flixOye
Buzz

ಜನವರಿ 15 ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಗೆ ಪೂಜೆ

ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಾಯಕನಾಗಿ ನಟಿಸುತ್ತಿರುವ ‘ಸಲಾರ್’ ಚಿತ್ರದ ಮುಹೂರ್ತ ಪೂಜೆ ಸಮಾರಂಭ ಜನವರಿ 15 ರಂದು ಹೈದರಾಬಾದ್ ನಲ್ಲಿ ನಡೆಯಲ್ಲಿದ್ದು, ತೆಲುಗು ಮತ್ತು ಕನ್ನಡ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.

ಜನವರಿ ಕೊನೆಯಲ್ಲಿ ನಗರದ ಖಾಸಗಿ ಸ್ಟುಡಿಯೋ ದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಬಂದಿದೆ. ಸಲಾರ್ ನ ಫಸ್ಟ್‌ ಲುಕ್ ಪೋಸ್ಟರ್ ಈಗಾಗಲೇ ಬಿಡುಗಡೆಗೊಳಿಸಿದ್ದು, ಇದರಲ್ಲಿ‌ ನಟ ಪ್ರಭಾಸ್ ಮೀಸೆ ಮೇಲೆ ಕೈ ಇಟ್ಟು ಮತ್ತು ಎಡಗೈಯನ್ನು ರೈಫಲ್ ಮೇಲೆ ಇರಿಸಿದ್ದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.

ಸಂಬಂಧಿತ · Related