ಚಂದನವನದಲ್ಲಿ ಐಟಿ ದಾಳಿ, ಶಾಕ್ ಆದ ನಟರು…!!!

Published on

518 Views
Advertisement

ನಿನ್ನೆ ಬೆಳಿಗ್ಗೆ ಯಿಂದ ನಡೆದ ಐಟಿ ದಾಳಿ ಇಂದು ಕೂಡ ಮುಂದುವರಿದಿದೆ. ಯಶ್ ಮನೆಯಲ್ಲಿ ಐಟಿ ದಾಳಿ ಮುಂದುವರಿದಿದು, ಯಶ್ ಮನೆಗೆ ಬೀಗ ಹಾಕಿ ಪೋಲೀಸ್ ಭದ್ರತೆ ನೀಡಲಾಗಿದೆ. ಐಟಿ ಅಧಿಕಾರಿಗಳು ಕೆಲವು ದಾಖಲೆ, ಮಾಹಿತಿಗಳನ್ನು ಇಂದು ಪಡೆದಿದ್ದಾರೆ. ಯಶ್ ಮನೆಯಿಂದ ಈಗ ಇಬ್ಬರು ಐಟಿ ಅಧಿಕಾರಿಗಳು ತೆರಳಿದ್ದಾರೆ.
ಆಸ್ತಿ ವಿವರ ಹಾಗೂ ಆದಾಯದ ಕುರಿತು ಮಾಹಿತಿಗಳನ್ನು ಪಡೆದುಕೊಂಡಿರುವ ಅಧಿಕಾರಿಗಳು, ಯಶ್ ಪತ್ನಿ‌ ನಟಿ ರಾಧಿಕ ಮನೆಗೂ ಕೂಡ ಐಟಿ ದಾಳಿ ಮಾಡಿದ್ದಾರೆ. ಈಗಾಗಲೇ ಕೆಜಿ ಗಟ್ಟಲೆ ಚಿನ್ನ ಬೆಳ್ಳಿ ಸಿಕ್ಕಿರುವ ಮಾಹಿತಿ‌ ಇದೆ. ಯಶ್ ಬ್ಯಾಂಕ್‌ ಗಳಲ್ಲಿ 8 ಖಾತೆಯನ್ನು ಹೊಂದಿದು, ತಾಯಿಯೊಂದಿಗೆ ಜಂಟಿ ನಾಲ್ಕು ಖಾತೆಯನ್ನು ಹೊಂದಿದ್ದಾರೆ. ಮಂಡ್ಯದ ಬಳಿ ಜಮೀನೂ ಖರೀದಿ ಮಾಡಿ ಅದು ರಿಜಿಸ್ಟ್ರಾರ್ ಕೂಡ ಆಗಿದೆ‌ ಎಂಬ ಮಾಹಿತಿ ಐಟಿ ಮೂಲಗಳಿಂದ ಬಂದಿದೆ. ಮನೆಯಲ್ಲಿ ಎಲ್ಲರೂ ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಸ್ಪಂದಿಸಿದ್ದಾರೆ.


ಅದೇ ರೀತಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ರವರ ಮನೆಯಲ್ಲೂ ಐಟಿ ರೈಡ್ ಮುಂದುವರಿದಿದೆ. ರಾಕ್ ಲೈನ್ ವೆಂಕಟೇಶ್ ಮನೆಯಲ್ಲಿ ಮಹತ್ವದ ಮಾಹಿತಿಗಳು ಅಧಿಕಾರಿಗಳ ಕೈ ಸೇರಿದ್ದು, 1500 ಕೋಟಿಗಿಂತ ಅಧಿಕ ಆಸ್ತಿ ಹೊಂದಿರುವ ಸಾಧ್ಯತೆ ಇದೆಯೆಂಬ ಮಾಹಿತಿ ಬಂದಿದೆ. ಕುಟುಂಬಸ್ಥರ ಹೇಳಿಕೆಯನ್ನು ಪಡೆದಿರುವ ಐಟಿ‌ ಅಧಿಕಾರಿಗಳು ‌ಇಂದು‌ ಸಂಜೆಯವರೆಗೂ ಪರಿಶೀಲನೆ ‌ಮುಂದುವರಿಸಲಿದ್ದಾರೆ. ರಾಕ್ ಲೈನ್ 4 ವಿದೇಶಿ ಅಕೌಂಟ್ ಹೊಂದಿರುವುದರಿಂದ, ಸಂಪೂರ್ಣ ‌ಮಾಹಿತಿ ನೀಡುವಂತೆ ಡೆಡ್ ಲೈನ್ ಕೊಟ್ಟಿದ್ದಾರೆ ಅಧಿಕಾರಿಗಳು. ಎಲ್ಲ ದಾಖಲೆಗಳನ್ನು ‌ಸಿಜ್ ಮಾಡಿದ್ದಾರೆ ಅಧಿಕಾರಿಗಳು. ಮನೆಗೆ ಸ್ಥಳೀಯ ಪೊಲೀಸರು ‌ಕಾವಲಿದ್ದಾರೆ.

