ಗಾಯಕ ಟಿಪ್ಪುಗೆ ಪ್ರೀತಿ ಕೈಕೊಟ್ಟಾಗ

Published on

524 Views
Advertisement

ಹೆಸರಾಂತ ಗಾಯಕ ಟಿಪ್ಪು ಇದೇ ಮೊದಲ ಬಾರಿಗೆ ಆಲ್ಬಂ ಹಾಡೊಂದಕ್ಕೆ ದನಿಯಾಗಿದ್ದಾರೆ. ಲವ್ ಲೆಫ್ಟ್ ಅಸ್ ಎಂಬ ಇಂಗ್ಲೀಷ್ ಶೀರ್ಷಿಕೆ ಹೊಂದಿರುವ ಈ ಹಾಡನ್ನು ಹೇಮಂತ್ ಎಸ್. ನಿರ್ಮಾಣ ಮಾಡಿದ್ದಾರೆ. ವಿಶೇಷವಾಗಿ ಈ ಹಾಡು ಕ್ಯೂ ಆರ್ ಕೋಡ್ ಮೂಲಕ ಬಿಡುಗಡೆಯಾಗಿದೆ. ಈ ತಂಡ ನೀಡುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಮೊಬೈಲ್‍ನಲ್ಲಿಯೇ ಈ ಹಾಡನ್ನು ವೀಕ್ಷಿಸಬಹುದು. ಗಣೇಶ್ ಎಂಬ ಯುವಕ ಈ ಹಾಡನ್ನು ನಿರ್ದೇಶನ ಮಾಡಿದ್ದಾರೆ. ಈ ಹಾಡಿನ ಬಿಡುಗಡೆ ಸಮಾರಂಭ ಪ್ರೇಮಿಗಳ ದಿನದಂದು ವಿಶೇಷವಾಗಿ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್ ನಮಗೆ ಯಾರಾದರೂ ಮೋಸ ಮಾಡಿದಾಗ ಇವರೇ ಹಿಂಗಾ, ಎಲ್ಲರೂ ಹಿಂಗಾ ಅನ್ನೋ ಉದ್ಘಾರ ಬರುತ್ತದೆ. ಅದನ್ನೇ ಆಧಾರವಾಗಿಟ್ಟುಕೊಂಡು ಈ ಹಾಡನ್ನು ಮಾಡಿದ್ದೇವೆ ಎಂದು ಹೇಳಿದರು. ನಿರ್ಮಾಪಕ ಹೇಮಂತ್ ಮಾತನಾಡಿ ನಮ್ಮ ಬ್ಯಾನರ್‍ನಲ್ಲಿ ಮೂಡಿರುವ ಮೊಟ್ಟಮೊದಲ ಆಲ್ಬಂ ಹಾಡಿನ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಯೋಜನೆಯೂ ಇದೆ ಎಂದು ಹೇಳಿದರು.


Shop for amazing shopping offers on Amazon for below products

Advertisement
[amazon_link asins=’B0741468BG,B073WBRQB1,B0786D4QL5,B077YSPS2B,B073QPDTSZ,B01I70NI3A,B01EU2M62S,B01HBY5B38′ template=’ProductCarousel’ store=’flixoye25-21′ marketplace=’IN’ link_id=’1947ca79-1650-11e8-aa14-9144108d45b6′]

ಈ ಹಾಡಿನಲ್ಲಿ ರೋಹನ್ ರಾಜ, ವಿಜಯಶ್ರೀ ಎಂ.ಸಿ.ಬಿಜ್ಜು, ಅಕ್ಷಿತಾ, ಆರಾಧ್ಯ, ಅಮೂಲ್ಯ ಅಭಿನಯಿಸಿದ್ದಾರೆ. ಸುಮಾರು 7.8 ಲಕ್ಷಗಳ ಬಜೆಟ್‍ನೊಂದಿಗೆ ಈ ಹಾಡನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಆಲ್ಬಂ ಸಾಂಗೊಂದನ್ನು ಚಾಪರ್ ಉಪಯೋಗಿಸಿ ಚಿತ್ರೀಕರಣ ಮಾಡಲಾಗಿದೆ. ಭಾನುಪ್ರತಾಪ್ ಈ ಹಾಡನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ರಾಘವೇಂದ್ರ ಈ ಹಾಡಿಗೆ ಕಂಪೋಸ್ ಮಾಡಿದ್ದಾರೆ. ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ ಗಣೇಶ್.

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com