flixOye
Buzz

ಕಲ್ಕಿ 2898 AD ಟಿಕೆಟ್‌ಗೆ ರಾಜಮೌಳಿ ಕ್ಯೂ ನಿಂತ ಫೋಟೋ ವೈರಲ್ – ಮೂವೀ ಪವರ್ ಎಂದ ನೆಟ್ಟಿಗರು

ಜಗತ್ತಿನಾದ್ಯಂತ ಬಹುನಿರೀಕ್ಷಿತ ಕಲ್ಕಿ 2898 AD ಚಿತ್ರ ಇಂದು ತೆರೆಕಂಡಿದ್ದು, ಈಗಾಗಲೇ ಸೂಪರ್ ಡೂಪರ್ ಹಿಟ್ ಆಗುವ ಎಲ್ಲಾ ಲಕ್ಷಣ ತೋರಿಸಿದೆ. ಬಹುತೇಕದ ದೇಶದ ಎಲ್ಲಾ ರಾಜ್ಯಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಕಲ್ಕಿ, ಪ್ರಭಾಸ್ ಮತ್ತು ಅಮಿತಾಭ್ ಬಚ್ಚನ್ ಅವರ ಅತ್ಯದ್ಭುತ ನಟನೆಯಿಂದ ಇನ್ನಷ್ಟು ಹೆಸರು ಗಳಿಸುತ್ತಿದೆ. ಈ ನಡುವೆ ಬಾಹುಬಲಿ, ಆರ್‌ಆರ್‌ಆರ್ ಗಳಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ಸ್ಟಾರ್ ಡೈರೆಕ್ಟರ್ ರಾಜಮೌಳಿಯವರು ಕಲ್ಕಿ ಚಿತ್ರದ ಟಿಕೆಟ್‌ಗಾಗಿ ಇಂದು ಬೆಳಗ್ಗೆಯೇ ಸಿನಿಮಾ ಥಿಯೇಟರ್ ಬಳಿ ಕ್ಯೂ ನಿಂತಿರುವ ಫೋಟೋ ವೈರಲ್ ಆಗಿದ್ದು, ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ರಾಜಮೌಳಿಯವರು ತಮ್ಮ ಪತ್ನಿ ರಮಾ ಮತ್ತು ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಎಂ.ಎಂ.ಕೀರವಾಣಿಯವರೊಂದಿಗೆ ಥಿಯೇಟರ್‌ ಒಂದರ ಮುಂದೆ ನಿಂತಿರುವ ಫೋಟೋ ವೈರಲ್ ಆಗಿದ್ದು, ‌ʼʼಎಲ್ಲ ಕಡೆ ಶೋ ಹೌಸ್‌ಫುಲ್‌ ಆಗಿದೆ. ರಾಜಮೌಳಿ, ಕೀರವಾಣಿ ಅವರೂ ಚಿತ್ರದ ಟಿಕೆಟ್‌ಗಾಗಿ ಕಾಯುವಂತಾಗಿದೆʼʼ ಎಂದು ಬರೆದು ವಿಕ್ಕಿ ಎನ್ನುವವರು ತನ್ನ ಎಕ್ಸ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಈ ಹಿಂದೆ ರಾಜಮೌಳಿಯವರು ಬೆಳ ರಿವ್ಯೂ ಬರೆದಿದ್ದು, ಕಲ್ಕಿ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ್ದರು. ಇದೊಂದು ಅದ್ಭುತ ಚಿತ್ರ. ಅಮಿತಾಭ್‌, ಪ್ರಭಾಸ್‌, ದೀಪಿಕಾ ಪಡುಕೋಣೆ ಪಾತ್ರಗಳು ಮನ ಮುಟ್ಟುವಂತಿದೆ. ಕಮಲ್‌ ಹಾಸನ್‌ ಅವರ ಲುಕ್‌ ಅಂತೂ ಅಮೋಘವಾಗಿದೆʼʼ ಎಂದು ಬರೆದುಕೊಂಡಿದ್ದರು. ತೆರೆಮೇಲೆ ಮ್ಯಾಜಿಕ್‌ ಸೃಷ್ಟಿಸುವ ರಾಜಮೌಳಿ ಅವರಂತಹ ನಿರ್ದೇಶಕರೇ ಶ್ಲಾಘಿಸಿರುವುದು ಚಿತ್ರತಂಡಕ್ಕೆ ಬೂಸ್ಟ್ ನೀಡಿತ್ತು.

ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರ ರಿಲೀಸ್ ಆದ ಮೊದಲ ದಿನವೇ ನೂರು ಕೋಟಿ ದಾಟಿದೆ ಎನ್ನಲಾಗಿದ್ದು, ಎಲ್ಲೆಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನೀವೂ ಈ ಚಿತ್ರವನ್ನು ಥಿಯೇಟರ್‌ನಲ್ಲಿ ವೀಕ್ಷಿಸಿ, ಅತ್ಯುತ್ತಮ ಚಿತ್ರಗಳನ್ನು ಪ್ರೋತ್ಸಾಹಿಸಿ.

ಸಂಬಂಧಿತ · Related