ಗಿರ್ ಗಿಟ್ಲೆ ಈಗೊಂದು ಶೀರ್ಷಿಕೆಯ ಸಿನಿಮಾವೊಂದು ಕಳೆದ ಎರಡು
ಮೂರು ವರ್ಷಗಳ ಹಿಂದೆ ಸೆಟ್ಟೇರಿತ್ತು. ಕಾರಣಾಂತರಗಳಿಂದ ಈ ಚಿತ್ರ ನಿಧಾನವಾಗಿಯೇ ಸಾಗುತ್ತಾ ಬಂತು ಆದರೆ ಆಗಾಗ ಸಾಮಾಜಿಕ
ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಚಿತ್ರದ ಪೋಸ್ಟರ್ ಗಳು ಹಾಗೂ
ಟ್ರೈಲರ್ ನೋಡುಗರ ಗಮನ ಸೆಳೆಯುವುದಲ್ಲದೇ ಚಿತ್ರದ ಮೇಲೆ ನಿರೀಕ್ಷೆಯನ್ನು
ಹುಟ್ಟು ಹಾಕಿದ್ದವು. ರವಿಕಿರಣ್ ಅವರು ಕಥೆ ಚಿತ್ರಕಥೆ ಸಂಭಾಷಣೆ ಬರೆದು
ನಿರ್ದೇಶನ ಮಾಡಿರುವ ಈ ಚಿತ್ರ ಸದ್ಯ ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲು
ಸಜ್ಜಾಗಿದೆ. ಚಿತ್ರದಲ್ಲಿ ಪ್ರದೀಪ್, ಚಂದ್ರು ಮತ್ತು ಗುರು ಎಂಬ ಮೂವರು
ನಟರು ಈ ಚಿತ್ರದಲ್ಲಿ ಪ್ರಮುಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ವೈಷ್ಣವಿ ಮತ್ತು ‘ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ’ ಚಿತ್ರದಲ್ಲಿ ರಾಧಿಕಾ ಪಂಡಿತ್ ಅವರಿಗೆ ಗೆಳತಿಯಾಗಿ ಕಾಣಿಸಿಕೊಂಡಿದ್ದ ಅದ್ವಿತಿ ಶೆಟ್ಟಿ ‘ಇವರಿಗೆ ನಾಯಕಿಯರಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಗಿರೀಶ್.ಎನ್, ತಿಮ್ಮರಾಜು.ಟಿ.ವಿ ಹಾಗೂ ವೆಂಕಟೇಶ್.ಎಸ್ ಅವರುಗಳು ನಿರ್ಮಾಣ ಮಾಡಿದ್ದಾರೆ.
ಉಳಿದಂತೆ ರಂಗಾಯಣ ರಘು, ಸತ್ಯ ಪ್ರಕಾಶ್, ಉದಯ್, ಪೆಟ್ರೋಲ್ ಪ್ರಸನ್ನ, ಕೋಟೆ ಪ್ರಭಾಕರ್, ಓಂ ಪ್ರಕಾಶ್ ರಾವ್, ರಾಕ್ಲೈನ್ ಸುಧಾಕರ್, ಮಿತ್ರ ಸೇರಿ ಇನ್ನೂ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ. ಸುರೇಶ್ ಛಾಯಾಗ್ರಹಣ, ಲಿಯೋ ಸಂಗೀತ, ಸತೀಶ್ ಬಾಬು ಹಿನ್ನೆಲೆ ಸಂಗೀತ ‘ಗಿರ್ಗಿಟ್ಲೆ’ಗೆ ಇದೆ.
ಸಂಬಂಧಿತ · Related
Buzz
Toxic Worldwide Release: Yash’s Character Posters, One by One
Buzz
ZEE5 Kannada Upcoming Originals: 8 New Titles Coming Soon
Buzz
Toxic Pre-Release Event: Rukmini Vasanth Speech Highlights
Buzz
‘ನೀ ನಂಗೆ ಅಲ್ಲವಾ’ ಮೊದಲ ಹಾಡು ‘ನೋ ನೋ…’ ಬಿಡುಗಡೆ
Buzz
ಭಾವಾಂತರ: ಕಾರ್ತಿಕ್ ಶರ್ಮರ ಕನಸು, ವಿಭಿನ್ನ ಪೋಸ್ಟರ್ಗೆ ಭಾರೀ ಚರ್ಚೆ
Buzz
ನಾಗಭೂಷಣ್ ಹೊಸ ಚಿತ್ರ: 90ರ ದಶಕದ ಕೌಟುಂಬಿಕ ಕಥೆ
Buzz
ಅಮೇರಿಕಾ ಅಮೇರಿಕಾ 2: ಹೊಸ ಕಥೆ, ಹಳೆಯ ಪ್ರೀತಿ!
Buzz
ಹುಬ್ಬಳ್ಳಿ ಹಂಟರ್ಸ್: ‘ಬೆಲ್ ಬಾಟಮ್’ ನಿರ್ಮಾಪಕರ ಹೊಸ ಸಿನಿಮಾ ಡಬ್ಬಿಂಗ್ ಪೂರ್ಣ
Buzz
Cocktail 2: Netflix Date for Romantic Comedy
📢 Never miss a Sandalwood updateNew movies, trailers & OTT updates — first.