flixOye
Buzz

ಬಹುನಿರೀಕ್ಷಿತ ಕಬ್ಜ ಸಿನೆಮಾದ ನಿರೀಕ್ಷೆ ದುಪ್ಪಟ್ಟು ಮಾಡಿದ ಕಿಚ್ಚನ ಖಡಕ್ ಪೋಸ್ಟರ್

ಅಭಿನಯ ಚಕ್ರವರ್ತಿ ಕಿಚ್ಚನ ಖಡಕ್ ಪೋಸ್ಟರ್ ಬಹುನಿರೀಕ್ಷಿತ ಕಬ್ಜ ಸಿನೆಮಾದ ನಿರೀಕ್ಷೆ ದುಪ್ಪಟ್ಟು ಮಾಡಿದೆ … ಭಾರ್ಗವ ಬಕ್ಷಿ ಪಾತ್ರದ ಮೂಲಕ ಮತ್ತೊಮ್ಮೆ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ನಟಿಸುತ್ತಿದ್ದು, ಅಭಿಮಾನಿಗಳಲ್ಲಿ ಸಂಕ್ರಾಂತಿ ಹಬ್ಬದ ಜೊತೆ ಮತ್ತೊಂದು ಹಬ್ಬದ ವಾತಾವರಣ ಸೃಷ್ಟಿಯಾಗಿದೆ.


ಮುಕುಂದ ಮುರಾರಿ ನಂತರ ಮತ್ತೊಮ್ಮೆ ಒಂದಾಗಿರೋ ಇಬ್ಬರು ಸ್ಟಾರ್ ಹೀರೋಗಳು ಸಿನೆಮಾದ ತೂಕವನ್ನು ಮುಗಿಲೆತ್ತರಕ್ಕೆ ಕೊಡ್ಯೊಯ್ದಿದ್ದರೆ. ದಕ್ಷಿಣ ಭಾರತ ಸಿನಿ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ಇಬ್ಬರು ಸ್ಟಾರ್ ನಟರು ಕಬ್ಜ ಸಿನಿಮಾ ಮೂಲಕ ಸಕ್ಕತ್ ಸದ್ದು ಮಾಡ್ತಾರೆ.

Advertisement

ಆರ್ ಚಂದ್ರು ಆಕ್ಷನ್ ಕಟ್ ಹೇಳುತ್ತಿರುವ ಈ ಸಿನೆಮಾ ಹೊಸತನದ ಅಂಡರ್ವರ್ಲ್ಡ್ ಕಥೆ ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಜೊತೆಗೆ ರವಿ ಬಸ್ರೂರು ಸಂಗೀತ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್.

ಸಂಬಂಧಿತ · Related