Advertisement

ಶಿವರಾಜ್ ಕುಮಾರ್ ‌ಪತ್ನಿ ಗೀತಾ ಶಿವರಾಜ್ ಕುಮಾರ್ ಐಟಿ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೂ ನಯವಾಗಿ‌ ಉತ್ತರಿಸಿದ್ದಾರೆ. ನಿನ್ನೇ ಪರಿಶೀಲನೆ ನಡೆದಿದ್ದು, ಐದು ಜನ ನಿನ್ನೆ ನಿರ್ಗಮನವಾಗಿದು, ಇನ್ನು ಉಳಿದ ಮೂರು ಜನ ಶಿವರಾಜ್ ಕುಮಾರ್ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಇಂದು 10 ಗಂಟೆಗೆ ವಿಚಾರಣೆ ಶುರುವಾಗಿದ್ದು, ಸಾಕಷ್ಟು ಮಾಹಿತಿಗಳನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ಸುದೀಪ್ ಮನೆಯ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಇನ್ನು ಪರಿಶೀಲನೆ ಮುಂದುವರಿಸಿದ್ದಾರೆ. ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಸುದೀಪ್ ವಿಷಯ ತಿಳಿಯುತ್ತಿದ್ದಂತೆ ಮನೆಗೆ ಬಂದರು. ನಂತರ ಸುದೀಪ್ ರವನ್ನು ವಿಚಾರಣೆಗೊಳಪಡಿಸಿದ ಅಧಿಕಾರಿಗಳು ಕೆಲವು ದಾಖಲೆ ಮಾಹಿತಿಗಳನ್ನು ಪಡೆದುಕೊಂಡರು. ಸಿಕ್ಕಿರುವ‌ ದಾಖಲೆಗಳನ್ನು‌ ಗೌಪ್ಯವಾಗಿ ಇಟ್ಟಿರುವ ಅಧಿಕಾರಿಗಳು ಸುದೀಪ್ ಮನೆಗೆ ಪೋಲಿಸ್ ಬಂದೋಬಸ್ತ್ ಒದಗಿಸಿದ್ದಾರೆ. ಸುದೀಪ್ ಪತ್ನಿ ಮತ್ತು ತಾಯಿಯನ್ನು‌ ವಿಚಾರಣೆ ನಡೆಸಿದ್ದಾರೆ.
ಇವರಷ್ಟೇ ಅಲ್ಲದೆ ‘ದಿ.ವಿಲನ್’ ಚಿತ್ರದ ನಿರ್ಮಾಪಕ, ‘ಕೆಜಿಎಫ್’ ನಿರ್ಮಾಪಕ, ನಟ ಪುನೀತ್ ರಾಜ್ ಕುಮಾರ್ ರವರ ಮನೆಯ ಮೇಲೂ ಐಟಿ ದಾಳಿ ನಡೆದಿದೆ. ಈಗಾಗಲೇ ಪುನೀತ್ ಮನೆಯಲ್ಲಿ ಮಾಹಿತಿ ದಾಖಲೆಯನ್ನು ಪಡೆದುಕೊಂಡಿದ್ದಾರೆ. ನಾಳೆ ಹುಬ್ಬಳ್ಳಿ ಯಲ್ಲಿ ನಡೆಯಬೇಕಾದ ‘ನಟ ಸಾರ್ವಭೌಮ’ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಭಾಗವಹಿಸಲು ಪುನೀತ್ ರಾಜ್‌ಕುಮಾರ್ ಗೆ ಅನುಮತಿಯೂ ಸಿಕ್ಕಿದೆ.

Advertisement

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com