ಬೆಂಗಳೂರು ಸುತ್ತಮುತ್ತ `ಕೃಷ್ಣ ಗಾರ್ಮೆಂಟ್ಸ್`

Published on

295 Views
Advertisement

ಸುಮುಖ ಪಿಕ್ಚರ್ಸ್ ಲಾಂಛನದಲ್ಲಿ ಕೆ.ಶ್ರೀನಿವಾಸಮೂರ್ತಿ ಅವರು ನಿರ್ಮಿಸುತ್ತಿರುವ `ಕೃಷ್ಣ ಗಾರ್ಮೆಂಟ್ಸ್` ಚಿತ್ರದ ಅಂತಿಮ ಹಂತದ ಚಿತ್ರೀಕರಣ ಬೆಂಗಳೂರು ಹೊರವಲಯದ ಕನಕಪುರ ಸುಂದರ ತಾಣ ಹಾಗೂ ಕಂಠೀರವ ಸ್ಟುಡಿಯೋದಲ್ಲಿ ಭರದಿಂದ ಸಾಗುತ್ತಿದೆ. ಭಾಸ್ಕರ್ ನೀನಾಸಂ, ರಶ್ಮಿತ, ರಾಜೇಶ್ ನಟರಂಗ, ಚಂದು(ಲಕ್ಷ್ಮೀಬಾರಮ್ಮ) ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

Advertisement

ಪ್ರೀತಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿದ್ದಾರೆ. 2015-16ನೆ ಸಾಲಿನ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿದ್ದ `ಹೆಮ್ಮರ` ಚಿತ್ರವನ್ನು ಸಿದ್ದು ಅವರೆ ನಿರ್ದೇಶಿಸಿದ್ದಾರೆ.

`ಶ್ರೀಮಾನ್ ಶ್ರೀಮತಿ` ಧಾರಾವಾಹಿ ಖ್ಯಾತಿಯ ಭಾಸ್ಕರ್ ನೀನಾಸಂ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, `ಬ್ರಹ್ಮಾಸ್ತ್ರ` ಧಾರಾವಾಹಿಯ ರಶ್ಮಿತ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಂದು(ಲಕ್ಷ್ಮೀ ಬಾರಮ್ಮ), ರಾಜೇಶ್ ನಟರಂಗ, ಹನುಮಂತ ರಾಜು, ಜಯಂತಿ, ಯಮುನ, ನಾಗಶ್ರೀ, ಪೂಜಾ, ಲಕ್ಷ್ಮೀನರಸಿಂಹ, ಪ್ರಸಾದ್, ವರ್ಧನ್ ತೀರ್ಥಹಳ್ಳಿ, ರಜನಿಕಾಂತ್ ಎಚ್.ಎಂ.ಟಿ ವಿಜಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರಘು ಧನ್ವಂತ್ರಿ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಚಿದಾನಂದ್ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.

Advertisement

More Buzz

Buzz 10 hours ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 1 day ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 5 days ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 5 days ago

Mr. X: Kannada Cinema’s New Enigma Unfolds!

Buzz 7 days ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 1 week ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 1 week ago

Assi: ZEE5 Film Tackles Stark Reality with Urgent Voice

Buzz 1 week ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 1 week ago

Ustaad Bhagat Singh Hits Netflix: Kannada Fans Rejoice!

Buzz 1 week ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com