ರಾತ್ರೋ ರಾತ್ರಿಯಲ್ಲಿ ನಡೆದದ್ದು ಏನು ತಿಳಿಯಲು ಕಾಯಬೇಕು ಜನವರಿ 14ರ ವರೆಗೆ.

Published on

490 Views
Advertisement

ಹೊಸಬರೇ ಸೇರಿಕೊಂಡು ’ರಾತ್ರೋರಾತ್ರಿ’ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಸಿನಿಮಾವು ಸಾಯಂಕಾಲ ಆರು ಗಂಟೆಯಿಂದ ಬೆಳಿಗ್ಗೆ ಆರು ಗಂಟೆವರೆಗೆ ನಡೆಯುವ ಕತೆಯಾಗಿದೆ. ಟೆಂಪೋ ಚಾಲಕನಾಗಿರುವ ಆತನಿಗೆ ಅಮ್ಮನ ಆರೋಗ್ಯ ಸರಿ ಇಲ್ಲವೆಂದು, ಇದಕ್ಕಾಗಿ 50000 ವೆಚ್ಚವಾಗುತ್ತದೆಂದು ಆಸ್ಪತ್ರೆಯಿಂದ ಕರೆ ಬರುತ್ತದೆ. ಯಾರಿಂದಲೂ ಸಹಾಯವಾಗದೆ ದೇವರ ಮೊರೆ ಹೋಗುತ್ತಾನೆ. ನಂತರ ಪರಿಚಯದವನೊಬ್ಬ ಬಂದು ಒಂದು ಹೆಣವನ್ನು ಹೇಳಿದ ಸ್ಥಳಕ್ಕೆ ಸಾಗಿಸಿದರೆ ನೀನು ಕೇಳುವ ಹಣ ನೀಡುವುದಾಗಿ ತಿಳಿಸುತ್ತಾನೆ. ಅದರಂತೆ ಬಾಡಿಯನ್ನು ತೆಗೆದುಕೊಂಡು ಹೋಗುವಾಗ, ಅದು ಊರನ್ನು ಬಿಡದೆ ಗಾಡಿಗೆ ತೊಂದರೆ ಕೊಡುತ್ತದೆ. ಅದು ಏಕೆ, ಆಕೆ ಯಾರು? ಆಕೆಯ ಸಾವಿಗೆ ಕಾರಣವೇನು? ಎಂಬುದು ಸನ್ನಿವೇಶಗಳ ಮೂಲಕ ತೆರೆದುಕೊಳ್ಳುತ್ತದೆ.

ನಾಲ್ಕು ನೂರು ಹೆಚ್ಚು ಸಿನಿಮಾಗಳಿಗೆ ಫೈಟರ್ ಆಗಿರುವ ದಾಸ್ ಪುತ್ರ ಪವನ್‌ಕುಮಾರ್ ನಾಯಕ ಮತ್ತು ಪವನ್ ಚಿತ್ರಾಲಯ ಮೂಲಕ ಬಂಡವಾಳ ಹೂಡಿದ್ದಾರೆ. ಡೀಲ್‌ಮುರಳಿ ರಚನೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ರಚಿಕಾ ಹಾಗೂ ಡಯನಾ ನಾಯಕಿಯರು. ತಾಯಿ ಪಾತ್ರದಲ್ಲಿ ಗಂಗಮ್ಮ, ಖಳರುಗಳಾಗಿ ರಾಜ್‌ಕಾಂತ್-ವಿನಯ್‌ಕುಮಾರ್.ವಿ.ನಾಯಕ್, ಮಂತ್ರವಾದಿಯಾಗಿ ದಿವಾಕರ್, ನಗಿಸಲು ಹರೀಶ್ ಉಳಿದಂತೆ ಪ್ರಸನ್ನ, ಮುರಳಿ, ಮನೋಜ್, ಸುನಿಲ್ ಮುಂತಾದವರ ನಟನೆ ಇದೆ. ಬಿಡದಿ, ರಾಮನಗರ, ಮಂಡ್ಯಾ, ಮೈಸೂರು ಹೆದ್ದಾರಿ ರಸ್ತೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

Advertisement

ಟೆಕ್ಕಿ ಶ್ರೀಧರ್‌ನರಸಿಂಹನ್ ಅಮ್ಮನ ಕುರಿತ ಹಾಡಿಗೆ ಸಾಹಿತ್ಯ,ಸಂಗೀತ ಸಂಯೋಜಿಸಿ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಕಿರಣ್‌ಗಜ, ಸಂಕಲನ ಸೋಲೋಮನ್, ಸಾಹಸ ಆಕ್ಷನ್‌ಮೂರ್ತಿ ಅವರದು. ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ವಾಲ್ಮೀಖಿ ಬ್ರಹ್ಮಾನಂದ ಗುರೂಜಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ಸಿನಿಮಾವು ಜನವರಿ 14ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

Advertisement

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com