flixOye
Buzz

ಈ ವಾರ ತೆರೆಗೆ ಬರಲಿದೆ ‘ಗೀತಾ’

ಗೋಲ್ಡನ್‌ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಗೀತಾ’ ಈ ಚಿತ್ರದಲ್ಲಿ ಗಣೇಶ್ ಗೋಕಾಕ್‌ ಹೋರಾಟದಲ್ಲಿ ಭಾಗಿಯಾದ ಕನ್ನಡದ ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ.


‘ಗೀತಾ’ ಚಿತ್ರಕ್ಕೆ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಹಾಗೂ ಸೈಯದ್ ಸಲಾಂ ಬಂಡವಾಳ ಹೂಡಿದ್ದಾರೆ. ವಿಜಯ್ ನಾಗೇಂದ್ರ ನಿರ್ದೇಶನ ಮಾಡಿರುವ ‘ಗೀತಾ’ ಇದೇ ವಾರ ಬಿಡುಗಡೆಯಾಗಲಿದ್ದು ವಿಶಾಲ ಕರ್ನಾಟಕದ ಹಂಚಿಕೆಯನ್ನು‌ ವಿತರಕ ಜಾಕ್ ಮಂಜು ಮಾಡುತ್ತಿದ್ದು, 150 ಚಿತ್ರಮಂದಿರಗಳು ಮತ್ತು 40 ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾವನ್ನು ಬಿಡುಗಡೆಗೊಳಿಸುವ ಯೋಜನೆ ಹಾಕಿಕೊಂಡಿದ್ದೆ ಚಿತ್ರತಂಡ.

ಚಿತ್ರದಲ್ಲಿ ಶಾನ್ವಿ ಶ್ರೀವತ್ಸ, ಮಲಯಾಳಂನ ಖ್ಯಾತ ನಟಿ‌ ಪ್ರಯಾಗ ಮಾರ್ಟಿನ್ ಸುಧಾರಾಣಿ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂತೋಷ ಆನಂದ ಚಿತ್ರಕ್ಕೆ ಮೂರು‌ ಹಾಡುಗಳನ್ನು ಬರೆದಿದ್ದಾರೆ. ರೂಬಿನ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

ಸಂಬಂಧಿತ · Related