ಈಶ್ವರಿ ಕಂಬೈನ್ಸ್ 50 ವರ್ಷಕ್ಕೆ ಕ್ರೇಜಿ ಸ್ಟಾರ್ ಕೊಡುಗೆ “ ರವಿ ಬೋಪಣ್ಣ

Published on

428 Views
Advertisement

ಅದೆಷ್ಟೋ ವರ್ಷಗಳಿಂದ ರಸಿಕ ನಾಯಕನಾಗಿ ಕನ್ನಡ ಚಿತ್ರರಂಗವನ್ನು ಆಳಿದವರು ಕ್ರೇಜಿ ಸ್ಟಾರ್ ರವಿಚಂದ್ರನ್. ಅತ್ಯುತ್ತಮ ಕಥೆಗಳುಳ್ಳ ಚಿತ್ರಗಳು, ಪ್ರೀತಿಯನ್ನು ಕೇಂದ್ರೀಕರಿಸಿದ ಉತ್ತಮ ಚಿತ್ರಗಳೊಂದಿಗೆ ಒಬ್ಬ ಲವ್ಲಿ ನಟನಾಗಿ ಗುರುತಿಸಿಕೊಂಡಿರುವ ಕ್ರೇಜಿ ಸ್ಟಾರ್ ಅಷ್ಟೇ ಪ್ರತಿಭಾವಂತ ನಿರ್ದೇಶಕನೂ ಹೌದು ಎನ್ನುವುದರಲ್ಲಿ ಎರಡು ಮಾತಿಲ್ಲ.

ಶಾಂತಿ ಕ್ರಾಂತಿ, ಸಿಪಾಯಿ, ರಣಧೀರ, ಮಲ್ಲ ಚಿತ್ರಗಳನ್ನು ನೋಡಿದವರು ಯಾರೂ ರವಿಚಂದ್ರನ್ ನಿರ್ದೇಶನಕ್ಕೆ ಮನಸೋಲದೆ ಇರಲಾರರು. ಅತ್ಯುತ್ತಮ ಸ್ಕ್ರೀನ್ ಪ್ಲೇ, ಪಾತ್ರ ಹಂಚಿಕೆ, ಎಲ್ಲಕ್ಕಿಂತ ಹೆಚ್ಚಾಗಿ ಸುಮಧುರ ಹಾಡುಗಳೊಂದಿಗೆ ಜನರ ಮನಸ್ಸನ್ನು ಗೆಲ್ಲುವ ರವಿಚಂದ್ರನ್ ಮತ್ತೆ ನಿರ್ದೇಶಕನಾಗಿ ಮಿಂಚಲಿದ್ದಾರೆ, ರವಿ ಬೋಪಣ್ಣ ಮೂಲಕ.
ಈಗಾಗಲೇ ಚಿತ್ರದ ಟೀಸರ್ ಎಲ್ಲೆಡೆ ಸದ್ದು ಮಾಡುತ್ತಿದೆ. ಒಬ್ಬ ಹಿರಿಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಂತೂ ನಿಜವಾದರೂ, ಅವರ ಪಾತ್ರದ ಹಿನ್ನೆಲೆ ಏನು?ಪಾತ್ರ ಎಲ್ಲಿಯವರೆಗೆ ಕೊಂಡುಹೋಗುತ್ತದೆ ಎನ್ನುವುದು ಇನ್ನಷ್ಟೇ ಅರ್ಥವಾಗಬೇಕಿದೆ.

Advertisement

ಚಿತ್ರತಂಡವೇ ಹೇಳಿದಂತೆ, ಪ್ರೇಕ್ಷಕರನ್ನು ಕುಳಿತಲ್ಲಿಂದ ಕಣ್ಣು ಮಿಟುಕಿಸದೆ ನೋಡುವಂತೆ ಹಿಡಿದಿಟ್ಟುಕೊಳ್ಳುವ ಚಿತ್ರವಾಗಲಿದೆ ಎನ್ನುವಂತೆ, ಚಿತ್ರದ ಟೀಸರ್ ನಲ್ಲಿಯೇ ಬಹಳ ಕುತೂಹಲ ಹುಟ್ಟುಹಾಕಿದ್ದಾರೆ ನಿರ್ದೇಶಕರಾದ ರವಿಚಂದ್ರನ್.

ಚಿತ್ರದಲ್ಲಿ ನಾಯಕ ಒಂದು ಬಹಳ ದೊಡ್ಡ ತ್ಯಾಗವನ್ನು ಮಾಡಿರುತ್ತಾನಂತೆ. ಆ ತ್ಯಾಗ ಏನು? ಯಾವುದಕ್ಕಾಗಿ ನಾಯಕ ತ್ಯಾಗವನ್ನು ಮಾಡುತ್ತಾನೆ? ಆ ತ್ಯಾಗದಿಂದ ಉಂಟಾಗುವ ಪರಿಣಾಮಗಳೇನು? ಇವೆಲ್ಲವನ್ನೂ ಚಿತ್ರ ಬಿಡುಗಡೆಯಾದ ಮೇಲಷ್ಟೇ ನೋಡಬೇಕಿದೆ.

