flixOye
Buzz

ಹಫ್ತಾ ಹಾಡುಗಳು ಮತ್ತು ಟ್ರೈಲರ್ ಶೀಘ್ರದಲ್ಲೇ ಬರಲಿವೆ

ಶೀರ್ಷಿಕೆ ಹಾಗೂ ಟೀಸರ್ ಮೂಲಕ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಹಫ್ತಾ ಚಿತ್ರದ ಹಾಡುಗಳು ಮತ್ತು ಟ್ರೈಲರ್ ಸದ್ಯದಲ್ಲೇ ಬಿಡುಗಡೆಯಾಗಲಿವೆ. ಕನ್ನಡ ಸಾಕಷ್ಟು ಹಿಟ್ ಚಿತ್ರಗಳಲ್ಲಿ ಖಳನಟನಾಗಿ
ನಟಿಸಿದ್ದ ವರ್ಧನ್ ತೀರ್ಥಹಳ್ಳಿ ಮೊದಲಬಾರಿಗೆ ನಾಯಕನಾಗಿ ಹಾಗೂ ಗೂಳಿಹಟ್ಟಿ ರಾಘವ್ ಅವರು ಜೊತೆಯಾಗಿ ನಟಿಸಿರುವ ಹಫ್ತಾ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿ ಚಿತ್ರದ ಮೇಲೆ ನಿರೀಕ್ಷೆಯನ್ನು ಹುಟ್ಟು ಹಾಕಿದೆ‌.

ಪ್ರಕಾಶ್ ಹೆಬ್ಬಾಳ ಅವರು ನಿರ್ದೇಶನ ಮಾಡಿರುವ ಈ ಚಿತ್ರವನ್ನು ಮೈತ್ರಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಗೌತಮ್ ಶ್ರೀವತ್ಸ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಸಂಬಂಧಿತ · Related