ಮೋಹನ್ ನಿರ್ದೇಶನದ “ಲೋಫರ್ಸ್” ಚಿತ್ರದ “ಡ್ಯಾಡಿ ಕೊಟ್ಟಿದಾಸ್ತಿ” ವಿಡಿಯೋ ಸಾಂಗ್ ಇಂದು ಬಿಡುಗಡೆ
ನಟ ಎಸ್.ಮೋಹನ್ ಅವರು ಕಥೆ ಚಿತ್ರಕಥೆ ಸಂಭಾಷಣೆ ಬರೆದು
ನಿರ್ದೇಶನ ಮಾಡಿರುವ ಲೋಫರ್ಸ್ ಚಿತ್ರದ “ಡ್ಯಾಡಿ ಕೊಟ್ಟಿದಾಸ್ತಿ”
ಹಾಡಿನ ವಿಡಿಯೋ ಇಂದು ಬಿಡುಗಡೆಯಾಗಿದೆ. ಎ.ಎನ್.ಎಸ್ ಪೋಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಬಿ.ಎನ್.ಗಂಗಾಧರ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ದಿನೇಶ್ ಕುಮಾರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಹೊಸ ಪ್ರತಿಭೆಗಳೊಂದಿಗೆ, ಕೆಂಪೇಗೌಡ, ಶ್ರಾವ್ಯ, ಸುಷ್ಮ, ಸಾಕ್ಷಿ, ಎಂ.ಎಸ್. ಉಮೇಶ್, ಟೆನ್ನಿಸ್ ಕೃಷ್ಣ, ಸೇರಿದಂತೆ ಹಲವು ಹೆಸರಾಂತ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಪ್ರಸಾದ್ ಬಾಬು ಅವರ ಛಾಯಾಗ್ರಹಣ, ಶಿವು ಅವರ ಸಂಕಲನ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಈ ವಿಡಿಯೋ ಸಾಂಗ್ ಅನ್ನು ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
Advertisement
Advertisement