Advertisement

ಚಿತ್ರದ ಇನ್ನೊಂದು ವಿಶೇಷ, ಈ ಚಿತ್ರದಲ್ಲಿ ಕಲಾವಿದರ ದಂಡೇ ತುಂಬಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮಾಣಿಕ್ಯದ ನಂತರ ರವಿಚಂದ್ರನ್ ಅವರ ಚಿತ್ರದಲ್ಲಿ ಮತ್ತೆ ಬಣ್ಣ ಹಚ್ಚಿದ್ದು, ಚಿತ್ರಕ್ಕೆ ಇನ್ನಷ್ಟು ತಾರಾಮೆರುಗು ತಂದಿಟ್ಟಿದೆ. ಚಿತ್ರದಲ್ಲಿ ಇಬ್ಬರು ಪ್ರಮುಖ ನಾಯಕ ನಟರುಗಳೇ ನಟಿಸುತ್ತಿರುವುದರಿಂದ, ಚಿತ್ರದಲ್ಲಿ ಈರ್ವರ ಪಾತ್ರಗಳ ತೂಕದ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿದೆ.

ಟೀಸರ್ ನಲ್ಲಿ ರವಿಚಂದ್ರನ್ ಅವರು ಪೋಲಿಸ್ ಲುಕ್ ನಲ್ಲಿ ಕಾಣಿಸಿರುವುದು ಹಾಗೂ ಕಿಚ್ಚ ಸುದೀಪ್ ಅವರು ಲಾಯರ್ ಲುಕ್ ನಲ್ಲಿ ಕಾಣಿಸಿರುವುದು ಹೌದಾದರೂ ಕೂಡ, ಅವರ ಪಾತ್ರದ ಬಗ್ಗೆ ಇನ್ನೂ ಯಾವ ಸುಳಿವನ್ನೂ ಬಿಟ್ಟುಕೊಡದೆ ಸಿನಿಪ್ರಿಯರನ್ನು ಕಾಡುತ್ತಿದೆ ರವಿ ಬೋಪಣ್ಣ ಚಿತ್ರತಂಡ.

Advertisement

ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಸೂಕ್ತ ಹಾಡುಗಳ ಮೂಲಕ ವಿಶೇಷವಾಗಿ ಕಾಣುವ ಚಿತ್ರದ ಒಟ್ಟು ಕಥೆಯ ಪುಟ್ಟ ಎಳೆ, ತ್ಯಾಗವನ್ನೇ ಆಧರಿಸಿದ್ದು ಎನ್ನುವುದು ಅರ್ಥವಾದರೂ ಅದನ್ನು ತಾನಾಗಿ ಅರ್ಥೈಸಿಕೊಳ್ಳುವಲ್ಲಿ ಪ್ರೇಕ್ಷಕನನ್ನು ಸೋಲಿಸುತ್ತದೆ ಚಿತ್ರತಂಡ.

ಇನ್ನು ಈ ಚಿತ್ರದಲ್ಲಿ ರವಿಚಂದ್ರನ್ ಹಾಗೂ ಸುದೀಪ್ ಅವರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದರೆ, ಬಾಹುಬಲಿ ಶಿವಗಾಮಿದೇವಿ ಖ್ಯಾತಿಯ ರಮ್ಯಾ ಕೃಷ್ಣ ಮತ್ತೆ ಕನ್ನಡದಲ್ಲಿ ಬಣ್ಣ ಹಚ್ಚಲಿದ್ದಾರೆ. ಇವರಲ್ಲದೆ, ರವಿಶಂಕರ್ ಗೌಡ, ಕಾವ್ಯಾ ಶೆಟ್ಟಿ., ಹಿರಿಯ ನಟರಾದ ಜೈ ಜಗದೀಶ್, ಮೋಹನ್ ಶಂಕರ್ ಮುಂತಾದವರು ಈ ಚಿತ್ರದಲ್ಲಿ ಪಾತ್ರ ಪೋಷಣೆಯನ್ನು ಮಾಡಲಿದ್ದಾರೆ.

ಚಿತ್ರವನ್ನು ಅಜೀತ್ ನಿರ್ಮಿಸಿದ್ದು, ಚಿತ್ರದ ಬಗ್ಗೆ ಕುತೂಹಲವನ್ನು ಸದ್ಯದಲ್ಲೇ ಟ್ರೈಲರ್ ಮತ್ತು ಸಿನಿಮಾ ಬಿಡುಗಡೆಯ ಮೂಲಕ ಹರಿಸಲಿದೆ ಚಿತ್ರತಂಡ.

Advertisement

ಒಂದೊಳ್ಳೆ ಚಿತ್ರಕ್ಕೆ ಆಲ್ ದಿ ಬೆಸ್ಟ್.

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com