ಭಂಡಾರಿ ಬ್ರದರ್ಸ್ ಮೇಲೆ‌ ದೂರು ನೀಡಿದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ

Published on

712 Views
Advertisement

ಭಂಡಾರಿ ಬ್ರದರ್ಸ್ ಮೇಲೆ‌ ದೂರು ನೀಡಿದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ

Advertisement

‘ ರಾಜರಥ’ ಸಿನಿಮಾದ ಕುರಿತು ನಡೆದ ಸಂದರ್ಶನದಲ್ಲಿ Rapid ರಶ್ಮಿ ‘ ರಾಜರಥ ಸಿನಿಮಾ ನೋಡದವರು—-? ‘ ಎಂದು ಅನೂಪ್ ಭಂಡಾರಿ ಗೆ ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ ಅನೂಪ್ ‘ರಾಜರಥ ಸಿನಿಮಾ ನೋಡದವರು ಕಚಡ ನನ್ಮಕ್ಕಳು’ ಎಂದು ಹೇಳಿ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದರು. ನಂತರ ಅನೂಪ್ ಮತ್ತು ನಿರೂಪ್ ಸೋಶಿಯಲ್ ಮೀಡಿಯಾ ಮತ್ತು ಟಿವಿ ಚಾನೆಲ್ ನಲ್ಲಿ ಕ್ಷಮೆಯನ್ನು ಕೇಳಿದ್ದಾರೆ. ‘ಇದು‌ ಸಿನಿಮಾ ರಿಲೀಸ್ ಗೂ ಮುಂಚೆ ನಡೆದ ಸಂದರ್ಶನ. ನನಗೆ ಕನ್ನಡ ಪ್ರೇಕ್ಷಕರ ಮೇಲೆ ತುಂಬನೇ ಗೌರವವಿದೆ. ನಾನು ಉದ್ದೇಶ ಪೂರ್ವಕವಾಗಿ ಪದ ಬಳಸಿಲ್ಲ. ನನ್ನ ಮೊದಲ ಚಿತ್ರ ‘ರಂಗಿತರಂಗ’ ಸಿನಿಮಾ ಯಶಸ್ವಿಯಾಗಲು ಕಾರಣ ಕನ್ನಡ ಪ್ರೇಕ್ಷಕರು.

ನನ್ನ ಸಿನಿಮಾದಲ್ಲಿ ಈ ಪದವನ್ನು ಬಳಸಿದರಿಂದ ನನಗೂ‌ ಸಡನ್ನಾಗಿ ಕಚಡ ಪದ ಬಾಯಿಗೆ ಬಂತು ಅಷ್ಟೇ’ ಎಂದರು. ಭಂಡಾರಿ ಬ್ರದರ್ಸ್ ಮಾತುಗಳು ಕನ್ನಡಿಗರನ್ನು ಕೆರಳಿಸಿದ ಕಾರಣ ಅವರನ್ನು 6 ತಿಂಗಳ ಕಾಲ ಚಿತ್ರರಂಗದಿಂದ ಬಹಿಷ್ಕಾರ ಹಾಕ್ಬೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಜಯರಾಜ್ ನಾಯ್ಡು ದೂರು ದಾಖಲೆ ಮಾಡಿದ್ದಾರೆ. ಕನ್ನಡ ಸಿನಿಮಾವನ್ನು ನೋಡದೇ ಇರೋರು ಅಂತ ಹೇಳಿಲ್ಲ. ರಾಜರಥ ಸಿನಿಮಾವನ್ನು ನೋಡದವರು ಕಚಡಾಗಳು ಎಂದು ಸಂದರ್ಶನ ದಲ್ಲಿ ಹೇಳಿದ್ದಾರೆ. ಇದರಿಂದ ನೋವಾಗಿದೆ. ಕ್ಷಮೆ ಕೇಳಿದ್ದಾರೆ ಅನ್ನೋ ಮಾತ್ರಕ್ಕೆ ನಮ್ಮ ಹೋರಾಟ ನಿಲ್ಲಿಸೋಲ್ಲ. ವಾಣಿಜ್ಯ ಮಂಡಳಿಗೆ ಮನವಿಯನ್ನು ನೀಡಿದ್ದೇವೆ. Rapid ರಶ್ಮಿ ಹಾಗೂ ಚಿತ್ರದ ನಾಯಕಿ ಅವಂತಿಕಾ ಶೆಟ್ಟಿ ಇಲ್ಲಿವರೆಗೂ ಕ್ಷಮೆ ಕೇಳಿಲ್ಲ. ಅವರು ಕ್ಷಮೆ ಕೇಳ್ಬೇಕು ಎಂದು ಹೇಳಿದ್ದಾರೆ.

Advertisement

 

Advertisement

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com