flixOye
Buzz

ಕಾಸ್ಟಿಂಗ್ ಕೌಚ್ ಬಗ್ಗೆ ಹರ್ಷಿಕಾ ಪೂಣಚ್ಚ ಹೇಳಿದ್ದೆನು ಗೊತ್ತಾ. .?

ಕಾಸ್ಟಿಂಗ್ ಕೌಚ್ ಬಗ್ಗೆ ಹರ್ಷಿಕಾ ಪೂಣಚ್ಚ ಹೇಳಿದ್ದೆನು ಗೊತ್ತಾ. .?

ದೇಶದಾದ್ಯಂತ ಕಾಸ್ಟಿಂಗ್ ಕೌಚ್ ಸಖತ್ ಸದ್ದು ಮಾಡುತ್ತಿದೆ..ನಡುವೆ ಕನ್ನಡದ ನಟಿಯೊಬ್ಬಳು ಕಾಸ್ಟಿಂಗ್ ಕೌಚ್ಬಗ್ಗೆ ಮಾತನಾಡಿದ್ದಾರೆ..ತನಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವವಾಗಿದೆ ಅಂತ ನಟಿ ಹರ್ಷಿಕಾ ಪೂಣಚ್ಚ ಹೇಳಿಕೊಂಡಿದ್ದಾರೆ..
ಬಾಲಿವುಡ್‌ನಲ್ಲಿ ತನಗೆ ಕಾಸ್ಟಿಂಗ್ ಕೌಚ್ ಅನುಭವವಾಗಿದೆ..ಕಾಸ್ಟಿಂಗ್ ಕೌಚ್ ನಿಂದಲೆ ಎರಡು ದೊಡ್ಡ ಪ್ರಾಜೋಕ್ಟ್ ಕೈ ತಪ್ಪಿ ಹೊಯ್ತು ಅಂತ ನಟಿ ಹರ್ಷಿಕಾ ಹೇಳಿದ್ದಾರೆ..ಕಾಸ್ಟಿಂಗ್ ಕೌಚ್ ನಟಿಯರ ಆಯ್ಕೆಗೆ ಬಿಟ್ಟ ವಿಚಾರ..ಹೆಣ್ಮಕ್ಳು ಸ್ಟ್ರಾಂಗ್ ಆಗಿ ಇದ್ರೆ ಯಾವುದಕ್ಕು ಹೆದರು ಅವಶ್ಯತೆ ಇರಲ್ಲ..ಸಿನಿಮಾ ಅಲ್ಲ ಅಂದ್ರೆ ಬೇರೆ ಉದ್ಯೊಗ ಸಾಕಷ್ಟಿದೆ..ಕಾಸ್ಟಿಂಗ್ ಕೌಚ್‌ಗೆ ಬಲಿಯಾಗದಿರಿ ಎಂದರು..ಇಂದು ಚಿಚ್ಚೆ ಸಿನಿಮಾದ ಟೀಸರ್ ರಿಲೀಸ್ ಸಮಯದಲ್ಲಿ ಹರ್ಷಿಕಾ ಈ ಮಾತನ್ನು ಹೇಳಿದ್ದಾರೆ..
” ನಾನು ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಿನಿಮಾ ಮಾಡಿದ್ದೇನೆ. ಆದರೆ ಸೌತ್ ಇಂಡಸ್ಟ್ರಿಯಲ್ಲಿ ನನಗೆ ಈ ರೀತಿಯ ಅನುಭವ ಆಗಿಲ್ಲ. ಬಾಲಿವುಡ್ ನಲ್ಲಿ ಮಾತ್ರ ಈ ರೀತಿಯ ನನಗೆ ಕೆಟ್ಟ ಅನುಭವ ಆಗಿದೆ.” ಎಂದು ಅವರು ತಿಳಿಸಿದ್ದಾರೆ. ಈ ಹಿಂದೆಯೇ ಕನ್ನಡದ ನಟಿಯರಾದ ಶೃತಿ ಹರಿಹರನ್, ಹರಿಪ್ರಿಯಾ, ರಾಗಿಣಿ ದ್ವಿವೇದಿ ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೆ ನೀಡಿದ್ದರು.

ಶ್ರೀ ರೆಡ್ಡಿ ಹೇಳಿಕೆಯನ್ನು ಬೆಂಬಲಿಸಿ ಕೆಲ ಟಾಲಿವುಡ್ ನಟಿಯರು ಪತ್ರಿಕಾಗೋಷ್ಟಿ ನಡೆಸಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದರು. ಇದಾದ ಬಳಿಕ ಕೇವಲ ಚಿತ್ರರಂಗ ಮಾತ್ರವಲ್ಲ. ಇತರೆ ಕ್ಷೇತ್ರಗಳಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂದು ಕೆಲವರು ಹೇಳಿದ್ದರು.

ಇದರ ಮಧ್ಯೆ ನಟಿ ಹರ್ಷಿಕಾ ಪೂಣಚ್ಚ ತಮಗೂ ಕಾಸ್ಟಿಂಗ್ ಕೌಚ್ ಅನುಭವವಾಗಿತ್ತು ಎಂದು ಹೇಳುವ ಮೂಲಕ ಬಾಲಿವುಡ್ ನ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ. ಕನ್ನಡ, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ತಾವು ನಟಿಸಿದ್ದು, ಇಲ್ಲಿ ತಮಗೆ ಅಂತಹ ಕೆಟ್ಟ ಅನುಭವವಾಗಿರಲಿಲ್ಲ. ಆದರೆ ಬಾಲಿವುಡ್ ನಲ್ಲಿ ತಮಗೆ ಕಹಿ ಅನುಭವವಾಗಿದ್ದು, ಈ ಕಾರಣಕ್ಕೇ ಬಿಗ್ ಪ್ರಾಜೆಕ್ಟ್ ನ ಚಿತ್ರವೊಂದನ್ನು ಕೈ ಬಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.

ಸಂಬಂಧಿತ · Related