flixOye
Buzz

ದಾಖಲೆ ಮಾಡಿದ ‘ಕೆಜಿಎಫ್ 2’ ಟೀಸರ್

ಟೀಸರ್ ಲೀಕ್ ಆಗಿದ್ದ ಕಾರಣದಿಂದ ನಿಗದಿತ ಸಮಯಕ್ಕೆ ಮೊದಲೇ ಟೀಸರ್ ರಿಲೀಸ್ ‌ಮಾಡಬೇಕಾಯಿತು. ಟೀಸರ್ ಬಿಡುಗಡೆಯಾಗಿ ಒಂದು ದಿನದಲ್ಲಿ ಹೊಂಬಾಳೆ ಫಿಲ್ಮ್ಸ್‌ ಯೂಟ್ಯೂಬ್ ಚಾನಲ್ ನಲ್ಲಿ 78 ಮಿಲಿಯನ್‌ಗೂ ಜಾಸ್ತಿ ಜನ ವೀಕ್ಷಣೆಯಿಂದ ದಾಖಲೆ ಮಾಡಿ ಕಿಡಿಗೇಡಿಗಳಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ ಅಭಿಮಾನಿಗಳು.


ನಾನಾ ಚಿತ್ರರಂಗದ ಗಣ್ಯರು ಯಶ್ ಗೆ ಸಾಮಾಜಿಕ‌ ಜಾಲತಾಣದಲ್ಲಿ ಶುಭ ಕೋರಿದ್ದಾರೆ. ಪ್ಯಾನ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ರವರ ಲುಕ್ ನೋಡಿ ಫಿದಾ ಆಗಿದ್ದಾರೆ ಅಭಿಮಾನಿಗಳು. ‘ಕೆಜಿಎಫ್2’ ಟೀಸರ್ ಮೂಲಕ ಹವಾ ಎಬ್ಬಿಸಿದ್ದು, ಇನ್ನು ಸಿನಿಮಾ ಯಾವ ರೀತಿ ಇರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ. ಇಡೀ ಚಿತ್ರರಂಗವೇ ‘ಕೆಜಿಎಫ್ 2’ ಗೆ ಕಾಯುತ್ತಿದೆ. ಟೀಸರ್ ನಲ್ಲಿ ಪ್ರಕಾಶ್ ರೈಯವರ ಖಡಕ್ ಧ್ವನಿ ಟೀಸರ್ ಇನ್ನಷ್ಟು ಮೆರಗು‌ ತಂದಿದೆ.

ಸಂಬಂಧಿತ · Related