‘ರಾಧಾರಮಣ’ ರಾಧಾ ಪಾತ್ರಕ್ಕೆ ಕಿರುತೆರೆಯ ಮತ್ತೋರ್ವ ನಟಿ ಕಾವ್ಯ ಗೌಡ ಎಂಟ್ರಿ

Published on

620 Views
Advertisement

ಕಲರ್ಸ್ ಕನ್ನಡ ವಾಹಿನಿ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ರಾಧಾರಮಣ. ಹಿಂದಿನ ಕಾಲದ ಮುದುಕ, ಮುದುಕಿಯರಿಂದ ಹಿಡಿದು ಈಗಿನ ಕಾಲದ ಯುವತಿ, ಯುವಕರ ವರೆಗೂ ರಾತ್ರಿ 9 ಗಂಟೆಯಾದ್ರೆ ಟಿವಿ ಮುಂದೆ ಹಾಜರ್ ಆಗಿ ನೋಡುವ ಧಾರಾವಾಹಿ ಇದಾಗಿದ್ದು, ಅದಕ್ಕೆ ರಾಧಾರಮಣ ಧಾರಾವಾಹಿ ಟಿ.ಆರ್.ಪಿಯಲ್ಲೂ ಮುಂದಿದೆ.

ರಾಧಾ ಪಾತ್ರದ ಮೂಲಕ ಎಲ್ಲರ ಮನೆಮಾತಾಗಿದ್ದ ರಾಧಾ ಮಿಸ್ ಖ್ಯಾತಿಯ ಶ್ವೇತಾ ಪ್ರಸಾದ್ ಈಗ ಸೀರಿಯಲ್ ನಿಂದ ಹೊರಬಂದಿದ್ದಾರೆ. ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರುವ ಶ್ವೇತಾ ಪ್ರಸಾದ್ ಅವರ ಈ ನಿರ್ಧಾರ ಬಹಿರಂಗವಾಗುತ್ತಿದ್ದ ಕ್ಷಣ ಅನೇಕರು ಬೇಸರಗೊಂಡಿದ್ದು, ಮುಂದೆ ಈ ಪಾತ್ರವನ್ನು ಯಾರೂ ಮಾಡ್ತಾರೆ ಎಂಬ ಚರ್ಚೆಯಲ್ಲಿ ತೊಡಗಿಕೊಂಡಿದ್ದರು. ಆದರೆ ಈ ಕುತೂಹಲಕ್ಕೆ ಒಂದು ಹಂತದ ಉತ್ತರ ಸಿಕ್ಕಿದೆ. ಕಿರುತೆರೆ ಧಾರಾವಾಹಿಗಳ ಪೈಕಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಧಾ ಪಾತ್ರಕ್ಕೆ ಕಿರುತೆರೆಯ ಮತ್ತೋರ್ವ ನಟಿ ಕಾವ್ಯ ಗೌಡಎಂಟ್ರಿ ಆಗಿದ್ದಾರೆ.

Advertisement


ಕಾವ್ಯ ಗೌಡ ಕೂಡ ಕಿರುತೆರೆ ನಟಿ. ಪ್ಯಾಟೇ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋ ಮೂಲಕ ಟಿವಿ ಲೋಕಕ್ಕೆ ಎಂಟ್ರಿಯಾದ ಕಾವ್ಯ ಗೌಡ, ಶುಭವಿವಾಹ, ಮೀರಾ ಮಾಧವ ಹಾಗೂ ಗಾಂಧಾರಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಆರ್.ಜೆ ರೋಹಿತ್ ಅಭಿನಯಿಸಿದ್ದ ಬಕಾಸುರ ಸಿನಿಮಾದಲ್ಲೂ ನಟಿಸಿದ್ದಾರೆ.

ಸುಮಾರು ಎರಡೂವರೆ ವರ್ಷದಿಂದ ರಾಧಾರಮಣ ಧಾರಾವಾಹಿಯಲ್ಲಿ ರಾಧಾ ಪಾತ್ರ ಮಾಡುತ್ತಿರುವ ಶ್ವೇತಾ ಪ್ರಸಾದ್ ಈಗ ಕಿರುತೆರೆಯಿಂದ ಬ್ರೇಕ್ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ. ಒಂದು ವರ್ಷ ಅಗ್ರಿಮೆಂಟ್ ಹಾಕಿಕೊಂಡಿದ್ದ ಶ್ವೇತಾ ಪ್ರಸಾದ್ ಅದಕ್ಕೂ ಮೇಲೆ ವರ್ಷ ಕಳೆದರೂ ಸುಮ್ಮನಿದ್ದರು. ಆದ್ರೀಗ, ನನಗೆ ಬ್ರೇಕ್ ಬೇಕು ಎಂಬ ಕಾರಣದಿಂದ ಧಾರಾವಾಹಿಯಿಂದ ಹಿಂದೆ ಸರಿಯುತ್ತಿದ್ದಾರೆ ಹಾಗೇ ಮುಂದೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com