
ನಟ, ಬರಹಗಾರ, ನಿರ್ದೇಶಕ ಎಸ್ ಮೋಹನ್ ಇದ್ದ ಕಡೆ ನಗು, ಸಂಭ್ರಮ ಇರಲೇಬೇಕು. ಅದನ್ನು ಮೋಹನ್ ?ಹೆಲೋ ಮಾಮಾ( Hello Mama )?…ಥೂ ಹಂಗ್ ಕರಿಬೇಡ್ರೊ ಚಿತ್ರದಲ್ಲಿ ಮುಂದುವರೆಸಿಕೊಂಡು ಬಂದಿದ್ದಾರೆ.
ಬಿ ಕೆ ಚಂದ್ರಶೇಖರ್ ಅವರ ಪ್ರಗತಿ ಸಿನಿಮಾಸ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರವನ್ನ ಇತ್ತೀಚಿಗೆ ಸೆನ್ಸಾರ್ ಮಂಡಳಿ ವೀಕ್ಷಿಸಿ ಯು/ಎ ಅರ್ಹತಾ ಪತ್ರವನ್ನು ನೀಡಿದೆ. ರಾಜಣ್ಣ ಹಾಗೂ ಕೃಷ್ಣ ಪ್ರಸಾದ್ ಈ ಚಿತ್ರದ ಜಂಟಿ ನಿರ್ಮಾಪಕರು.

ಅನಿವಾರ್ಯವಾಗಿ ಹಾಗೂ ಕೆಲವೊಮ್ಮೆ ಅವಶ್ಯಕತೆ ಇಂದ ಸಮಾಜದಲ್ಲಿ ?ಮಾಮಾ? ಪದವನ್ನು ಬಳಕೆ ಮಾಡಲಾಗುತ್ತದೆ. ನಿರ್ದೇಶಕ ಮೋಹನ್ ಅವರು ಹಲವಾರು ಬಗೆಗಳಲ್ಲಿ ಆ ಪದವನ್ನು ಉಪಯೋಗ ಮಾಡಿಕೊಂಡಿದ್ದಾರೆ. ಮೋಹನ್, ಸಂಪ್ರತ, ಅರವಿಂದ್ ರಾವ್, ಭೂಮಿಕಾ, ಸೌಜನ್ಯ ಮುಖ್ಯ ತಾರಾಗಣದಲ್ಲಿ ಇದ್ದಾರೆ.
ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಎಸ್ ಮೋಹನ್ ಮಾಡಿದ್ದರೆ, ಡಿ ಪ್ರಸಾದ್ ಬಾಬು ಛಾಯಾಗ್ರಹಣ, ಧರಂ ದೀಪ್ ಸಂಗೀತ ಒದಗಿಸಿದ್ದಾರೆ.










