ಬಹುನಿರೀಕ್ಷಿತ ವಿಕ್ರಾಂತ್ ರೋಣ ರಿಲೀಸ್ ಡೇಟ್ ಫಿಕ್ಸ್

Published on

654 Views
Advertisement

ಇತ್ತೀಚೆಗೆ ಕನ್ನಡ ಸಿನೆಮಾಗಳ ಗುಣಮಟ್ಟ ಯಾವ ರೀತಿ ಇದೆ ಅಂದ್ರೆ, ವಿಶ್ವವೇ ತಿರುಗಿ ನೋಡುವಂತಿದೆ. ಅದರಲ್ಲೂ ಕೆಜಿಎಫ್ ಬಂದ ನಂತರ ಕನ್ನಡ ಸಿನೆಮಾಗಳ ದಾರೀನೆ ಬದಲಾಗಿದೆ. ಕಳೆದ ತಿಂಗಳು ಬುರ್ಜ್ ಖಲೀಫಾ ಮೇಲೆ ತನ್ನ ಟೀಸರ್ ರಿಲೀಸ್ ಮಾಡಿ ವಿಶ್ವದಾದ್ಯಂತ ಹೆಸ್ರು ಮಾಡಿದ್ದ ವಿಕ್ರಾಂತ್ ರೋಣ ತಂಡ ಇದೀಗ ಬಿಡುಗಡೆ ದಿನಾಂಕ ಅನೌನ್ಸ್ ಮಾಡಿದೆ. ಆಗಸ್ಟ್ 19ಕ್ಕೆ ವಿಶ್ವದ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Advertisement

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಆಗುವ ಎಲ್ಲಾ ಲಕ್ಷಣ ಎದ್ದು ಕಾಣುತ್ತಿದೆ. ಅನೂಪ್ ಬಂಡಾರಿ ಆಕ್ಷನ್ ಕಟ್ ಹೇಳಿರುವ ಈ ಸಿನೆಮಾ ಬಹಳಷ್ಟು ಕಾರಣಗಳಿಗೆ ಚರ್ಚೆಯಾಗುತಿದ್ದು, ಕೋವಿಡ್ ನಂತರ ಶೂಟಿಂಗ್ ತೆರಳಿದ ಮೊದಲ ಸಿನಿಮಾ ಇದಾಗಿತ್ತು.

ಕಿಚ್ಚ ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈ ಸಿನೆಮಾ ಅವರ ವೃತ್ತಜೀವನದಲ್ಲಿ ಬಹುದೊಡ್ಡ ಸಿನೆಮಾವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ . ಜಾಕ್ ಮಂಜು ನಿರ್ಮಾಣದ ಈ ವಿಕ್ರಾಂತ್ ರೋಣ ಹೆಸರಲ್ಲೇ ಒಂದು ಪವರ್ ಇದೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಸಿನೆಮಾದ ಮತ್ತೊಂದು ಹೈಲೆಟ್ಸ್. ಆಶಿಕ್ ಸಂಕಲನ, ವಿಲಿಯಮ್ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.

Advertisement

ಜಾಕ್ ಮಂಜು ಜೊತೆ ನಿರ್ಮಾಣದಲ್ಲಿ ಅಲಂಕಾರ್ ಪಾಂಡ್ಯನ್ ಕೈ ಜೋಡಿಸಿದ್ದು, ಅಭಿನಯ ಚಕ್ರವರ್ತಿ ಜೊತೆ ಇನ್ನುಳಿದಂತೆ ತಾರಾಂಗಣದಲ್ಲಿ ಅನೂಪ್ ಬಂಡಾರಿ, ನೀತಾ ಅಶೋಕ್ ಅಭಿನಯಿಸಿದ್ದಾರೆ. ಸುದೀಪ್ ಅವರಿಗೆ ನಾಯಕಿಯಾಗಿ ಯಾರು ಅಭಿನಯಿಸುತ್ತಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com