flixOye
Buzz

ಮುಹೂರ್ತ ‌ಮುಗಿಸಿಕೊಂಡ ‘ಫಾರ್ ರಿಜಿಸ್ಟ್ರೇಷನ್’

ರಂಗಭೂಮಿಯಲ್ಲಿ‌ ತೊಡಗಿಸಿಕೊಂಡಿದ್ದ ನವೀನ್ ದ್ವಾರಕಾನಾಥ್ ನಿರ್ದೇಶನದ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾಕ್ಕೆ ನವೀನ್ ರಾವ್ ಬಂಡವಾಳ‌ ಹಾಕಿದ್ದು, ನಿರ್ದೇಶಕ ನವೀನ್ ದ್ವಾರಕಾನಾಥ್ ಹಾಗೂ‌ ನವೀನ್ ರಾವ್ ಇಬ್ಬರು ಬಾಲ್ಯ ಸ್ನೇಹಿತರಾಗಿದ್ದಾರೆ. ಈಗ ಒಟ್ಟಾಗಿ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಪೃಥ್ವಿ ಅಂಬರ್, ನಾಯಕಿಯಾಗಿ ಮಿಲನ್‌ ನಾಗರಾಜ್ ಕಾಣಿಸಿಕೊಳ್ಳಲಿದ್ದಾರೆ. ವಸಂತನಗರದ ಅಂಬಾಭವನಿ ದೇವಸ್ಥಾನದಲ್ಲಿ ‌ಚಿತ್ರದ ಮುಹೂರ್ತ ಸಮಾರಂಭ ನಡೆದಿದ್ದು, ನಟ ನಿಖಿಲ್ ಕುಮಾರಸ್ವಾಮಿ ಚಿತ್ರಕ್ಕೆ ಕ್ಲಾಪ್ ಮಾಡಿದರು. ನಿರ್ಮಾಪಕ ‌ನವೀನ್‌ ಕುಮಾರ್ ರವರ ಪುತ್ರ ನಿಶ್ಚಲ್ ಕ್ಯಾಮರಾ ಸ್ವೀಚ್ ಆನ್ ಮಾಡಿದರು.

ನಿಶ್ಚಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಚಿತ್ರದ ಚಿತ್ರೀಕರಣವೂ ಸಕಲೇಶಪುರ,‌ ಮಂಗಳೂರು, ಉಡುಪಿ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆಯಂತೆ. ಈ ಸಂದರ್ಭದಲ್ಲಿ ಚಿತ್ರದ ಬಗ್ಗೆ ಮಾತನಾಡಿದ‌ ನಾಯಕ ಪೃಥ್ವಿ ಅಂಬಾರ್ ‘ಇದು ಸಂಬಂಧಗಳ‌ ಸುತ್ತ‌ ನಡೆಯುವ‌ ಕಥೆ. ಇಲ್ಲಿ ರಿಜಿಸ್ಟರ್ ಆಗದ ಸಂಬಂಧಗಳು ಹೇಗಿರುತ್ತವೆ. ಅವುಗಳನ್ನು ಹೇಗೆ‌ ಒಂದಾಗಿಸುವುದು ಎಂಬುದೇ ಸಿನಿಮಾದ ಅಂಶ’ ಎಂದರು.

ನಾಯಕಿ ಮಿಲನ ನಾಗರಾಜ್ ಮಾತನಾಡಿ ‘ಶೀರ್ಷಿಕೆ ಕೇಳಿಯೇ ಸಿನಿಮಾ‌ ಇಷ್ಟವಾಯ್ತು. ಸದ್ಯದ ಜನರೇಷನ್ ಗೆ ಕಥೆ ಇಷ್ಟವಾಗುತ್ತದೆ. ಇಡೀ ತಂಡದ ಜೊತೆ‌ ಕೆಲಸ ಮಾಡುವುದೇ ಖುಷಿ ಎಂದರು’. ಚಿತ್ರಕ್ಕೆ ಸಂಭಾಷಣೆ ಬರೆಯುವುದರ ಜೊತೆಗೆ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ತಬಲಾ‌ ನಾಣಿ. ಇನ್ನುಳಿದಂತೆ‌ ತಾರಾಗಣದಲ್ಲಿ‌ ಸುಧಾರಣೆ, ಸುಧಾ ಬೆಳವಾಡಿ, ಬಾಬು ಹಿರಣ್ಣಯ್ಯ, ರಾಘು ರಾಮನಕೊಪ್ಪ ಮುಂತಾದವರಿದ್ದಾರೆ. ಚಿತ್ರಕ್ಕೆ ವಿವೇಕ್ ಛಾಯಾಗ್ರಹಣ ಮಾಡಲಿದ್ದು, ಚಿತ್ರದಲ್ಲಿ 5 ಹಾಡುಗಳಿದ್ದು, ಹರೀಶ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಸಂಬಂಧಿತ · Related