ದಯಾಳ್ ರ ಒಂಭತ್ತನೇ ದಿಕ್ಕಿನಲ್ಲಿ ಲೂಸ್ ಮಾದ
ಇತ್ತೀಚಿನ ವರ್ಷಗಳಲ್ಲಿ ನಿರ್ದೇಶಕ ದಯಾಳ್ ಪದ್ಮನಾಭನ್ ಅವರು
ಒಂದರ ಹಿಂದೆ ಒಂದರಂತೆ ಚಿತ್ರಗಳನ್ನು ನಿರ್ದೇಶನ ಮಾಡುತ್ತಿದ್ದಾರೆ.
ಇತ್ತೀಚೆಗೆ ಇವರ ನಿರ್ದೇಶನದ ರಂಗ ನಾಯಕಿ ಚಿತ್ರವು ಸೆಟ್ಟೇರಿ
ಚಿತ್ರೀಕರಣ ಮುಗಿಸಿದೆ. ಈ ಚಿತ್ರ ತೆರೆಕಾಣುವ ಮುನ್ನವೇ ಮತ್ತೊಂದು
ಚಿತ್ರವು ಸೆಟ್ಟೇರಲಿದೆ. ದಯಾಳ್ ಅವರು ತಮ್ಮ ಮುಂದಿನ ಚಿತ್ರಕ್ಕೆ
ಲೂಸ್ ಮಾದ ಯೋಗೀಶ್ ಅವರನ್ನು ನಾಯಕನನ್ನಾಗಿ ಆಯ್ಕೆ
ಮಾಡಿದ್ದಾರೆ. ಚಿತ್ರಕ್ಕೆ ಒಂಭತ್ತನೇ ದಿಕ್ಕು ಎಂಬ ಶೀರ್ಷಿಕೆಯನ್ನು
ಇಡಲಾಗಿದೆ. ಸೆಪ್ಟೆಂಬರ್ 12ರಂದು ಒಂಭತ್ತನೇ ದಿಕ್ಕು ಚಿತ್ರದ
ಚಿತ್ರೀಕರಣ ಶುರುವಾಗಲಿದೆ. ಲೂಸ್ ಮಾದ ಯೋಗಿ ಅವರಿಗೆ ಅದಿತಿ
ಪ್ರಭುದೇವ್ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Advertisement
Advertisement