ಕುಸ್ತಿ ಚಿತ್ರದ ಟೀಸರ್ ಬಿಡುಗಡೆ

Published on

338 Views
Advertisement

ಜೂನ್ 17 ಭಾನುವಾರ ವಿಶ್ವ ಅಪ್ಪಂದಿರ ದಿನಾಚರಣೆಯನ್ನು ಮಕ್ಕಳು ಆಚರಿಸಿದರು. ಅಂದು ನಟ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ಹುಟ್ಟಹಬ್ಬ ಕೂಡ. ಸಾಮ್ರಾಟ್ ವಿಜಯ್ ಮೊದಲಬಾರಿ ನಟನೆ ಮಾಡುತ್ತಿರುವ ‘ಕುಸ್ತಿ’ ಚಿತ್ರದ ಟೀಸರ್ ಅಂದು ಬಿಡುಗಡೆಯಾಯಿತು. ಮಗನ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಅಪರೂಪದ ಉಡುಗೊರೆ ನೀಡಿದ್ದಾರೆ ದುನಿಯಾ ವಿಜಯ್.
ಎರಡು ನಿಮಿಷದ ಟೀಸರ್‍ನಲ್ಲಿ ಸಾಮ್ರಾಟ್ ವಿಜಯ್ ಕಟ್ಟಮಸ್ತಾದ ಎದುರಾಳಿ ಹುಡುಗನನ್ನು ನೆಲಕ್ಕೆ ಉರುಳಿಸುತ್ತಾನೆ. ಮತ್ತೊಬ್ಬ ಅಲ್ಲಿಗೆ ಬಂದು ನಿನ್ನೆ ಮೊನ್ನೆ ಕುಸ್ತಿ ಕಲಿತು ಗೆದ್ದೆ ಅಂತ ಫೋಸ್ ಕೊಡಬೇಡ. ಅಖಾಡ ಏನು ನಿಮ್ಮ ಅಪ್ಪನದಲ್ಲಾ ಎದ್ದು ನಡಿ ಅಂತ ಜೋರಾಗಿ ಮಾತಾಡುತ್ತಾನೆ. ಅಪ್ಪನ ಸುದ್ದಿಗೆ ಬರಬೇಡ. ನಿನ್ನಂಥ ಸಾವಿರ ಪೈಲ್ವಾನ್‍ಗಳಿಗೆ ನಮ್ಮಪ್ಪ ಒಬ್ಬನೆ ಉಸ್ತಾದ್ ಎಂದು ಸಾಮ್ರಾಟ್ ವಿಜಯ್ ಹೇಳುವ ಸಂಭಾಷಣೆ ನೋಡಿದಾಗ ದುನಿಯಾ ವಿಜಯ್ ಅವರ ಅಭಿನಯ ನೋಡಿದ ಹಾಗೆ ಭಾಸವಾಗುತ್ತದೆ.

Advertisement

ವಿಜಯ್ ಉಸ್ತಾದ್ ಪಾತ್ರವನ್ನು ಮಾಡುತ್ತಿದ್ದಾರೆ. ಅಮೀರ್‍ಖಾನ್ ಅವರ ದಂಗಲ್ ಚಿತ್ರದ ಒಂದು ದೃಶ್ಯ ನೋಡಿ ಸಿನಿಮಾ ಮಾಡಲು ಸ್ಪೂರ್ತಿ ಬಂತು. ಹಾಗಂತ ಸುಲ್ತಾನ್, ದಂಗಲ್ ಚಿತ್ರದ ಕತೆಗೂ ಈ ಚಿತ್ರದ ಕತೆಗೂ ಸಂಬಂಧವಿಲ್ಲ.
ಮಗನ ಉತ್ಸಾಹ ನೋಡಿ ಖುಷಿಯಾಗಿರುವ ದುನಿಯಾ ವಿಜಯ್ `ಅವನು ಈಗ ಶ್ರಮ ಪಟ್ಟರೆ ಮುಂದೆ ಜನರು ಶಿಳ್ಳೆ ಹೊಡೆಯುತ್ತಾರೆ. ದೇಸಿ ಕುಸ್ತಿಯಲ್ಲಿ ಎಲ್ಲರಿಗೂ ಇಷ್ಟವಾಗುವಂತ ಸನ್ನಿವೇಶಗಳು ಚಿತ್ರದಲ್ಲಿ ಬರಲಿದೆ` ಎಂದು ತಿಳಿಸಿದ್ದಾರೆ.

