ಕಾವ್ಯಾಂಜಲಿ “ಮದುವೆ ದಿಬ್ಬಣ” ಸೊಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ

Published on

420 Views
Advertisement

ಉದಯ ಟಿವಿಯ ಯಶಸ್ವಿ ಧಾರಾವಾಹಿಗಳಲ್ಲಿ ಒಂದಾದ ಕಾವ್ಯಾಂಜಲಿ ತನ್ನ ವಿಭಿನ್ನ ಕಥಾಹಂದರದಿಂದ ಜನರ ಮನಸು ಗೆದ್ದಿದೆ. ಅಕ್ಕ ತಂಗಿಯರ ಬಾಂಧವ್ಯದ ಜೊತೆಗೆ ಸ್ನೇಹ – ಪ್ರೀತಿಯ ಹೊಸ ಆಯಾಮವನ್ನ ಜನರಿಗೆ ಪರಿಚಯ ಮಾಡಿಕೊಟ್ಟಿರೊ ಕಾವ್ಯಾಂಜಲಿ ಧಾರಾವಾಹಿಯಲ್ಲಿ ಇದೀಗ ʼಮದುವೆ ದಿಬ್ಬಣʼ ಶುರುವಾಗಲಿದೆ.

ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ವರ ಸುಶಾಂತ್‌ಗೆ ಕಥಾನಾಯಕಿಯರಲ್ಲಿ ಒಬ್ಬಳಾದ ಕಾವ್ಯ ಜೊತೆ ಮದುವೆ ನಿಗಧಿಯಾಗಿದ್ದು, ಈ ಮದುವೆ ನೆರವೇರಲು ಇನ್ನೊಬ್ಬ ಕಥಾನಾಯಕಿ ಅಂಜಲಿಯ ತ್ಯಾಗ ಕಾರಣವಾಗಿದೆ. ಸುಶಾಂತ್‌ ತಾಯಿ ವೇದಾಳ ತಾಕೀತಿನಂತೆ ಅಂಜಲಿ, ಕಾವ್ಯ ಸುಶಾಂತ್‌ನ ಒಂದು ಮಾಡಿ ಎಲ್ಲರಿಂದ ದೂರವಾಗಲು ಗಟ್ಟಿ ನರ‍್ಧಾರ ಮಾಡಿರುತ್ತಾಳೆ. ಆದ್ರೆ ಸುಶಾಂತ್‌ಗೆ ಅಂಜಲಿ ಮೇಲೆ ಪ್ರೀತಿ ಇದ್ದು ಅದನ್ನ ವ್ಯಕ್ತಪಡಿಸೋಕೆ ಒದ್ದಾಡ್ತಿದ್ದಾನೆ. ಇದಾವುದರ ಅರಿವಿಲ್ಲದ ಕಾವ್ಯ ಹಸೆಮಣೆ ಏರೋ ಕನಸು ಕಾಣ್ತಿದ್ದಾಳೆ. ಪ್ರಾಣಸ್ನೇಹಿತೆಯ ಅಗಲಿಕೆಯ ನೋವಲ್ಲಿರೊ ಅಂಜಲಿ, ಪ್ರೀತಿ ಬೇನೆಯಲ್ಲಿ ಬೇಯುತ್ತಿರೊ ಸುಶಾಂತ್‌, ಕಣ್ಣಲ್ಲಿ ಕಂಕಣದ ಕನಸು ತುಂಬಿರೊ ಕಾವ್ಯ. ಸುಶಾಂತ್‌ ಪ್ರೀತಿ ಗೆಲುತ್ತೋ ಇಲ್ಲ ಅಂಜಲಿ ತ್ಯಾಗ ಗೆಲ್ಲುತ್ತೋ ಅನ್ನುವ ಕುತೂಹಲಕ್ಕೆ ತೆರೆ ಎಳೆಯಲಿದೆ ಧಾರಾವಾಹಿಯ ಈ ವಿಶೇಷ ಸಂಚಿಕೆಗಳು.

Advertisement


ರ‍್ಜರಿ ಸಿದ್ಧತೆಗಳೊಂದಿಗೆ ಮದುವೆಯ ಸ್ಪೆಷಲ್ ಸಂಚಿಕೆಗಳನ್ನ ಧಾರಾವಾಹಿ ತಂಡವು ಚಿತ್ರೀಕರಿಸಿದ್ದು ಸೋಮವಾರದಿಂದ ಶುಕ್ರವಾರ ವೈಭವದ ಮದುವೆಯ ಪ್ರಸಾರ ಉದಯ ಟಿವಿಯಲ್ಲಿ ಶುರುವಾಗಲಿದೆ.

Advertisement

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com