ತಪ್ಪು ಹುಡಗರದೇ ಅಲ್ಲ ಹುಡಿಗೀರದು ಇರುತ್ತೇ-ಹರಿಪ್ರಿಯಾ

Published on

769 Views
Advertisement

ತಪ್ಪು ಹುಡಗರದೇ ಅಲ್ಲ ಹುಡಿಗೀರದು ಇರುತ್ತೇ-ಹರಿಪ್ರಿಯಾ

ಕ್ಯಾಸ್ಟಿಂಗ್ ಕೌಚ್ ವಿಷಯಕ್ಕೆ ಸಂಬಂಧಿಸಿದಂತೆ ನಾನು ಯಾವಾಗಲೂ ನಂಬಿರುವ ಒಂದು ಮಾತಿದೆ. ನಾವು ಹೇಗೆ ವರ್ತಿಸುತ್ತೇವೆಯೇ, ಉಳಿದವರೂ ನಮ್ಮ ಜತೆ ಹಾಗೆಯೇ ವರ್ತಿಸುತ್ತಾರೆ ಹೀಗೆಂದು ತುಸು ಗಂಭೀರವಾಗಿಯೇ ಹೇಳಿದರು ಹರಿಪ್ರಿಯಾ. ಮತ್ತೆ ತಕ್ಷಣವೇ ಹಾಗೆಂದು ನನ್ನ ಈ ಮಾತನ್ನು ಶ್ರುತಿ ಹರಿಹರನ್ ಅವರ ಮಾತಿಗೆ ವಿರುದ್ಧ ಎಂದು ದಯವಿಟ್ಟು ಅಂದುಕೊಳ್ಳಬೇಡಿ ಎಂದೂ ಅವರು ಸ್ಪಷ್ಟನೆ ನೀಡಿದರು.
ನನಗೆ ಚಿತ್ರರಂಗದಲ್ಲಿ ಯಾವತ್ತೂ ಕೆಟ್ಟ ಅನುಭವ ಆಗಿಲ್ಲ. ಯಾಕೆಂದರೆ ನಾನು ಯಾರೊಂದಿಗೂ ಹಾಗೆ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದು ಹೇಳುವುದು ಅವರ ಉದ್ದೇಶವಾಗಿತ್ತು. ಇಷ್ಟೇ ಅಲ್ಲ, ಈ ರೀತಿಯ ಶೋಷಣೆಗಳಿಗೆ ಬರೀ ಗಂಡಸರನ್ನೇ ದೂಷಿಸುವುದೂ ಸರಿಯಲ್ಲ ಎಂದೂ ಹರಿಪ್ರಿಯಾ ಅನಿಸಿಕೆ. ಇಂಥ ವಿಷಯಗಳಲ್ಲಿ ಬರೀ ಹುಡುಗರನ್ನೇ ದೂಷಿಸುವುದು ಸಂಪೂರ್ಣ ತಪ್ಪು. ನಾನು ಸಂಪ್ರದಾಯಸ್ಥ ವಾತಾವರಣದಲ್ಲಿ ಬೆಳೆದವರು. ಕೆಲವು ಹುಡುಗಿಯರು ತುಂಬ ವಿಶಾಲ ಮನೋಧರ್ಮದವರು, ಪಾಶ್ವಾತ್ಯ ಸಂಸ್ಕೃತಿಯಲ್ಲಿ ಬೆಳೆದವರು ಇರುತ್ತಾರೆ. ಅವರಿಗೆ ಉಳಿದೆಲ್ಲದಕ್ಕಿಂತ ಪಾತ್ರ ಗಿಟ್ಟಿಸಿಕೊಳ್ಳುವುದೇ ಮುಖ್ಯವಾಗಿರುತ್ತದೆ. ಆಗ ಎರಡೂ ಕಡೆಯ ಒಪ್ಪಿಗೆಯ ಮೇರೆಗೇ ಸಂಬಂಧ ಇಂಥ ಸಂಗತಿಗಳು ನಡೆಯಬಹುದು. ಅಂಥವರನ್ನು ನೋಡಿ ಎಲ್ಲರೂ ಹಾಗೆಯೇ ಇರುತ್ತಾರೆ ಎಂದು ಭಾವಿಸುವ ಹುಡುಗರು ಎಲ್ಲರಿಂದಲೂ ಅದನ್ನೇ ನಿರೀಕ್ಷಿಸಬಹುದು ಎನ್ನುವ ಅವರು ಕೆಲವರು ಎಂದು ಮತ್ತೆ ಮತ್ತೆ ಒತ್ತಿಹೇಳುತ್ತಾರೆ.

Advertisement

ಕ್ಯಾಸ್ಟಿಂಗ್ ಕೌಚ್ ಕುರಿತ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದ ಹರಿಪ್ರಿಯಾ, ತಮ್ಮ ಸಿನಿಮಾಗಳ ಬಗ್ಗೆ ಮಾತು ಹೊರಳಿಸಿದರು. ನೀರ್ ದೋಸೆ ಸಿನಿಮಾದಲ್ಲಿ ನಟಿಸಿದ ನಂತರ ಮೂರು ತಿಂಗಳು ಅವರು ಯಾವ ಸಿನಿಮಾವನ್ನೂ ಒಪ್ಪಿಕೊಳ್ಳದೇ ಮನೆಯಲ್ಲಿ ಖಾಲಿ ಕೂತಿದ್ದರಂತೆ. ಅದು ನನ್ನ ಬದುಕಿನ ಖಿನ್ನತೆಯ ಕಾಲ ಎಂದು ನೆನಪಿಸಿಕೊಳ್ಳುತ್ತಾರೆ. ಅವಕಾಶಗಳು ಬರುತ್ತಿವೆ. ಆದರೆ ಒಪ್ಪಿಕೊಳ್ಳಲಾಗುತ್ತಿಲ್ಲ. ಯಾಕೆಂದರೆ ಎಲ್ಲ ಅವಕಾಶಗಳೂ ನೀರ್ ದೋಸೆ ಸಿನಿಮಾದ ಪಾತ್ರದ ಮಾದರಿಯಲ್ಲಿಯೇ ಇರುತ್ತಿದ್ದವು. ನನಗೆ ಆ ಇಮೇಜ್ ಅನ್ನು ಮುರಿಯಬೇಕಾಗಿತ್ತು. ಆದ್ದರಿಂದ ಯಾವ ಸಿನಿಮಾವನ್ನೂ ಒಪ್ಪಿಕೊಳ್ಳಲಿಲ್ಲ ಎನ್ನುತ್ತಾರೆ.

Advertisement

ಈಗ ಅವರಿಷ್ಟದ ಪಾತ್ರಗಳು ಸಾಲು ಸಾಲಾಗಿ ಅವರನ್ನು ಅರಸಿಕೊಂಡು ಬರುತ್ತಿವೆ. ನೀರ್ ದೋಸೆಯ ಗ್ಲಾಮರ್ ಪಾತ್ರವನ್ನು ಕನಕದ ಹಳ್ಳಿ ಹುಡುಗಿಯ ಪಾತ್ರ ಬ್ರೇಕ್ ಮಾಡಿದೆ. ಈಗ ತೆರೆಗೆ ಬರಲು ಸಜ್ಜಾಗಿರುವ ಸಂಹಾರದ ಪಾತ್ರದ ಮೇಲೂ ನನಗೆ ಸಾಕಷ್ಟು ನಿರೀಕ್ಷೆಗಳಿವೆ. ಮಹಾಭಾರತದಲ್ಲಿ ಒಂದು ಅದ್ಭುತವಾದ ನೃತ್ಯ ಮಾಡಿದ್ದೇನೆ. ಸೂಜಿದಾರದಲ್ಲಿ ಮಧ್ಯಮವರ್ಗದ ಹೆಣ್ಣುಮಗಳು, ಲೈಫ್ ಜತೆ ಒಂದ್ ಸೆಲ್ಫಿ ಮತ್ತೊಂದು ಭಿನ್ನ ಪಾತ್ರ. ಈಗ ಒಪ್ಪಿಕೊಂಡಿರುವ ಬೆಲ್ ಬಾಟಂ ಎಂಬತ್ತರ ದಶಕದ ಪತ್ತೇದಾರಿ ಕಥೆ.. ಹೀಗೆ ತಾವು ಗ್ಲ್ಯಾಮರ್ ಇಮೇಜ್ ಕಳಚಿಕೊಂಡು, ಮತ್ಯಾವುದೇ ಚೌಕಟ್ಟಿಗೆ ಸಿಲುಕದಷ್ಟು ಪಾತ್ರವೈವಿಧ್ಯ ಕಾಪಾಡಿಕೊಂಡಿರುವುದಕ್ಕೆ ಉದಾಹರಣೆಗಳನ್ನು ನೀಡುತ್ತಲೇ ಹೋದರು. ಜನರು ನನ್ನನ್ನು ನನ್ನ ಪಾತ್ರಗಳ ಮೂಲಕ ಗುರ್ತಿಸಬೇಕು. ಒಂದೇ ರೀತಿಯ ಪಾತ್ರಗಳಿಂದಲ್ಲ, ಭಿನ್ನ ಬಗೆಯ ಪಾತ್ರಗಳಿಂದ ಗುರ್ತಿಸಬೇಕು ಎನ್ನುವುದು ಅವರ ಅಂತರಂಗದ ಅಭೀಪ್ಸೆ.

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com