Love Mocktail 2 : ಮತ್ತೊಮ್ಮೆ ಮನಸು ಸೆಳೆಯುವ ಲವ್​ ಮಾಕ್ಟೇಲ್​ 2

Published on

1136 Views
Advertisement

Love Mocktail 2 : ಮತ್ತೊಮ್ಮೆ ಮನಸು ಸೆಳೆಯುವ ಲವ್​ ಮಾಕ್ಟೇಲ್​ 2

ಡಾರ್ಲಿಂಗ್ ಕೃಷ್ಣ! ಕೃಷ್ಣ ರುಕ್ಮಿಣಿ ಧಾರಾವಾಹಿಯಿಂದ ಲವ್​ ಮಾಕ್ಟೇಲ್​ 2 ತನಕ ನಿಮ್ಮ ಪಯಣದ ಅಪಾರ ಅನುಭವಕ್ಕೊಂದು ಸಲಾಂ!

ಕಳೆದ ಲಾಕ್ ಡೌನ್ ನಲ್ಲಿ ಒಟಿಟಿ ಮೂಲಕ ರಿಲೀಸ್ ಆಗಿ ಅಪಾರ ಜನಮೆಚ್ಚುಗೆ ಗಳಿಸಿದ್ದ ಕೃಷ್ಣ ಮಿಲನಾ ಜೋಡಿಯ ಲವ್ ಮಾಕ್ಟೈಲ್ ಈ ಲವ್ ಜೋಡಿಗಳಿಗೆ ಅಪಾರ ಜನಮನ್ನಣೆ ನೀಡಿದ ಚಿತ್ರ. ಅದೇ ಪ್ರೀತಿ, ಅದೇ ಭಾವವನ್ನು ಮತ್ತೆ ಜನತೆಯಿಂದ ಗಳಿಸಿದ್ದಾರೆ ಆದಿ-ನಿಧಿಮಾ!

Advertisement

ಲಲವ್ ಮಾಕ್ಟೈಲ್ ಮೊದಲ ಚಿತ್ರದ ಯಶಸ್ಸಿನ ನಂತರ ರಾತ್ರಿ ಹಗಲು ಕುಳಿತು ನಿದ್ದೆಗೆಟ್ಟು ಬರೆದು, ಚಿತ್ರರೂಪಕ್ಕಿಳಿಸಿ ಹೊಸ ಅನುಭವ ನೀಡಿದ ನಿಮ್ಮ ನಿದೇಶನ, ಸಮರ್ಪಣೆಗೊಂದು ಹ್ಯಾಟ್ಸಾಫ್!

Advertisement

ಇನ್ನು ಚಿತ್ರ ರಿವ್ಯೂಗೆ ಬರೋಣ! ಕಥೆಯ ವಿಚಾರಕ್ಕೆ ಬಂದರೆ ಮೊದಲ ಭಾಗದ ಪಾತ್ರಗಳು ಎರಡನೇ ಭಾಗದಲ್ಲೂ ನಿರೀಕ್ಷೆಯಂತೆಯೇ ಸಿಕ್ಕರೂ ಫೀಲ್ ಸಂಪೂರ್ಣ ಬೇರೆಯೇ. ಒಬ್ಬ ಸಿನಿಮಾ ಪ್ರೇಕ್ಷಕನಿಗೆ ವಿಮರ್ಶೆ ಬರೆಯಲೂ ಪ್ರೇರೇಪಿಸುವ, ಬರೆಯಲೂ ಕೂತರೂ ಸುಮಧುರ ಭಾವ ನೀಡುವ ಸುಂದರ ಕಥಾನಕ ಇದಾಗಿದೆ.

Advertisement

ಈ ಚಿತ್ರದಲ್ಲಿ ನೀವು ನಿರೀಕ್ಷಿಸದೇ ಸಿಗುವ ಹೊಸ ಅನುಭವ ಅದ್ಭುತ ಡೈಲಾಗ್ ಗಳ ಮೂಲಕ ಹಾಸ್ಯದ ಟಚ್. ಯಾವುದೇ ಚಿರಪರಿಚಿತ ನಟನಾ ತಂಡ ಹೊಂದಿರದ, ಹೊಸ ಮುಖಗಳನ್ನೇ ಪರಿಚಯಿಸಿ ಚಿತ್ರ ಎಂದರೆ ಹೀಗಿರಬೇಕು ಎನ್ನುವ ಫೀಲ್ ನೀಡುವ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ನೀಡಿದ್ದಾರೆ.

