Buzz

ಇತಿಹಾಸ ಸೃಷ್ಟಿಸಿದ ಲಂಡನ್ನಲ್ಲಿ ಲಂಬೋದರ

( words)

ಲಂಡನ್ ನಲ್ಲಿ ಲಂಬೋದರ ನವ ನಿರ್ದೇಶಕ ರಾಜ್ ಸೂರ್ಯ ಆಕ್ಷನ್ ಕಟ್ ಹೇಳಿರುವ ಸಿನಿಮಾ…. ಮುಂದಿನ ವಾರ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ನಾಯಕಿಯಾಗಿ ಅಭಿನಯ ಮಾಡಿದ್ದಾರೆ …ಚಮಕ್ ಸಿನಿಮಾಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ರಾಜ್ ಸೂರ್ಯ ಲಂಡನ್ನಲ್ಲಿ ಲಂಬೋದರ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ….. ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ಸದ್ದು ಮಾಡಿರುವ ಲಂಡನ್ನಲ್ಲಿ ಲಂಬೋದರ ಕನ್ನಡ ಸಿನಿಮಾರಂಗದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿ ಮಾಡಿದೆ….

ಹಾಡುಗಳು ಮತ್ತು ಟ್ರೈಲರ್ ನಿಂದ ಸಾಕಷ್ಟು ಸದ್ದು ಮಾಡುತ್ತಿರುವ ಲಂಡನ್ನಲ್ಲಿ ಲಂಬೋದರ ಸಿನಿಮಾದ ಪ್ರೀಮಿಯರ್ ಶೋ ಇಂಗ್ಲೆಂಡ್ನಲ್ಲಿ ನಡೆಯುತ್ತಿದೆ…. ಇದೇ ತಿಂಗಳು ಅಂದರೆ ಮಾರ್ಚ್ 23-24 ಇಂಗ್ಲೆಂಡ್ನಲ್ಲಿ ಲಂಡನ್ನಲ್ಲಿ ಲಂಬೋದರ ಸಿನಿಮಾದ ಪ್ರೀಮಿಯರ್ ಶೋ ನಡೆಯಲಿದೆ . ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದರ ಪ್ರೀಮಿಯರ್ ಶೋ ಇಂಗ್ಲೆಂಡ್ನಲ್ಲಿ ನಡೆಯುತ್ತಿದೆ ..ಪ್ರೀಮಿಯರ್ ಶೋನಲ್ಲಿ ಇಂಗ್ಲೆಂಡ್ನ ಜನರು ನೋಡಲಿದ್ದಾರೆ…. ಎರಡು ದಿನದ ಎಲ್ಲ ಶೋಗಳ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಆಗಿದೆ …

ಲಂಡನ್ನ ಅನಿವಾಸಿ ಭಾರತೀಯರೇ ಸೇರಿ ನಿರ್ಮಾಣ ಮಾಡಿರುವ ಲಂಡನ್ನಲ್ಲಿ ಲಂಬೋದರ ಸಿನಿಮಾದ ಮೇಕಿಂಗ್ ಹಾಗೂ ಹಾಡುಗಳನ್ನು ನೋಡಿದರೆ ಚಿತ್ರದ ಕ್ವಾಲಿಟಿ ಕೂಡ ತಿಳಿಯುತ್ತಿದೆ …..ಲಂಡನ್ ನಲ್ಲಿ ಲಂಬೋದರ ಸಿನಿಮಾ ಮೂಲಕ ಸಂತೋಷ್ ನಾಯಕನಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದು ಇಷ್ಟು ದಿನಗಳ ಕಾಲ ಸಿಂಗರ್ ಆಗಿ ಗುರುತಿಸಿಕೊಂಡಿದ್ದ ನಟಿ ಶುತಿ ಪ್ರಕಾಶ್ ಕೂಡ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ

ಇದೇ ತಿಂಗಳು ಅಂದರೆ ಮಾರ್ಚ್ 29 ರಂದು ಸಿನಿಮಾ ತೆರೆ ಕಾಣಲಿದ್ದು ವಿಭಿನ್ನ ಕಥೆಯನ್ನಿಟ್ಟುಕೊಂಡು ಕಲರ್ ಫುಲ್ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಬರಲಿದ್ದಾರೆ ನಿರ್ದೇಶಕ ರಾಜ್ ಸೂರ್ಯ ಹಾಗೂ ಶ್ರುತಿ ಪ್ರಕಾಶ್ ಮತ್ತು ಸಂತೋಷ್

You Might Also Like...

Leave a Reply

Your email address will not be published.