Advertisement

ಕಿರುಚಿತ್ರ ಚೌಕಬಾರ, ಕಳೆದ ತಿಂಗಳು ಬಿಡುಗಡೆಯಾಗಿದ್ದ ಚೂರಿಕಟ್ಟೆ ನಿರ್ದೇಶನ ಮಾಡಿದ್ದ ರಾಘು ಶಿವಮೊಗ್ಗ ಅವರು `ಕುಸ್ತಿ` ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆಟದಲ್ಲಿ ಸೋಲು-ಗೆಲುವು ಇದೆ ಇರುತ್ತದೆ. ಎರಡನ್ನು ಕ್ರೀಡೆಯಾಗಿ ತೆಗೆದುಕೊಳ್ಳಬೇಕು. ಅದನ್ನು ಪ್ರತಿಷ್ಟೆಯಾಗಿ ನೋಡಿದಾಗ ಏನೇನು ಜರಗುತ್ತದೆ ಎಂಬುದು ಕತೆಯ ತಿರುಳು. ಅಪ್ಪಾಸಿ ತೇರದಾಳ್ ಮತ್ತು ಬೀರೇಶ್ ಅವರಿಂದ ಎಂಟು ತಿಂಗಳ ತರಭೇತಿಯನ್ನು ಇಬ್ಬರು ಪಡೆದುಕೊಂಡಿದ್ದಾರೆ. ಇಬ್ಬರು ನಾಯಕಿಯರು, ಇತರೆ ಪಾತ್ರಗಳಿಗಾಗಿ ಆಯ್ಕೆ ನಡೆಯುತ್ತಿದೆ. ಸಾಂಪ್ರದಾಯಿಕ ಕ್ರೀಡೆಯನ್ನು ಕಮರ್ಷಿಯಲ್ ಚಿತ್ರದಂತೆ ಸಿದ್ದಪಡಿಸಲು ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದಾರೆ.

ಅಪ್ಪನೊಂದಿಗೆ ಕೇಕ್ ಕತ್ತರಿಸಿದ ಸಾಮ್ರಾಟ್ ವಿಜಯ್ ತರಭೇತಿ ಪಡೆಯುವಾಗ ಕೆಲವೊಮ್ಮೆ ಮಾಸ್ಟರ್ ಮೇಲೆ ಕೋಪ ಬಂದಿತ್ತು. ಇವತ್ತು ಟೀಸರ್ ನೋಡಿದಾಗ ಎಲ್ಲವು ಮರೆತುಹೋಯಿತು ಎಂಬ ಮುಗ್ದತೆ ಮಾತುಗಳು ಕೇಳಿಬಂದವು.
ಚಿತ್ರದ ಐದು ಹಾಡುಗಳಿಗೆ ರಾಗಗಳನ್ನು ಹೊಸೆಯುತ್ತಿರುವುದು ನವೀನ್‍ಸಜ್ಜು, ಛಾಯಾಗ್ರಹಣ ಶಾಂತಿಸಾಗರ್ ಅವರದಾಗಿದೆ. ದುನಿಯಾ ಟಾಕೀಸ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರವು ಆಗಸ್ಟ್‍ನಲ್ಲಿ ಮಹೂರ್ತ ಆಚರಿಸಿಕೊಳ್ಳಲಿದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com