flixOye
Buzz

ಶ್ರೀ ಹರಿಹರಪುರ ಮಠದ ಮೊರೆಹೋದ ಕಾಂತಾರ ರಿಷಭ್ ಶೆಟ್ಟಿ – ಭೇಟಿಯ ಹಿಂದಿದೆ ಈ ಬಲವಾದ ಕಾರಣ.

 

ಕಾಂತಾರ ಸಿನಿಮಾದ ಮೂಲಕ‌ ಕೇವಲ ಸಿನಿಜಗತ್ತನ್ನು ಬೆರಗುಗೊಳಿಸಿದ್ದಲ್ಲದೇ, ಥಿಯೇಟರ್ ಬಾಗಿಲನ್ನೇ ಕಾಣದವರೂ ಕೂಡ ಚಿತ್ರವನ್ನು ಕಾಣುವಂತೆ ಮಾಡಿದ ರಿಷಭ್ ಶೆಟ್ಟಿಯವರ ಸಕ್ಸಸ್ ಜರ್ನಿ ಬಗ್ಗೆ ಗೊತ್ತೇ ಇದೆ. ಕಮರ್ಷಿಯಲ್ ಚಿತ್ರಗಳ ನಡುವೆ ತುಳುನಾಡು – ಕುಂದನಾಡಿನ ಆಚರಣೆಗಳನ್ನು ಜಗತ್ತಿಗೇ ಪರಿಚಯಿಸಿ, ಸಿನಿಮಾ ರಂಗದಲ್ಲೂ ಯಶಸ್ಸು ಕಂಡ ರಿಷಭ್, ಇದೀಗ ಕಾಂತಾರ – 2 ರ ಮೇಕಿಂಗ್ ನಲ್ಲಿರುವುದಂತೂ ಸತ್ಯ. ಈ ನಡುವೆ ರಿಷಭ್, ಹಠಾತ್ತನೆ ಹರಿಹರಪುರ ಮಠಕ್ಕೆ ತನ್ನ ಕುಟುಂಬದೊಂದಿಗೆ ಭೇಟಿ ನೀಡಿದ್ದಾರೆ. ಈ ಭೇಟಿಯ ಹಿಂದಿನ ಕಾರಣ ಏನು? ಸತ್ಯ ಇಲ್ಲಿದೆ ನೋಡಿ.

Advertisement

ಈಗಾಗಲೇ ಕಾಂತಾರ – 2 ನಿರ್ಮಾಣಕ್ಕೆ ಎಲ್ಲಾ ಕಡೆಯಿಂದಲೂ ಗ್ರೀನ್ ಸಿಗ್ನಲ್ ದೊರೆತಿರುವಂತೆಯೇ, ದೈವವೂ ಕೂಡ ರಿಷಭ್ ಶೆಟ್ಟಿಯವರಿಗೆ ಅಭಯವನ್ನು ನೀಡಿದೆ. ಈಗಾಗಲೇ ಚಿತ್ರೀಕರಣದ ಆರಂಭಕ್ಕೆ ಮುನ್ನ ಇಷ್ಟದೈವ, ದೈವ ದೇವರಿಗೆ ಹರಕೆ-ಪೂಜೆಗಳನ್ನು ಸಲ್ಲಿಸಿರುವ ರಿಷಭ್ ಶೆಟ್ಟಿ ಇದೀಗ, ತನ್ನ ಪತ್ನಿ, ಮಕ್ಕಳು ಹಾಗೂ ಕುಟುಂಬದೊಂದಿಗೆ ಚಿಕ್ಕಮಗಳೂರಿನಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಹರಿಹರಪುರ ಮಠಕ್ಕೆ ಭೇಟಿ ನೀಡಿದ್ದಾರೆ.

ಮಠಕ್ಕೆ ಭೇಟಿ ನೀಡಿದ ರಿಷಭ್ ತನ್ನ ಕುಟುಂಬದೊಂದಿಗೆ ಮಠದ ಶ್ರೀಗಳಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದರು‌.

ಮಠದ ಅಭಿಮಾನಿಗಳೂ ಆಗಿರುವ ರಿಷಭ್, ತನ್ನ ಕುಟುಂಬದೊಂದಿಗೆ ಭೇಟಿ ನೀಡಿರುವುದರ ಹಿಂದೆ ಯಾವುದೇ ನಿಗೂಢ ಕಾರಣಗಳು ಇಲ್ಲವಾಗಿದ್ದು, ಮಠದ ಸ್ವಾಮೀಜಿಗಳ ಆಶೀರ್ವಾದ ಪಡೆಯಲು ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ರಿಷಭ್ ಕುಟುಂಬದ ಭೇಟಿಯ ಫೋಟೋಗಳನ್ನು ಆದರ್ಶ್ ಹೆಗ್ಡೆ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisement

https://x.com/adarshahgd/status/1793196753128214939?t=KnIFCbFeDKFyRjegIUHLYQ&s=08

ಮಠದ ರಮ್ಯರಮಣೀಯ ಹೊರಪೌಳಿಗಳಲ್ಲಿ ಕುಟುಂಬದೊಂದಿಗೆ ರಿಷಭ್ ಕ್ಲಿಕ್ಕಿಸಿಕೊಂಡಿರುವ ಫೋಟೊಗಳು ಎಲ್ಲೆಲ್ಲೂ ಹರಿದಾಡುತ್ತಿವೆ.

ಕಾಂತಾರ ಮೊದಲ ಭಾಗದಂತೆಯೇ ಕಾಂತಾರ 2 ಕೂಡ ಸೂಪರ್ ಹಿಟ್ ಆಗುವುದರೊಂದಿಗೆ, ಕನ್ನಡ ಸಿನೆಮಾದ ಕೀರ್ತಿ ಇನ್ನಷ್ಟು ಹೆಚ್ಚಲಿ ಎನ್ನುವುದೇ ಎಲ್ಲರ ಆಶಯ.

 

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ.

ಸಂಬಂಧಿತ · Related