flixOye
Buzz

ಕೆಂಡಸಂಪಿಗೆ ಖ್ಯಾತಿಯ ವಿಕ್ಕಿ ವರುಣ್ ‘ಕಾಲಾಪತ್ಥರ್’ ಸಿನಿಮಾದ ಪೋಸ್ಟರ್ ರಿಲೀಸ್

ಕೆಂಡಸಂಪಿಗೆ‌ ಮತ್ತು ಕಾಲೇಜ್‌ಕುಮಾರ ಖ್ಯಾತಿಯ ನಟ ವಿಕ್ಕಿ ವರುಣ್ ಕಾಲೇಜ್‌ಕುಮಾರ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದು, ಈಗ ತಮ್ಮ ಮುಂದಿನ‌ ಚಿತ್ರ ಅನೌನ್ಸ್ ಮಾಡಿದ್ದಾರೆ ವಿಕ್ಕಿ. ನಟ ರಕ್ಷಿತ್ ಶೆಟ್ಟಿಯವರ ಸಹವರ್ತಿ ಚೇತನ್ ನಿರ್ದೇಶಿಸಿಲಿರುವ “ಕಾಲಾಪತ್ಥರ್” ಚಿತ್ರದಲ್ಲಿ‌ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ವಿಕ್ಕಿ ವರುಣ್.

ರಾಮ ರಾಮ ರೇ ಖ್ಯಾತಿಯ ಡಿ.ಸತ್ಯ ಪ್ರಕಾಶ್ ಚಿತ್ರಕ್ಕೆ ಕಥೆ ಬರೆದಿದ್ದು, ಎಚ್.ಪಿ.ನವೀನ್ ನಿರ್ಮಾಣದ ವಿಭಿನ್ನ ಕಥೆಯೊಂದಿರುವ “ಕಾಲಾಪತ್ಥರ್ ” ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಕಳೆದ ವರ್ಷವೇ ಈ ಚಿತ್ರ ಸೆಟ್ಟೆರಬೇಕಿತ್ತು. ಆದರೆ ಕೊವೀಡ್ ನಿಂದಾಗಿ ಅದು ಸಾಧ್ಯವಾಗಲಿಲ್ಲ. ಈಗ ಫೆಬ್ರವರಿ ಯಲ್ಲಿ ಶೂಟಿಂಗ್ ಮಾಡಲು‌ ತಯಾರಿ ನಡೆಸಿದೆ ಚಿತ್ರತಂಡ.

ಸಂಬಂಧಿತ · Related