ಸೇವಂತಿ 100ರ ಸಂಚಿಕೆಯ ಸಂಭ್ರಮದಲ್ಲಿ “ಸೇವಂತಿ ಜೊತೆ ಶೃತಿ ಸೇರಿದಾಗ”

Published on

373 Views
Advertisement

ಚಲನಚಿತ್ರ ನಟಿ ಶೃತಿಯವರನ್ನು ಕಿರುತೆರೆಯಲ್ಲಿ ಕಾಣುವ ಅವಕಾಶವನ್ನು ಉದಯ ಟಿವಿ ಒದಗಿಸುತ್ತಿದೆ. ಸರೆಗಮಾ ಇಂಡಿಯಾ ಲಿಮಿಟೆಡ್ ನಿರ್ಮಾಣ ದಲ್ಲಿ, ಶ್ರೀನಿವಾಸ್ ಶಿಡ್ಲಘಟ್ಟ ನಿರ್ದೇಶನದಲ್ಲಿ ಪ್ರತಿದಿನ ರಾತ್ರಿ 7.30ಕ್ಕೆ ಉದಯಟಿವಿ ಯಲ್ಲಿ ಮೂಡಿಬರುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ವಿಶೇಷ ಅತಿಥಿ ಕಲಾವಿದೆಯಾಗಿ ಭಾಗವಹಿಸುತ್ತಿರುವ ಶೃತಿ ಯವರು, ಇದೇ ಮೊದಲಬಾರಿಗೆ ಕಿರುತೆರೆಯಲ್ಲಿ ಬಣ್ಣ ಹಚ್ಚಿಕೊಳ್ಳುತ್ತಿದ್ದಾರೆ.

ಸೇವಂತಿ ಧಾರಾವಾಹಿ ಇದೀಗ ನೂರನೇ ಸಂಚಿಕೆಯ ಹೊಸ್ತಿಲಲ್ಲಿದ್ದು, ವೀಕ್ಷಕರ ಮನಗೆಲ್ಲುತ್ತಾ ಸಾಗಿದೆ. ಮೋಸಕ್ಕೆ ಒಳಗಾಗಿ ಜೈಲು ಸೇರಿರುವ ಸಾಕು ತಂದೆಯನ್ನು ಬಿಡಿಸುವ ಸಲುವಾಗಿ ಸೇವಂತಿ ಒಂದು ವರ್ಷದ ಒಪ್ಪಂದದ ಮೇರೆಗೆ ಲಾಯರ್ ಅರ್ಜುನನನ್ನು ಗುಟ್ಟಾಗಿ ಮದ್ವೆಯಾಗಿರುತ್ತಾಳೆ.

ಸೇವಂತಿಗೆ ಪರಿಚಯ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿ ಶೃತಿ, ಅವಳಿದ್ದ ಆಶ್ರಮಕ್ಕೆ ಹೋದಾಗ ಈ ಎಲ್ಲಾ ವಿಷಯವೂ ತಿಳಿಯುತ್ತದೆ. ಸೇವಂತಿಯನ್ನ ಭೇಟಿಯಾಗಲು ನಟಿ ಶೃತಿ ನೇರವಾಗಿ ಅರ್ಜುನ್ ಮನೆಗೆ ಬರುತ್ತಾರೆ. ಶೃತಿಯ ಆಗಮನ ಮನೆಯವರೆಲ್ಲರಿಗೂ ಖುಷಿ ಕೊಡುತ್ತದೆ. ಅಲ್ಲೆ ಇರುವ ಶೃತಿಗೆ, ಅರ್ಜುನ್ ಸೇವಂತಿಯ ಒಪ್ಪಂದದ ಮದ್ವೆ ಅನ್ನೋದು ಗೊತ್ತಿಲ್ಲದಿದ್ದರೂ ಅವರಿಬ್ಬರ ಒಡನಾಟವನ್ನ ಸೂಕ್ಷ್ಮವಾಗಿ ಗಮನಿಸುತ್ತಾರೆ ಹಾಗೂ ಒಂದು ಮಹತ್ವದ ಕಾರ್ಯವನ್ನ ಮನೆಯವರ ಸಮ್ಮುಖದಲ್ಲೆ ನಡೆಸಿಕೊಡುತ್ತಾರೆ. ಸೇವಂತಿ ಅರ್ಜುನ್ ಪಾಲಿಗೆ ಶೃತಿ ಅವರ ಆಗಮನ ಹೊಸ ತಿರುವು ನೀಡುತ್ತದೆ. ಆ ಮಹತ್ವದ ತಿರುವೇ ಈ ‘ಸೇವಂತಿ’ ಧಾರಾವಾಹಿಯ ವಿಶೇಷ ಸಂಚಿಕೆಯ ಕುತೂಹಲ. ಸೇವಂತಿ ಜೊತೆ ಶೃತಿ ಅವರೂ ಕಾಣಿಸಿಕೊಳ್ಳುತ್ತಿರುವುದು ವೀಕ್ಷಕರಿಗೂ ಹೊಸ ಉತ್ಸಾಹ ತುಂಬಲಿದೆ.

Advertisement

ಸೇವಂತಿ ಜೊತೆ ಶೃತಿ ಸೇರಿದಾಗ ವಿಶೇಷ ಸಂಚಿಕೆ ಸೋಮವಾರದಿಂದ ಶುಕ್ರವಾರ ರಾತ್ರಿ 7:30ಕ್ಕೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com