಿತ್ರತಂಡ. ಮೂರನೇ ಹಂತದ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರಕ್ಕೆ ಉಮಾಪತಿ ಬಂಡವಾಳ ಹೂಡಿದ್ದಾರೆ. ಶ್ರೀಮುರಳಿಗೆ ಜೋಡಿಯಾಗಿ ಅಶಿಕಾ‌ ರಂಗನಾಥ್ ಕಾಣಿಸಿಕೊಂಡಿದ್ದಾರೆ. ರವಿ‌ ಬಸ್ರೂರ್ ಸಂಗೀತ ನೀಡಿದ್ದು, ನವೀನ್ ಕುಮಾರ್ ರವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com