ದೇಶದ್ಯಾಂತ ಬಿಡುಗಡೆಯಾದ ‘ಕೆಜಿಎಫ್’ ಈಗಾಗಲೇ 100 ಕೋಟಿ ಗಳಿಕೆಯತ್ತ ಸಾಗುತ್ತಿದೆ. ‘ಕೆಜಿಎಫ್’ ಸಿನಿಮಾದ ಯಶಸ್ಸಿನಿಂದ ‘ಕೆಜಿಎಫ್’ ಸಿನಿಮಾದಲ್ಲಿ ನಟಿಸಿದ ಎಲ್ಲ ಪಾತ್ರಗಳು ಸಹ ಗುರುತಿಸಿಕೊಂಡಿದೆ.

ಅದರಲ್ಲೂ ಯಶ್ ಬಾಲ್ಯದ ಪಾತ್ರದಲ್ಲಿ ರಾಕಿಯ ಸಣ್ಣ ಹುಡುಗನ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಈ ಪಾತ್ರವನ್ನು ಮಾಡಿದ ಹುಡುಗ 9ನೇ ತರಗತಿ ಓದುತ್ತಿರುವ ಅನ್ಮೋಲ್. ‘ಕೆಜಿಎಫ್’ ಸಿನಿಮಾದಲ್ಲಿ ಮೆಚ್ಚುಗೆಯನ್ನು ಪಡೆದ ಅನ್ಮೋಲ್ ಗೆ ಈಗ ಶ್ರೀ ಮುರಳಿ ಅವರ ಬಾಲ್ಯದ ಪಾತ್ರದಲ್ಲಿ ಅನ್ಮೋಲ್ ಗೆ ನಟಿಸುವ ಅವಕಾಶ ಬಂದಿದೆ. ಈಗಾಗಲೇ ಪೋಸ್ಟರ್ ಬಿಡುಗಡೆಗೊಳಿಸಿರುವ ‘ಮದಗಜ’ ಚಿತ್ರತಂಡ ಸದ್ಯದಲ್ಲೇ ಸಿನಿಮಾದ ಚಿತ್ರೀಕರಣ ಶುರು ಮಾಡಲಿದೆ. ‘ಮದಗಜ’ ಚಿತ್ರವನ್ನು ‘ಅಯೋಗ್ಯ’ ಚಿತ್ರ ನಿರ್ದೇಶನ ಮಾಡಿದ ಮಹೇಶ್ ಗೌಡ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.










