ಕೋವಿಡ್ ನಂತರ ರಿಲೀಸಾಗ್ತಿರುವ 2ನೇ ಚಿತ್ರ ಗಡಿಯಾರ

Published on

380 Views
Advertisement

ತನ್ನ ಹೆಸರಿನಿಂದಲೇ ಕುತೂಹಲ ಕೆರಳಿಸುತ್ತಿರುವ ಹಾರರ್. ಥ್ರಿಲ್ಲರ್ ಚಿತ್ರ ಗಡಿಯಾರ ನವೆಂಬರ್ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ರಾಜಮನೆತನಗಳ ಇತಿಹಾಸವನ್ನು ನೆನಪಿಸುವಂಥ ವಿಷಯದ ಜೊತೆಗೆ, ಲವ್, ಕಾಮಿಡಿ, ಹಾರರ್, ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್ ನಂಥ ಎಲ್ಲಾ ರೀತಿಯ ಮನರಂಜನಾತ್ಮಕ ಅಂಶಗಳನ್ನು ನಿರ್ದೇಶಕ ಪ್ರಭಿಕ್ ಮೊಗವೀರ್ ಅವರು ಹೇಳಹೊರಟಿದ್ದಾರೆ. ವಿಭಿನ್ನ ಶೈಲಿಯ ಕಥಾ ಹಂದರ ಹೊಂದಿರುವ ಗಡಿಯಾರ ಕೋವಿಡ್ ನಂತರ ತೆರೆ ಕಾಣುತ್ತಿರುವ ದ್ವಿತೀಯ ಚಿತ್ರವಾಗಿದೆ. ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಾಜ್‍ದೀಪಕ್ ಶೆಟ್ಟಿ ಹಾಗೂ ಶೀತಲ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement

ಬಿಡುಗಡೆಗೂ ಮುನ್ನವೇ ಹಿಂದಿ, ತಮಿಳು, ತೆಲುಗು, ಮಳಯಾಳಂ ಭಾಷೆಗಳ ನಿರ್ಮಾಪಕರಿಂದ ಈ ಚಿತ್ರದ ಡಬ್ಬಿಂಗ್ ರೈಟ್ಸ್ ಗಾಗಿ ಭಾರೀ ಬೇಡಿಕೆ ಬರುತ್ತಿದೆ. ಕರಾವಳಿ ಮೂಲದವರಾದ ಪ್ರಬಿಕ್ ಮೊಗವೀರ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಸ್ವತ: ಅವರೇ ಬಂಡವಾಳವನ್ನೂ ಹೂಡಿದ್ದಾರೆ . ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಅವರದೇ. ದೀಪಿಕಾ ವಿನಯ್‍ಕುಮಾರ್‍ರಾವ್ ಮತ್ತು ಲಾವಣ್ಯ ಲೀಲಾಮೋಹನ ಅವರ ಸಹಕಾರದೊಂದಿಗೆ ಆತ್ಮ ಸಿನಿಮಾಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಮಾಜಿ ಪೆÇಲೀಸ್ ಕಮಿಷನರ್ ಎಸ್‍ಪಿ. ಸಾಂಗ್ಲಿಯಾನ, ಮಲಯಾಳಂನ ಎಮ್.ಟಿ.ರಿಹಾಜ್ ಹಾಗೂ ಬಾಲಿವುಡ್‍ನ ಗೌರಿಶಂಕರ್ ಈ ಚಿತ್ರದ ವಿಶೇಷ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ .

ಈ ಚಿತ್ರದ ಫಸ್ಟ್‍ಲುಕ್‍ನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಅಲ್ಲದೆ ಚಿತ್ರದ ಪೋಸ್ಟರ್ ಅನ್ನು ಸಚಿವ ವಿ.ಸೋಮಣ್ಣ ಅವರು ಅನಾವರಣಗೊಳಿಸಿದ್ದರು. ಹಾಗೂ ಚಿತ್ರದ ಶೀರ್ಷಿಕೆಯನ್ನು ಎಸ್.ಪಿ.ಸಾಂಗ್ಲಿಯಾನ ಮತ್ತು ಎಸ್‍ಪಿ. ಪ್ರಭಾಕರ್ ಬಾರ್ಕಿ ಅವರು ಬಿಡುಗಡೆ ಮಾಡಿದ್ದರು.

Advertisement

ಈ ಚಿತ್ರದಲ್ಲಿ ಯಶ್‍ಶೆಟ್ಟಿ, ಸುಚೇಂದ್ರಪ್ರಸಾದ್, ಶರತ್ ಲೋಹಿತಾಶ್ವ, ಪ್ರದೀಪ್ ಪೂಜಾರಿ, ಗಣೇಶ್ ರಾವ್, ರಾಧಾ ರಾಮಚಂದ್ರ, ಮನ್‍ದೀಪ್‍ರಾಯï, ಪ್ರಣಯಮೂರ್ತಿ, ರಾಜ್‍ಮುನಿ, ಮೋP್ಷÀಗೊಂಡಂ ರಾಘವೇಂದ್ರ, ಶ್ರೀನಿವಾಸ್, ವಿನಯ್‍ಕುಮಾರ್‍ರಾವ್, ಲೀಲಾಮೋಹನ್, ಸಂತೋಷ್‍ಗೌಡ, ದೇವರಾಜï, ಶರ್ಮಿತಾಶೆಟ್ಟಿ, ಸುರಕ್ಷಿತ್‍ಶೆಟ್ಟಿ, ಸ್ಪೂರ್ತಿ ಕರಡಿ, ದಬಾಂಗನಾ ಚೌದರಿ, ಪ್ರಿಯದರ್ಶಿನಿಗೌಡ, ಅರ್ಪಿತಾ ವೇಣೂರ್, ಶಿವಮೊಗ್ಗ ರಾಮಣ್ಣ ಸೇರಿದಂತೆ ಅನೇಕ ಪ್ರತಿಭಾವಂತರ ಅಭಿನಯವಿದೆ. ಶ್ಯಾಮ್ ಸಿಂಧನೂರು ಛಾಯಾಗ್ರಹಣ, ರಾಘವ್ ಸುಭಾಷ್ ಸಂಗೀತ ಈ ಚಿತ್ರಕ್ಕಿದೆ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com