ಎರಡು ಧರ್ಮಗಳ ಪ್ರೇಮ ಯುದ್ದ- ಲವ್ ವಾರ್

Published on

481 Views
Advertisement

’ಲವ್ ವಾರ್’ ಚಿತ್ರದ ಹೆಸರೇ ಹೇಳುವಂತೆ ಎರಡು ಧರ್ಮಗಳ ಪ್ರೇಮ ಯುದ್ದ ನಡೆಯುವುದು ಎಲ್ಲಿ? ಆತ ಇಸ್ಲಾಂ ಧರ್ಮದವನು. ಆಕೆಯು ಹಿಂದೂ ಆಗಿರುತ್ತಾಳೆ. ಹೀಗೆ ಧರ್ಮಗಳ ನಡುವಿನ ಸನ್ನಿವೇಶಗಳು, ಪ್ರೇಮಿಗಳ ಕಿತ್ತಾಟ, ಕುಟುಂಬದ ಜೊತೆಗಿನ ಸಂಘರ್ಷ, ಇವೆಲ್ಲವು ಕತೆಯಲ್ಲಿ ಮುಖ್ಯವಾಗಿರುತ್ತದೆ. ’ಸರ್ಕಾರ್’ ನಿರ್ದೇಶನ ಮಾಡಿರುವ ಎಸ್.ಮಂಜುಪ್ರೀತಮ್ ರಚನೆ,ಚಿತ್ರಕತೆ ಬರೆದು ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಎಸ್‌ಕೆಎಫ್ ಬ್ಯಾನರ್ ಅಡಿಯಲ್ಲಿ ಇಮ್ರಾನ್ ಆರಿಫ್ ಪಾಶಾ ಐದು ಭಾಷೆಗಳಲ್ಲಿ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಸಾಹಿಲ್‌ಖಾನ್ ನಾಯಕನಾಗಿ ಮೊದಲ ಚಿತ್ರ. ಮರಾಠಿ ಧಾರವಾಹಿಗಳಲ್ಲಿ ಕಾಣಸಿಕೊಂಡಿದ್ದ ಬಾಂಬೆ ಮೂಲದ ಪಾಯಲ್ ನಾಯಕಿ. ಪಾತ್ರದ ಸಲುವಾಗಿ ಕನ್ನಡ ಕಲಿತುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Advertisement


ತಾರಗಣದಲ್ಲಿ ರವಿಶಂಕರ್, ಸಾಧುಕೋಕಿಲ ಇವರೊಂದಿಗೆ ತೆಲುಗು, ಹಿಂದಿ, ತಮಿಳು ಮತ್ತು ಮಲೆಯಾಳಂ ಭಾಷೆಯಿಂದ ಒಬ್ಬ ಕಲಾವಿದರು ನಟಿಸುತ್ತಿದ್ದಾರೆ. ಸಂಗೀತ ಸಂಯೋಜಕ ಕಾರ್ತಿಕ್‌ವೆಂಕಟೇಶ್ ಈಗ ಆರೋನ್ ಕಾರ್ತಿಕ್ ಎಂದು ನಾಮಕರಣ ಮಾಡಿಕೊಂಡಿದ್ದು, ನಾಲ್ಕು ಹಾಡುಗಳಿಗೆ ರಾಗ ಹೊಸೆಯುತ್ತಿದ್ದಾರೆ. ಛಾಯಾಗ್ರಹಣ ಆಶುಮೋಹನ್‌ಕುಮಾರ್, ಸಂಕಲನ ನಾಗರಾಜ.ಜಿ.ಹಾರಸೂರ್, ಸಂಭಾಷಣೆ ಚಂದ್ರು, ಸಾಹಸ ಡಾ.ಥ್ರಿಲ್ಲರ್‌ಮಂಜು, ನೃತ್ಯ ಕರಿಯಾನಂದ ಅವರದಾಗಿದೆ. ಚಿತ್ರದುರ್ಗ, ಚಿಕ್ಕಮಗಳೂರು, ಮಡಕೇರಿ, ಗೋವ ಮತ್ತು ಮಹಾರಾಷ್ಟ್ರ ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ. ಗುರುವಾರದಂದು ಸಿನಿಮಾದ ಪೂಜಾ ಕಾರ್ಯಕ್ರಮ ಮತ್ತು ಪೋಸ್ಟರ್ ಅನಾವರಣ ಮಾಡಲಾಯಿತು. ಇದೇ ಸಂದರ್ಭದಲ್ಲಿ ನಿರ್ಮಾಪಕರ ಹುಟ್ಟುಹಬ್ಬದ ಪ್ರಯುಕ್ತ ಕೇಕ್‌ನ್ನು ಕಟ್ ಮಾಡಿ ವಿತರಣೆ ಮಾಡಿದರು.

Advertisement

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com