ನಟ ರಕ್ಷಿತ್‌ ಶೆಟ್ಟಿ ವಿರುದ್ಧ FIR!! – ಇಲ್ಲಿದೆ ನೋಡಿ ಕಾರಣ

Published on

591 Views
Advertisement

ಸ್ಯಾಂಡಲ್‌ ವುಡ್‌ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್‌ ಶೆಟ್ಟಿ ವಿರುದ್ಧ ಯಶವಂತಪುರ ಪೋಲೀಸ್‌ ಠಾಣೆಯಲ್ಲಿ ಎಫ್.ಐ.ಆರ್‌ ದಾಖಲಾಗಿದೆ. ಕಾಪಿ ರೈಟ್ಸ್‌ ನಿಯಮವನ್ನು ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ರಕ್ಷಿತ್‌ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ನಟ ರಕ್ಷಿತ್‌ ಶೆಟ್ಟಿ ನಿರ್ಮಾಣ ಮಾಡಿರುವ ಬ್ಯಾಚುಲರ್ಸ್‌ ಪಾರ್ಟಿ ಸಿನಿಮ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ʼಗಾಳಿಮಾತುʼ ಹಾಗೂ ʼನ್ಯಾಯ ಎಲ್ಲಿದೆʼಎಂಬ ಹಾಡುಗಳನ್ನು ಅನುಮತಿ ಇಲ್ಲದೆ ಚಿತ್ರದಲ್ಲಿ ಬಳಸಿದ್ದಾರೆಂದು ಆರೋಪದಡಿ ರಕ್ಷಿತ್‌ ಶೆಟ್ಟಿ ಹಾಗೂ ಅವರ ಒಡೆತನದ ಪರಮ್ವ ಸ್ಟುಡಿಯೋಸ್‌ ಮೇಲೆ FIR ದಾಖಲಾಗಿದೆ.

Advertisement

ಗಾಳಿಮಾತು ಮತ್ತು ನ್ಯಾಯ ಎಲ್ಲದೆ ಹಾಡುಗಳನ್ನು ಚಿತ್ರದಲ್ಲಿ ಬಳಸಲು ಈ ಹೆಂದೆಯೇ ನವೀನ್‌ ಕುಮಾರ್‌ ರವರ ಜೊತೆ ಮಾತುಕತೆಯನ್ನು ರಕ್ಷಿತ್‌ ಶೆಟ್ಟಿ ಮತ್ತು ತಂಡ ನೆಡಸಿತ್ತು. ಆದರೆ ಹಲವು ಕಾರಣಕ್ಕಾಗಿ ಈ ಒಪ್ಪಂದ ಮುರಿದು ಬಿದ್ದಿತ್ತು. ನವೀನ್‌ ಕುಮಾರ್‌ ರವರು ಚಲನಚಿತ್ರಗಳ ಹಾಡುಗಳಿಗೆ ಕಾಪಿರೈಟ್ಸ್‌ ಪಡೆದು ಮಾರಾಟ ಮಾಡುತ್ತಿದ್ದರು. ಆದರೆ ಬ್ಯಾಚುಲರ್ಸ್‌ ಸಿನಿಮಾದಲ್ಲಿ ಒಪ್ಪಂದ ಮುರಿದಿದ್ದರೂ ಈ ಎರಡು ಹಾಡುಗಳನ್ನು ಬಳಸಿದ್ದಾರೆ ಎಂದು ನವೀನ್‌ ಕುಮಾರ್‌ ರವರು ರಕ್ಷಿತ್‌ ಶೆಟ್ಟಿ ರವರ ಮೇಲೆ ಯಶವಂತಪುರ ಪೋಲೀಸ್‌ ಠಾಣೆಯಲ್ಲಿ ಎಫ್‌.ಐ.ಆರ್‌ ಮಾಡಿದ್ದಾರೆ.

Advertisement

ನವೀನ್‌ ರವರು ನೀಡಿರುವ FIR ನಲ್ಲಿ ಯಾವುದೇ ಹಕ್ಕು ಪಡೆಯದೆ “ನ್ಯಾಯ ಎಲ್ಲಿದೆ” ಮತ್ತು “ಗಾಳಿಮಾತು” ಹಾಡನ್ನು ಬ್ಯಾಚುಲರ್‌ ಪಾರ್ಟಿ ಚಲನಚಿತ್ರದಲ್ಲಿ ಅನಧಿಕೃತವಾಗಿ ಬಳಕೆ ಮಾಡಿ ನಮ್ಮ ಕಂಪನಿಗೆ ಮೋಸ ಮಾಡಿರುತ್ತಾರೆಂದು ಆರೋಪಿತರ ವಿರುದ್ಧ ಕಾನೂನು ಕ್ರಮಕ್ಕಾಗಿ ದೂರು ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಈ ವಿಷಯದ ರಕ್ಷಿತ್‌ ಶೆಟ್ಟಿ ಹಾಗೂ ಅವರ ತಂಡದಿಂದ ಇನ್ನೂ ಯಾವುದೇ ಪ್ರತಿಕ್ರಿಯೇ ಬಂದಿರುವುದಿಲ್ಲ. ಈ ವಿಷಯದ ಬಗ್ಗೆ ರಕ್ಷಿತ್‌ ಶೆಟ್ಟಿ ರವರ ಪ್ರತಿಕ್ರಿಯೆಗಾಗಿ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Advertisement

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ.

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com