ಬರ್ತಿದೆ ಗೌಡರ ಪ್ರೀತಿಯ ‘ಸೈಕಲ್’ ಕಥೆ

Published on

349 Views
Advertisement

ರಾಮಾ ರಾಮಾ ರೇ’ ಚಿತ್ರದಲ್ಲಿ ನಟಿಸಿದ್ದ ಬಿಂಬಶ್ರೀ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಗೌಡ್ರ ಸೈಕಲ್” ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿವೆ. ಸಿನಿಮಾದ ಹಾಡುಗಳ ಬಿಡುಗಡೆ ಇದೇ ತಿಂಗಳಲ್ಲಿ ನಡೆಯಲಿದ್ದು, ಇದೇ ಜೂನ್ ತಿಂಗಳಲ್ಲಿ ಚಿತ್ರ ತೆರೆ ಕಾಣಬೇಕು ಎಂಬ ಉದ್ದೇಶ ಚಿತ್ರತಂಡದ್ದು.ಇದು ಹಳ್ಳಿ ಸೊಗಡಿನ ಕಥೆ ಹೊಂದಿದ್ದು, ಚಿತ್ರದಲ್ಲಿಊರಿನ ಗೌಡರೊಬ್ಬರ ಸೈಕಲ್ ಪ್ರೀತಿ ಕುರಿತ ಸಿನಿಮಾ ಈ ಸಿನಿಮಾವಾದ ಕಥೆಯಾಗಿದೆ. ಊರಿನ ಗೌಡರು ಮತ್ತು ಸೈಕಲ್ ನಡುವಿನ ಸಂಬಂಧವನ್ನು ಹಾಸ್ಯಮಯವಾಗಿ ಹೇಳುವುದು ಈ ಸಿನಿಮಾದ ಹೂರಣ. ‘ಹಳೆಯದಾಯಿತು ಎಂಬ ಕಾರಣಕ್ಕೆ ವಸ್ತುಗಳನ್ನು ಮತ್ತು ವಯಸ್ಸಾಯಿತು ಎಂಬ ಕಾರಣಕ್ಕೆ ಮನುಷ್ಯರನ್ನು ನಿರ್ಲಕ್ಷಿಸಬಾರದು’ ಎಂಬ ಸಂದೇಶವನ್ನೂ ಈ ಚಿತ್ರ ಹೊಂದಿದೆಯಂತೆ.

Advertisement

ನೀನಾಸಂನಲ್ಲಿ ಅಭಿನಯ ಕಲಿತು ಚಂದನವನಕ್ಕೆ ಕಾಲಿಟ್ಟ ಕಡಕ್ ಮಾತಿನ ಬಿಂಬಶ್ರೀ ನೀನಾಸಂ ಅಂದಗಾತಿ. ರಂಗಭೂಮಿ, ಸಿನಿಮಾ ಬಹುವಾಗಿ ಪ್ರೀತಿಸುವ ಮಲೆನಾಡಿನ ಈ ಚೆಲುವೆ ಈಗಾಗಲೇ ‘ರಾಮಾ ರಾಮಾ ರೇ’ ಸಿನಿಮಾದ ನಾಯಕಿಯಾಗಿ ಬೆಳ್ಳಿತೆರೆ ಪ್ರವೇಶಿಸಿ ಯಶ ಕಂಡಿದ್ದು, ಇದೀಗ ಇವರ ‘ಗೌಡ್ರು ಸೈಕಲ್’ ಬಹು ನಿರೀಕ್ಷಿತ ಸಿನಿಮಾವಾಗಿದೆ..

Advertisement

‘ರಣರಣಕ’ ಚಿತ್ರದ ನಂತರ ಶಶಿಕಾಂತ್ ಈ ಚಿತ್ರಕ್ಕೆ ನಾಯಕರಾಗಿದ್ದು , ಗೌಡರ ಪ್ರೀತಿಯ ಸೈಕಲ್ ಈ ಚಿತ್ರದ ಪ್ರಮುಖ ಪಾತ್ರಧಾರಿ ಎಂಬುದು ಸಿನಿತಂಡದ ಮಾತು. ಕೃಷ್ಣಮೂರ್ತಿ ಕವತ್ತಾರ್ ಸೇರಿದಂತೆ ಹಲವು ಹಿರಿಯ ನಟರು ಸಿನಿಮಾದಲ್ಲಿ ಇದ್ದಾರೆ. ಸವಿತಾ ರಾಜೇಶ್ ಚೌಟ ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ, ಪ್ರಶಾಂತ ಕೆ. ಯಳ್ಳಂಪಳ್ಳಿ ಅವರು ‘ಆ್ಯಕ್ಷನ್–ಕಟ್’ ಹೇಳುತ್ತಿದ್ದಾರೆ.

Advertisement

More Buzz

Buzz 10 hours ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 1 day ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 5 days ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 5 days ago

Mr. X: Kannada Cinema’s New Enigma Unfolds!

Buzz 7 days ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 1 week ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 1 week ago

Assi: ZEE5 Film Tackles Stark Reality with Urgent Voice

Buzz 1 week ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 1 week ago

Ustaad Bhagat Singh Hits Netflix: Kannada Fans Rejoice!

Buzz 1 week ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com