ಸೈಕಲ್ ಸವಾರಿಯಲ್ಲಿ ಹರಿಪ್ರಿಯ
ಸಿನಿಮಾ ನಟ, ನಟಿಯರಿಗೆ ಫಿಟ್ನೆಸ್ ಎನ್ನುವುದು ಬಹಳ ಮುಖ್ಯ. ಫಿಟ್ ಆಗಿ ಇರಬೇಕು ಅಂದರೆ ಸೈಕಲ್ ಸವಾರಿ ಮಾಡುವುದು ಉತ್ತಮ ಅಭ್ಯಾಸ. ಅದಕ್ಕೆ ಅನೇಕ ಸೆಲೆಬ್ರಿಟಿಗಳು ದಿನ ಸೈಕಲ್ ತುಳಿಯುತ್ತಾರೆ. ಈಗ ಕನ್ನಡದ ನಟಿ ಒಬ್ಬರು ಸೈಕಲ್ ಏರಿ ಕುಳಿತಿದ್ದಾರೆ. ವೀಕೆಂಡ್ ನಲ್ಲಿ ಅದರಲ್ಲಿಯೂ ಮುಂಜಾನೆಯ ಚಳಿಯಲ್ಲಿ ಹರಿಪ್ರಿಯಾ ಸೈಕಲ್ ನಲ್ಲಿ ರೌಂಡ್ ಹೊಡೆದಿದ್ದಾರೆ. ಜೊತೆಗೆ ಆ ಫೋಟೋವನ್ನು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಕೂಲ್ ವಾತಾವರಣ ಜೊತೆಗೆ ಸೈಕಲ್ ನಲ್ಲಿ ರೈಡ್ ಹೋಗುವುದು ಅವರಿಗೆ ಖುಷಿ ನೀಡಿದೆಯಂತೆ.ಹರಿಪ್ರಿಯಾ ಸದ್ಯ ‘ಬೆಲ್ ಬಾಟಂ’, ಹಾಗೂ ‘D/O ಪಾರ್ವತಮ್ಮ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯೂಸಿ ಇದ್ದು ಕೆಲಸದ ಒತ್ತಡದಲ್ಲಿಯೂ ಫಿಟ್ನೆಸ್ ಕಡೆ ಗಮನಹರಿಸಿದ್ದಾರೆ.

Advertisement
Advertisement