ಕೆಜಿಎಫ್ 2 ಟೀಸರ್ ಲೋಪ ನಟ ಯಶ್ ಗೆ ನೋಟಿಸ್
ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್ 2 ಟೀಸರ್ ನಲ್ಲಿ ಯಶ್ ಗನ್ ನಿಂದ ಸಿಗರೇಟ್ ಹಚ್ಚುವ ದೃಶ್ಯವಿದೆ. ನಿಯಮದ ಪ್ರಕಾರ ‘ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ’ ಎನ್ನುವ ಅಡಿ ಬರಹ ಹಾಕಬೇಕು. ಆದರೆ ಟೀಸರ್ ನಲ್ಲಿ ಹಾಕಿಲ್ಲ. ಇದು ಧೂಮಪಾನವನ್ನು ಪ್ರಚೋದಿಸುತ್ತಿದೆ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ-2003 ಸೆಕ್ಷನ್ 5ರ ಉಲ್ಲಂಘನೆಯಾಗಿದೆ. ಟೀಸರ್ ಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಈ ಸಣ್ಣದೊಂದು ಎಚ್ಚರಿಕೆ ವಹಿಸದ ಕಾರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟೀಸರ್ ಸಂಬಂಧ ಯಶ್ ಗೆ ನೋಟಿಸ್ ನೀಡಿದೆ.
Advertisement
Advertisement
