ಲವ್ ಮಾಕ್ಟೇಲ್೩ ಚಿತ್ರದ ಒಬ್ಬಂಟಿಯಾದೆ ನಾ’ ಲಿರಿಕಲ್ ವೀಡಿಯೋ ಸಾಂಗ್!

Published on

262 Views
Advertisement

ಲವ್ ಮಾಕ್ಟೇಲ್೩ ಚಿತ್ರದ ಒಬ್ಬಂಟಿಯಾದೆ ನಾ’ ಲಿರಿಕಲ್ ವೀಡಿಯೋ ಸಾಂಗ್! ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ, ನಾಯಕನಾಗಿಯೂ ನಟಿಸಿರುವ ಚಿತ್ರ ಲವ್ ಮಾಕ್ಟೇಲ್೩. ಇತ್ತೀಚೆಗಷ್ಟೇ ತಂದೆ ಮಗಳ ಬಾಂಧವ್ಯದ ಸೆಲೆಯಂತಿದ್ದ ಈ ಸಿನಿಮಾದ ಹಾಡೊಂದು ಬಿಡುಗಡೆಗೊಂಡಿತ್ತು. ಈ ಹಿಂದಿನ ಎರಡು ಆವೃತ್ತಿಗಳನ್ನು ಕಣ್ತುಂಬಿಕೊಂದ್ದ ಅನೇಕರು ಟ್ರೈಲರಿಗಾಗಿ ಕಾತರರಾಗಿರುವಾಗಲೇ ಪ್ರೇಮಿಗಳ ದಿನಕ್ಕೆ ಉಡುಗೊರೆ ಎಂಬಂತೆಒಬ್ಬಂಟಿಯಾದೆ ನಾ’ ಎಂಬ ಲಿರಿಕಲ್ ವೀಡಿಯೋ ಹಾಡೊಂದನ್ನು ಬಿಡುಗಡೆಗೊಳಿಸಲಾಗಿದೆ. ಈಗಾಗಲೇ ಪ್ರೇಮಿಗಳ ದಿನದ ಗುಂಗಿನಲ್ಲಿ ತೇಲಿಬಂದಂತಿರೋ ಈ ಹಾಡು ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡುತ್ತಾ, ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ.

ಮಾತು ಮೌನವಾಗಿದೆ ಶೋಕ ಭಾವ ಮೂಡಿದೆ ಎಂಬ ಸಾಲುಗಳೊಂದಿಗೆ ಶುರುವಾಗುವ ಈ ಹಾಡನ್ನು ರಾಘವೇಂದ್ರ ಕಾಮತ್ ಬರೆದಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿ, ಸ್ವತಃ ಧ್ವನಿಯಾಗಿದ್ದಾರೆ. ಕೆವಲೊಂದಷ್ಟು ಹಾಡುಗಳು ಮೆಲ್ಲಗೆ ಒಳಗಿಳಿದು, ಬಹುದಿನಗಳ ನಂತರ ಆವರಿಸಿಕೊಳ್ಳುತ್ತವೆ. ಮತ್ತೊಂದಷ್ಟು ಹಾಡುಗಳು ಕೇಳಿದಾಕ್ಷಣವೇ ಎದೆಗಿಳಿದು ಕಾಡುತ್ತವೆ. ಈ ಹಾಡು ಎರಡನೇ ಸಾಲಿಗೆ ಸೇರ್ಪಡೆಗೊಳ್ಳುವ ಗುಣ ಹೊಂದಿದೆ. ಪ್ರೇಮಿಗಳ ದಿನದಂದೇ ಬಿಡುಗಡೆಯಾಗಿರುವ ಈ ಹಾಡು, ಎವರ್‌ಗ್ರೀನ್ ಪ್ರೇಮಗೀತೆಗಳ ಸಾಲಿನಲ್ಲಿ ದಾಖಲಾಗುವ ಗುಣ ಹೊಂದಿದೆ. ಇಂಥಾದ್ದೊಂದು ಅಭಿಪ್ರಾಯ ಕೇಳುಗರ ಕಡೆಯಿಂದಲೇ ಹೊಮ್ಮಿಕೊಳ್ಳುತ್ತಿದೆ.

Advertisement

ಡಾರ್ಲಿಂಗ್ ಕೃಷ್ಣ ಲವ್‌ಮಾಕ್ಟೇಲ್ ಸರಣಿಯ ಮೊದಲ ಆವೃತ್ತಿಯಲ್ಲಿಯೇ ಹಾಡುಗಳಿಗೆ ವಿಶೇಷ ಒತ್ತು ಕೊಟ್ಟಿದ್ದರು. ಎರಡನೇ ಆವೃತ್ತಿಯಲ್ಲಿಯೂ ಆಪರಿಪಾಠ ಮುಂದುವರೆದಿತ್ತು. ಆ ಎರಡೂ ಸರಣಿಗಳ ಗೆಲುವಿನಲ್ಲಿ ಹಾಡುಗಳ ಪಾತ್ರವೂ ಇತ್ತು. ಇದೀಗ ಮೂರನೇ ಭಾಗದಲ್ಲಿಯೂ ಕೂಡಾ ಅದು ಮುಂದುವರೆದಿದೆ. ಅಂದಹಾಗೆ, ಈಗಾಗಲೇ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರಾಗಿರುವ ಲವ್ ಮಾಕ್ಟೇಲ್೩ ಇದೇ ಏಪ್ರಿಲ್ ೧೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

Advertisement

Copyright ©2026 . All Rights Reserved. privacy | terms Whatsapp: 9538193653 Email: hello@flixoye.com