BILLU BAANA Kannada Short Movie Starring Pattabhi, Bazzar Bala

ಇನ್ನು ನಿಧಿಮಾ ಮೊದಲ ಭಾಗದಲ್ಲೇ ಅಂತ್ಯವಾ? ಎರಡನೇ ಭಾಗದಲ್ಲಿ ನಿಧಿಮಾ ಕಾಣುವ ಭಾಗ್ಯ ಇಲ್ಲವಾ ಎಂದವರಿಗೆ ಶುಭಸುದ್ದಿ. ಎರಡನೇ ಭಾಗದಲ್ಲೂ ನಿಧಿಮಾ ಪಾತ್ರ ನಿಮ್ಮನ್ನು ಅಪಾರವಾಗಿ ಸೆಳೆದುಬಿಡುತ್ತದೆ.

Advertisement

ಇನ್ನು ಆದಿ ಗೆಳೆಯರಾದ ಸುಷ್ಮಾ-ವಿಜಯ್ ಈ ಭಾಗದಲ್ಲಿ ಬಹಳ ಪಾತ್ರವನ್ನು ಪಡೆದಿದ್ದಾರೆ. ಅದಲ್ಲದೆ ಹೊಸ ಪರಿಚಯದ ನಟಿ ರೇಚಲ್ ಡೇವಿಡ್ ಪಾತ್ರ ನಿರ್ವಹಣೆಯಂತೂ ಅಮೋಘ. ಅದಲ್ಲದೆ ನಕುಲ್ ಅಭ್ಯಂಕರ್ ಸಂಗೀತವಂತೂ ಹೊಸ ಲೆವೆಲ್ ಗೆ ಕೊಂಡುಹೋಗುತ್ತದೆ. ಕ್ರೇಜಿ ಮೈಂಡ್ಸ್ ಛಾಯಾಗ್ರಹಣವಂತೂ ಅದ್ಭುತ. ಅಲ್ಲಲ್ಲಿ ದೃಶ್ಯಗಳು ಉದ್ದ ಅನ್ನಿಸಿದರೂ ಬೋರ್ ಅನ್ನಿಸುವುದಿಲ್ಲ ಅನ್ನೋದು ವಿಶೇಷ!

ಪಾತ್ರ, ನಿರ್ದೇಶನ, ಚಿತ್ರಕಥೆ, ಸಂಗೀತ, ಸೀಕ್ವೆಲ್, ಕಾಮಿಡಿ, ಲೊಕೇಷನ್ಸ್ ಈ ಎಲ್ಲ ವಿಭಾಗದಲ್ಲೂ ಫುಲ್ ಸ್ಕೋರ್ ಪಡೆದಿರುವ ಈ ಲವ್ ಮಾಕ್ಟೈಲ್-2 ಅನ್ನು ನೀವು ಥಿಯೇಟರ್ ನಲ್ಲಿ ನೋಡಲೇಬೇಕು! ನಿಮ್ಮ ಮನೋರಂಜನೆಗಂತೂ ಖಂಡಿತಾ ಲೋಪವಿಲ್ಲ.

ಕನ್ನಡದಲ್ಲಿ ಇಂತಹ ಸುಂದರ ಚಿತ್ರಗಳನ್ನು ನೋಡುವ ಸೊಗಸಿಗೂ ಕೃಷ್ಣ ಒಂದು ಹೊಸ ಟಚ್ ನೀಡಿದ್ದಾರೆ ಎಂದರೂ ತಪ್ಪಾಗಲಾರದು. ಚಿತ್ರ ಸಂಪೂರ್ಣ ಯಶಸ್ವಿಯಾಗಲಿ ಎಂದು ಹಾರೈಸೋಣ.

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com